Skip to main content

Posts

Showing posts from 2019
** ----- ಕಾಡಹಾದಿ ----**         ಒಂದು ವಾರದ ಹಿಂದೆ ನಾನು, ಹಮೀದ್ ಹಾಗೂ ರಕ್ಷಿತ್ ಬ್ಯಾಗ್'ಗೆ ನೀರಿನ ಬಾಟಲ್ ನಾಲ್ಕು ಪ್ಯಾಕೆಟ್ ಬಿಸ್ಕೆಟ್'ನ್ನು  ತುಂಬಿಕೊಂಡು ಸೂರ್ಯನ ಪ್ರಖರತೆ ಹೆಚ್ಚಾಗುವ ಮುನ್ನವೇ ಪಶ್ಚಿಮ ಘಟ್ಟದ ಕಾಡೊಳಗೆ ಟ್ರೆಕ್ಕಿಂಗ್ ಎಂಬ ನಾಮದೊಂದಿಗೆ ಹೆಜ್ಜೆ ಹಾಕಿದೆವು. ಮುಗಿಲನ್ನೇ ಚುಂಬಿಸಲು ಹೊರಟಿರುವ ಬೃಹತ್ ಮರಗಳು, ಚಪ್ಪರ ಹಾಕಿದಂತಿರುವ ಮರಗಳ ನಡುವೆ ಹರಸಾಹಸ ಮಾಡಿ ಸೂರ್ಯನ ಕಿರಣಗಳು  ಭುವಿಯನ್ನು ಚುಂಬಿಸುವಾಗ, ಕಾಡೊಳಗೆ ರಂಗೋಲಿಗೆ ಚುಕ್ಕೆ ಇಟ್ಟಂತೆ ಹರಡಿರುವ ಬೆಳಕು. ನಾವಿಡುವ ಪ್ರತಿ ಹೆಜ್ಜೆಯನ್ನು 150ಮೀ. ದೂರದಲ್ಲಿಯೇ ಗುರುತಿಸುವಂತೆ ಹಾದಿ ತುಂಬಾ ತರೆಗೆಲೆಗಳು. ನಾವು ಮಾತಾಡುತ್ತಾ ಕಾಡಿನ ಹಾದಿಯ ಜಾಡು ಹಿಡಿದು ಹೊರಟೆವು. ಮುಂದೆ ಹೋದಂತೆ 2 ದಿನದ ಹಿಂದಷ್ಟೇ ಆನೆ ಬಂದು ಹೋಗಿರುವ ಗುರುತಿಗೆ ಸಹಿ ಹಾಕಿದಂತೆ ಲದ್ದಿ ಹಾಕಿತ್ತು. ಈ ಹಮೀದ್ ಅಲ್ಲಿಂದ ಆನೆಯ ಬಗ್ಗೆ ಮಾತಾಡೋಕೆ ಶುರು ಮಾಡಿದ್ರು. ಯಾಕೆಂದ್ರೆ ನಮ್ಮಲ್ಲಿ ಹೇಳಿಕೊಳ್ಳದಿದ್ದರು ಅವರಿಗೆ ಮನಸ್ಸಿನೊಳಗೆ ಸ್ವಲ್ಪ ಫುಕ್,ಫುಕ್ ಆಗಿತ್ತು ಅನ್ಸುತ್ತೆ. ಯಾಕೆಂದರೆ ದಾರಿಯುದ್ದಕ್ಕೂ ಅದರ ಚೇಷ್ಟೆಗೆ ಸಣ್ಣ ಮರಗಳು ಧರೆಗೆ ಉರುಳಿದ್ದವು. ಮುಂದೆ ಹಾದಿ ಕಡಿದಾಗುತ್ತ ಹೋದಂತೆ ಎರಡ್ಮೂರು ಕಡೆ ದಾರಿಗೆ ಅಡ್ಡಲಾಗಿ ಮಲಗಿದ್ದ ಮರವನ್ನು ದಾಟಿಕೊಂಡು ಹೋದೆವು. ಜಿಗಣೆಗಳ ಬಗ್ಗೆ ಅರಿವಿದ್ದುದ್ದರಿಂದ ಸ್ವಲ್ಪ ತಂಬಾಕು...

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.           ಅರಮನೆಯನ್ನು ನೋಡಿಕೊಳ್ಳುವವರು ನಮ್ಮನ್ನೋಡಿ ವೇಗವಾಗಿ ಧಾವಿಸಿ ನಗುಮೊಗದಿಂದಲೇ ಸ್ವಾಗತಿಸಿದರು. ಅಂದಾ ಹಾಗೆ, ಈ ನಾಲ್ನಾಡು ಅರಮನೆಯ ನಿರ್ಮಾಣದ ಕುರಿತು ಇತಿಹಾಸವನ್ನು ಹುಡುಕುತ್ತ ಹೋದರೆ, ದೊಡ್ಡವೀರ ರಾಜೇಂದ್ರರು ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸೂಕ್ತ ಸ್ಥಳವನ್ನು ಹುಡುಕುತ್ತ ಬಂದಾಗ ಅವರ ಕಣ್ಣಿಗೆ ಬಿದ್ದಿದ್ದು ಈ ಬೆಟ್ಟ ಶ್ರೇಣಿಗಳಿಂದ ಹಾಗೂ ದಟ್ಟವಾದ ಕಾನನದಿಂದ ಸುತ್ತುವರೆದ ಯುವಕಪಾಡಿ ಗ್ರಾಮದಲ್ಲಿರುವ ಈ ಪ್ರದೇಶ. ಈ ಸ್ಥಳದಲ್ಲಿ 1792ರಲ್ಲಿ ಎರಡು ಅಂತಸ್ತಿನ ಸಣ್ಣ ಅರಮನೆಯನ್ನು  ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತೆ. ಅರಮನೆಯನ್ನು ನೋಡಿಕೊಳ್ಳುವವರು, ನಮ್ಮ ಊರಿನ ಬಗ್ಗೆ ಹಾಗೂ ನಮ್ಮ ಪರಿಚಯ ಮಾಡಿಕೊಳ್ಳುತ್ತಾ, ಅರಮನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅರಮನೆಯೊಳಗೆ ಹೆಜ್ಜೆ ಹಾಕಿದರು. ನಾವು ಅವರನ್ನು ಹಿಂಬಾಲಿಸುತ್ತಾ ಮುಖ್ಯ ದ್ವಾರವನ್ನು ದಾಟಿ ಅರಮನೆಯೊಳಗೆ ಹೋದಾಗ ಬಲ ಬದಿಯಲ್ಲಿ ಒಂದು ಮಂಟಪವಿದೆ. ಇವರು ಹೇಳುವ ಪ್ರಕಾರ ಇದು ದೊಡ್ಡವೀರ ರಾಜೇಂದ್ರರ ತಂಗಿಯ ವಿವಾಹ ಮಂಟಪವೆಂದು  ಹೇಳಿದರು. ಆದರೆ ನಾನು ಗೂಗಲ್ನಲ್ಲಿ ಜಾಲಾಡಿದಾಗ ದೊಡ್ಡವೀರ ರಾಜೇಂದ್ರರ ಮದುವೆ ಮಂಟಪವೆಂದು ತಿಳಿದು ಬರುತ್ತದೆ. ಈ ಮಂಟಪಕ್ಕೆ ನಾಲ್ಕು ಪ್ರವೇಶ ದ್ವಾರಗಳಿದ್ದು ಮೇಲ್ಬಾಗದಲ್ಲಿ ನಾಲ್ಕು ದಿಕ್ಕಿಗ...

ತಡಿಯಂಡಮೊಳ್ ಚಾರಣ ಭಾಗ-1

ತಡಿಯಂಡಮೊಳ್ ಚಾರಣ ಭಾಗ -1           ಕಾಲೇಜಿನ ನಡುವೆ ಆದಿತ್ಯವಾರದ ರಜೆಯಲ್ಲಿ ಒಂದೆರಡ್ಮೂರು ಕೆಲಸ ತೆಕ್ಕೆಗೆ ಬಿದ್ದುದರಿಂದ, ಅದು ಇದು ಖರ್ಚು ಅಂತ  ಕೊನೆಗೆ ಕೈಯಲ್ಲಿ 800ರೂ. ಉಳಿದಿತ್ತು. ಇತ್ತ ಎಲ್ಲಿಯೂ ಸುತ್ತಡದೆ ತುಂಬಾ ದಿನನು ಆಗಿತ್ತು. ಕೆಲವರಲ್ಲಿ ಎಲ್ಲಿಗಾದರು ಹೋಗೋಣವೇ ಎಂದು ಕೇಳಿದ್ದೆ, ಆದರೆ ಯಾರೂ ಕೂಡ ಹೊರಡಲು ತಯಾರಿರಲಿಲ್ಲ. ಕಳೆದ ಅಂತಿಮ ವರ್ಷದ ಸೀನಿಯರ್ ಪ್ರದೀಪ್'ರವರಲ್ಲಿ ಕೇಳಿದಾಗ ಕುಮಾರ ಪರ್ವತಕ್ಕೆ ಹೋಗುವುದರ ಬಗ್ಗೆ ಉತ್ಸಾಹ ತೋರಿದ್ದರು. ಕೊನೆಯ ಘಳಿಗೆಯಲ್ಲಿ ಕುಮಾರ ಪರ್ವತ ಬೇಡ " ಹೇಗೂ ಒಮ್ಮೆ ಹೋಗಿದ್ದೇವೆ, ತಡಿಯಂಡಮೋಳ್'ಗೆ ಹೋಗೋಣ" ಎಂದು ಹೇಳಿದ್ದೆ. ತಡಿಯಂಡಮೊಳ್'ನ ಕುರಿತು ಗೂಗಲ್ನಲ್ಲಿ ಹುಡುಕಾಡಿದಾಗ ನಾಲ್ನಾಡು ಅರಮನೆಯ ಬಗ್ಗೆ ಮಾಹಿತಿ ಸಿಕ್ಕಿತು. ಹಾಗೇನೆ ತಡಿಯಂಡಮೊಳ್'ಗೆ ಹೋಗಲು ಸೆಪ್ಟೆಂಬರ್ 27ಕ್ಕೆ ಫಿಕ್ಸ್ ಮಾಡಿದೇವು. ಅಂತೆಯೇ ಸೆಪ್ಟೆಂಬರ್ 27 ಶನಿವಾರದಂದು ಹೋಗಬೇಕಿತ್ತು. ಆದರೆ ಅದರ ಹಿಂದಿನ ದಿನ ನಾನು 5000mtr ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರಿಂದ ನನ್ನ ಕಾಲು ಒಂದು ದಿನದ ಬಿಡುವನ್ನು "ದಮ್ಮಯ್ಯ" ಎಂಬಂತೆ ಕೇಳುತ್ತಿತ್ತು. ಕೊನೆಗೆ  ಸೋಮವಾರ ಕಾಲೇಜಿಗೆ ರಜೆ ಹಾಕುವುದೆಂದು ನಿರ್ಣಯಿಸಿ, 28ಕ್ಕೆ ಆದಿತ್ಯವಾರ ಹೊರಡಲು ಸಿದ್ದರಾದೆವು. ಮನೆಯಲ್ಲಿ ಮಡಿಕೇರಿಗೆ ಹೋಗುವುದರ ಬಗ್ಗೆ ತಿಳಿಸಿ ಹೇಳಿದೆ, ಅದಕ್ಕೆ ಒಂದಷ್ಟು ಬೈಗುಳ, ಜಾಗರೂಕತೆ ಪಾಠ, ...

ಹಾಸ್ಟೆಲ್ ನೆನಪು

ಹಾಸ್ಟೆಲ್ ನೆನಪು... ಗದ್ದೆ, ತೋಟ, ಕಾಡು, ಹಳ್ಳ, ನಾಯಿ, ದನ ಆಟ ಅಂತ ತಿರುಗಾಡುತ್ತಿದ್ದ ಕಾಲದಲ್ಲಿ 6ನೇ ತರಗತಿಗೆ, ನನ್ನನ್ನು ಹಾಸ್ಟೆಲ್'ಗೆ ಎತ್ತಾಕಿದ್ರು, ಮಳೆಗಾಲ ಬೇರೆ, ಕಾರ್ಮೋಡ ಕವಿದಾಗ ಮನೆ, ಮನೆಯವರನ್ನೆಲ್ಲ ನೆನೆದುಕೊಂಡಾಗ ಮನಸ್ಸಲ್ಲಿ ಬೇಡ ಅಂದ್ರು, ಕಣ್ಣಂಚಿನಲ್ಲಿ ನೀರು ಬರುತ್ತಿತ್ತು. ನಮ್ಮನ್ನು ಸಮಾಧಾನ ಮಾಡಲು 7, 8ನೇ ತರಗತಿಯವರು "ಲೋ ಯಾಕೋ ಅಳ್ತಿಯಾ, ನಾವೆಲ್ಲ ಇಲ್ವಾ ಇಲ್ಲಿ, ಎಲ್ಲ ಸರಿಯಾಗುತ್ತೆ ಇನ್ನೊಂದೆರಡು ತಿಂಗಳು ಅಷ್ಟೇ" ಎಂದು ಹೇಳುತ್ತ ಸಮಾಧಾನ ಮಾಡುತ್ತಿದ್ದರು. ನನಗಂತೂ ಈ ಹಾಸ್ಟೇಲ್ ಜೀವನ Ristrict ನ ಒಳಗೆ ಬದುಕಬೇಕಾದ್ದರಿಂದ ಜೈಲ್'ನಲ್ಲಿ ಹಾಕಿದಂತಾಗಿತ್ತು. ಇದಕ್ಕೆಲ್ಲ ಕುಮ್ಮಕ್ಕು ಕೊಡುವಂತೆ 9,10ನೆಯವರ ಹವಾ ಬೇರೆ ಕೇಡು!. ಒಂದು ವರ್ಷ ಹೇಗೋ ತೆಪ್ಪಾಗೆನೆ ಕಳೆದುಹೋಯಿತು. 7ನೇ ತರಗತಿಗೆ ಬಂದಾಗ ಹಾಸ್ಟೆಲ್ ಸಿಬ್ಬಂದಿಯ ಕಣ್ತಪ್ಪಿಸಿ ಒಂದು ಚಾಕ್ಲೆಟ್'ನ ಆಸೆಗೆ ಕದ್ದು ಅಂಗಡಿಗೆ ಹೋಗಲು ದೈರ್ಯವಿಲ್ಲದವರಿಗೆ ತಿಂಡಿ supply ಮಾಡೋದು. ಹೀಗೆ ಮೆಲ್ಲನೆ ಧೈರ್ಯ ಅನ್ನೋದು ಚಿಗುರಿತು. ಈಗೇನೆ ಮಳೆಗಾಲದ ಸಮಯ mostly ಆಟಿ(ಆಷಾಢ) ತಿಂಗಳು ಅನಿಸುತ್ತೆ, ಹಾಸ್ಟೆಲ್ನಲ್ಲಿ ಹೊಟ್ಟೆ ತಣ್ಣಗಾಗುವಷ್ಟು ಎಲ್ಲ ಸೌಕರ್ಯವಿದ್ದರು ಮತ್ತಿನ್ನೇನೋಬೇಕೆಂಬ ಹಂಬಲ. ಅಂತೆಯೇ ರವಿವಾರದ ಬೆಳಗ್ಗಿನ ಗಂಜಿ ಊಟ ಮುಗಿಸಿ ನಮ್ಮ ಮೇಲಿನ ಮಹಡಿಯಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಹನಿಗಳನ್ನೇ ನೋಡು...

ಸಂಸೆ ಟ್ರಾವೆಲ್ ಸ್ಟೋರಿ... ಬಲ್ಲಾಳರಾಯನದುರ್ಗ ಕೋಟೆ.

             ಒಂದು ದಿನದ ಹಿಂದೆಯಷ್ಟೇ ಸೆಮ್ ಎಕ್ಸಾಮ್'ಗಳೆಲ್ಲ ಮುಗಿದಿತ್ತು. ಮರುದಿನ ಲೈಬ್ರೆರಿಯಾ  ಪುಸ್ತಕಗಳನ್ನು ಕೊಡಲು ಕಾಲೇಜುಗೆ ಹೋಗಿದ್ದೆ. ಅಲ್ಲಿಗೆ ಮೋಹನ್ ಕೂಡ ಅವನ ಬೈಕ್'ನಲ್ಲಿ ಬಂದ. ಹಿಂದಿನ ದಿನವೇ ದಿಡುಪೆಗೆ ಒಂದು ರೌಂಡ್ ಬೈಕ್ನಲ್ಲಿ ಹೋಗಿ ಬರೋಣ, ಎಂದು ಅಂತಿಮ ವರ್ಷದ ಹಮೀದ್'ರವರು ಗೌಡ್ರಂತೆ ಕಿವಿ ಮಾತು ಹೇಳಿದ್ರು. ಜೊತೆಗೆ ಮೋಹನ ಕೂಡ ಹೋಗುವ ಬಗ್ಗೆ ಉತ್ಸಾಹ ತೋರಿದ್ದ. ಆದರೆ ನಾನು ಅಷ್ಟೊಂದು ಉತ್ಸಾಹ ತೋರಿರಲಿಲ್ಲ. ಯಾಕೆಂದರೆ ನಮ್ಮ ಮೋಹನ ಇದ್ದನಲ್ಲ, ಅವ ಪ್ಲಾನ್ ಹಾಕುವಾಗ ಬರುತ್ತೇನೆ ಅಂದ್ರೆ  ಹೊರಡುವ ದಿನ ಏನಾದ್ರು ಸಮಸ್ಯೆ ಹೇಳಿ ನಿರಾಸೆ ಮೂಡಿಸುವುದೆಂದರೆ ಅವನಿಗೆ ಪುಣ್ಯದ ಕೆಲಸ!! ಅಷ್ಟೋತ್ತಿಗೆ ಹಮೀದ್ ಕರೆ ಮಾಡಿ "ಬೆಳ್ತಂಗಡಿಯಲ್ಲಿ ಹಾಜರಿಯಾಗಿದ್ದೇನೆ" ಎಂದರು. ಇತ್ತೀಚಿಗೆ ರಸ್ತೆಯ ತಿರುವುಗಳೆಲ್ಲ ಪೊಲೀಸರ ತಾಣವೇ ಆಗಿದುದ್ದರಿಂದ ಹೆಲ್ಮೆಟ್ ಇಲ್ಲದ ಬೈಕ್ ಸವಾರಿ ಕಳ್ಳ ಬೆಕ್ಕಿನಂತೆ ಹೋಗುವ ಆಗೆ ಆಗಿತ್ತು. ಅದಕ್ಕೆ ಮೋಹನನಿಗೆ "ಒಂದು ಹೆಲ್ಮೆಟ್ ತೆಗೆದುಕೋ" ಎಂದು ಕಿವಿಮಾತು ಹೇಳಿದೆ. ಎರಡು ಬೈಕ್'ನಲ್ಲಿ ನಾಲ್ಕು ಜನ ಭರ್ತಿಯಾಗ್ಬೇಕಲ್ವಾ, ಅದ್ಕೆ ನಮ್ಮ ತರಗತಿಯ Rep ಜಯರಾಮ ಸಿಕ್ಕಿದ, "ಬಾ ಮಾರಯಾ ಹೋ ಅಲ್ಲಿವರೆಗೆ ಬೈಕ್ನಲ್ಲಿ ಹೋಗ್ಬರೋಣ" ಎಂದು ಹೇಳಿದೆ. ನಾನು ಹಮೀದ್'ರವರ ಬೈಕ್'ನಲ್ಲಿ ಜಯರಾಮ ಮೋಹನನ ಬೈಕ್ ನಲ್ಲಿ ಹೊರಟೆವು. ...

ಕುಮಾರಪರ್ವತ ಚಾರಣ

           ನಮ್ಮ ತರಗತಿಯ ಕೆಲವು ಸ್ನೇಹಿತರಲ್ಲಿ ಕುಮಾರ ಪರ್ವತಕ್ಕೆ ಚಾರಣ ಹೋಗುವ ಬಗ್ಗೆ ಒಂದೆರಡು ಸಲ ಮಾತಾಡಿಯಾಗಿತ್ತು, ಪ್ಲಾನ್ ಮಾಡಿ ಚಾರಣಕ್ಕೆ ಹೋಗಲು ದಿನಾಂಕ ಕೂಡ ನಿಗದಿಪಡಿಸಿಯಾಗಿತ್ತು. ಆದರೆ ಚಾರಣಕ್ಕೆ ಹೋಗುವ ದಿನ ಹತ್ತಿರವಾದಂತೆ ಒಬ್ಬಬ್ಬೊಬ್ಬರು ಒಂದೊಂದು ಕುಂಟು ನೆಪ ಹೇಳಿ ಜಾರಿಕೊಂಡರು. ಕೊನೆಗೆ ಆ ಪ್ಲಾನ್'ನ್ನು ಅಲ್ಲೇ ಬಿಡಬೇಕಾಯಿತು. ಮೊನ್ನೆಯೊಂದು ದಿನ NCCಯಲ್ಲಿ ಪರಿಚಯವಾದ ಸೀನಿಯರ್ ಗಳಿಬ್ಬರು ಬಂದು, ಕುಮಾರ ಪರ್ವತಕ್ಕೆ ಹೋಗುವ ಬಗ್ಗೆ ಆಸಕ್ತಿ ಹೇಳಿಕೊಂಡರು. ರೋಗಿ ಬಯಸಿದ್ದು ಹಾಲನ್ನು ವೈದ್ಯರು ನೀಡಿದ್ದು ಹಾಲನ್ನೇ ಎಂಬಂತೆ ನನಗೆ ಬಹಳ ಖುಷಿಯಾಯಿತು. ಅಂತೆಯೇ ಸಡನ್ಆಗಿ ಪ್ಲಾನ್ ಮಾಡಿ ಶನಿವಾರ ಹೋಗುವುದೆಂದು  ಮೂವರು ಸೇರಿ ತೀರ್ಮಾನಿಸಿದೆವು. ಹೋ ನಿಮಿಗೆಲ್ಲ ನನ್ನ ಸೀನಿಯರ್'ಗಳೆಂದರೆ ಯಾರಂತ ಗೊತ್ತಿಲ್ಲ ಅಲ್ವಾ!? ಹಾಗದ್ರೆ ಕೇಳಿ, ಒಬ್ರು ಅಂತಿಮ ಬಿ.ಎ. ಯಾ ಕುಸುಮಧರ್ ಹಾಗೂ ಇನ್ನೊಬ್ರು ಅಂತಿಮ ವರ್ಷ ಬಿ.ಕಾಂ. ನ  ಪ್ರದೀಪ್.          ಒಂದು ದಿನ ಉಳಿದುಕೊಳ್ಳಲು ಬೇಕಾಗುವಷ್ಟು ಬಟ್ಟೆ ಬರೆಗಳನ್ನು ಬ್ಯಾಗ್'ನಲ್ಲಿ ತುಂಬಿಸಿ, ಶನಿವಾರ ಒಂದು ದಿನ  ಕಾಲೇಜುಗೆ ರಜೆ ಹಾಕಿ ಸುಬ್ರಹ್ಮಣ್ಯದತ್ತ ಪಯಣ ಬೆಳೆಸಿದೆವು. ಸುಬ್ರಹ್ಮಣ್ಯಕ್ಕೆ ಸುಮಾರು11:00ಗಂಟೆಗೆ ತಲುಪಿದೆವು.  ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒ...