ಒಂದು ದಿನದ ಹಿಂದೆಯಷ್ಟೇ ಸೆಮ್ ಎಕ್ಸಾಮ್'ಗಳೆಲ್ಲ ಮುಗಿದಿತ್ತು. ಮರುದಿನ ಲೈಬ್ರೆರಿಯಾ ಪುಸ್ತಕಗಳನ್ನು ಕೊಡಲು ಕಾಲೇಜುಗೆ ಹೋಗಿದ್ದೆ. ಅಲ್ಲಿಗೆ ಮೋಹನ್ ಕೂಡ ಅವನ ಬೈಕ್'ನಲ್ಲಿ ಬಂದ. ಹಿಂದಿನ ದಿನವೇ ದಿಡುಪೆಗೆ ಒಂದು ರೌಂಡ್ ಬೈಕ್ನಲ್ಲಿ ಹೋಗಿ ಬರೋಣ, ಎಂದು ಅಂತಿಮ ವರ್ಷದ ಹಮೀದ್'ರವರು ಗೌಡ್ರಂತೆ ಕಿವಿ ಮಾತು ಹೇಳಿದ್ರು.
ಜೊತೆಗೆ ಮೋಹನ ಕೂಡ ಹೋಗುವ ಬಗ್ಗೆ ಉತ್ಸಾಹ
ತೋರಿದ್ದ. ಆದರೆ ನಾನು ಅಷ್ಟೊಂದು ಉತ್ಸಾಹ ತೋರಿರಲಿಲ್ಲ.
ಯಾಕೆಂದರೆ ನಮ್ಮ ಮೋಹನ ಇದ್ದನಲ್ಲ, ಅವ ಪ್ಲಾನ್ ಹಾಕುವಾಗ ಬರುತ್ತೇನೆ ಅಂದ್ರೆ ಹೊರಡುವ ದಿನ ಏನಾದ್ರು ಸಮಸ್ಯೆ ಹೇಳಿ ನಿರಾಸೆ ಮೂಡಿಸುವುದೆಂದರೆ ಅವನಿಗೆ ಪುಣ್ಯದ ಕೆಲಸ!!
ಅಷ್ಟೋತ್ತಿಗೆ ಹಮೀದ್ ಕರೆ ಮಾಡಿ "ಬೆಳ್ತಂಗಡಿಯಲ್ಲಿ ಹಾಜರಿಯಾಗಿದ್ದೇನೆ" ಎಂದರು.
ಇತ್ತೀಚಿಗೆ ರಸ್ತೆಯ ತಿರುವುಗಳೆಲ್ಲ ಪೊಲೀಸರ ತಾಣವೇ ಆಗಿದುದ್ದರಿಂದ ಹೆಲ್ಮೆಟ್ ಇಲ್ಲದ ಬೈಕ್ ಸವಾರಿ ಕಳ್ಳ ಬೆಕ್ಕಿನಂತೆ ಹೋಗುವ ಆಗೆ ಆಗಿತ್ತು.
ಅದಕ್ಕೆ ಮೋಹನನಿಗೆ "ಒಂದು ಹೆಲ್ಮೆಟ್ ತೆಗೆದುಕೋ" ಎಂದು ಕಿವಿಮಾತು ಹೇಳಿದೆ. ಎರಡು ಬೈಕ್'ನಲ್ಲಿ ನಾಲ್ಕು ಜನ ಭರ್ತಿಯಾಗ್ಬೇಕಲ್ವಾ, ಅದ್ಕೆ ನಮ್ಮ ತರಗತಿಯ Rep ಜಯರಾಮ ಸಿಕ್ಕಿದ, "ಬಾ ಮಾರಯಾ ಹೋ ಅಲ್ಲಿವರೆಗೆ ಬೈಕ್ನಲ್ಲಿ ಹೋಗ್ಬರೋಣ" ಎಂದು ಹೇಳಿದೆ.
ನಾನು ಹಮೀದ್'ರವರ ಬೈಕ್'ನಲ್ಲಿ ಜಯರಾಮ ಮೋಹನನ ಬೈಕ್ ನಲ್ಲಿ ಹೊರಟೆವು.
ನಾನು ಮತ್ತೆ ಹಮೀದ್ ಸ್ವಲ್ಪ ವೇಗವಾಗಿ ಮುಂದೆ ಬಂದೆವು. ಉಜಿರೆಯಿಂದ ಮುಂದೆ ಸಾಗಿದಾಗ ಪೊಲೀಸ್ ರವರು ನಮ್ಮನ್ನು ಸ್ವಾಗತಿಸಿದರು.
ನಾನು ತಕ್ಷಣ ಮೋಹನನಿಗೆ ಕಾಲ್ ಮಾಡಿದೆ. ಮೋಹನನಲ್ಲಿ ಬೈಕ್'ನ ಎಲ್ಲ ದಾಖಲೆಗಳು ಇದ್ದರು ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ನನ್ನಲ್ಲಿ ಡ್ರೈವಿನ್ ಲೈಸೆನ್ಸ್ ಇತ್ತು ಆದ್ರೆ ಏನ್ಮಾಡೋದು?
ಅದಕ್ಕೆ ಅವರನ್ನು ಬೇರೊಂದು ರೂಟ್'ನಲ್ಲಿ ದಿಡುಪೆಗೆ
ಬರಲು ಹೇಳಿದೆ.
ಮರದ ನೆರಳಿನಲ್ಲಿ ನಿಲ್ಲಿಸಿಕೊಂಡು, ತಣ್ಣಗೆ ವಾಹನಗಳ Document ಗಳನ್ನು ಪೊಲೀಸರು ಪರಿಶೀಲಿಸುತ್ತಿದರು.
ಹಮೀದ್'ರವರ ಬೈಕ್ ನ ಎಲ್ಲ ದಾಖಲಾತಿಗಳು ಕ್ಲಿಯರ್ ಇರೋದರಿಂದ ಗಲಿಬಿಲಿಗೊಳ್ಳದೆ ಪೊಲೀಸ್ ಗೆ ತೋರಿಸಿ ಬಂದ್ರು.
ಅಲ್ಲಿಂದ ಸೀದಾ ದಿಡುಪೆಯ ಕಡೆಗೆ ಹೊರಟೆವು. ಒಂದಷ್ಟು ಕಾಲೇಜು, ಮುಂದಿನ ಉದ್ಯೋಗ ಲೈಫ್ ಈಗೆ ಮಾತಾಡುತ್ತಾ ಬಂದೇವು.
ದಾರಿ ಮದ್ಯೆ ಒಮ್ಮೆಲೇ ಬೈಕ್ ನಿಲ್ಲಿಸಿದ ಹಮೀದ್
"ಇಳಿಯೋ ಕೆಳಗೆ" ಅಂದ್ಬಿಟ್ರು.!!
ಅಯ್ಯೋ!! ಈ ಮನುಷ್ಯ ಈಗಷ್ಟೇ ಸರಿ ಇತ್ತಲ್ಲಾ ತಕ್ಷಣಕ್ಕೆ ಏನಾಯ್ತುಪ್ಪಾ ಅನ್ಕೊಂಡೆ,!?
"ತಗೋ ಗಾಡಿ ಓಡಿಸು" ಅಂದ್ಬಿಟ್ರು.
ಅಯ್ಯೋ ಶಿವ್ನೆ ಅದೇಗೆ ನನ್ನ ತಲೆಯಲ್ಲಿ ಕೊರಗುತ್ತಿದ್ದ ವೇದನೆ ಅವರ ತಲೆಗೆ ಹೊಯ್ತೋ, ಆ ದೇವ್ರೇ ಬಲ್ಲ!!
ಕೊಲ್ಲಿ ಹತ್ತಿರ ಮೋಹನ join ಆಗುವ
ರೂಟ್'ನಲ್ಲಿ ಬೈಕ್ ನಿಲ್ಲಿಸಿದೆ.
ಅಲ್ಲೇ ಒಂದು ಚಂದದ ಪ್ರಕೃತಿಯ ಸೊಬಗು ಕಾಣಿಸುತ್ತದೆ. ವರ್ಣಿಸಲು ಅಸಾಧ್ಯವಾದ ಸೊಬಗು ಆ ಸ್ಥಳದ್ದು,
ಅಲ್ಲಿಯೇ ಹತ್ತಿರದಲ್ಲೇ ಕೊಲ್ಲಿಯ ಸೂರ್ಯ ಚಂದ್ರ ಕಂಬಳ ನಡೆಯುವ ಗದ್ದೆನು ಇದೆ.
ಅಲ್ಲಿ ಒಂದಷ್ಟು ಫೋಟೋ ತೆಗೆಯುತ್ತಿದೆ. ಅಷ್ಟೋತ್ತಿಗೆ ತಡವಾಯಿತೆಂದು ಈ ಮೂವರು ಬೈಯ್ಯೊಕೆ ಶುರು ಮಾಡಿದ್ರು. ಏನ್ಮಾಡೋದು ಸುಮ್ನೆ ಕೇಳಿಸಿಕೊಂಡೇ. ಹಳೆಯ PM ಥರ ಏನು ಮಾತಡ್ಲಿಲ್ಲ. ಹೊರಡುವಾಗ ಲೇಟ್ ಮಾಡಿದ್ದೆ ಈ ಮೂವರು ಆದ್ರೆ ಉಪದೇಶ ಮಾತ್ರ ನಂಗೆ ನೀಡುತ್ತಿದ್ದರು.
ಅಲ್ಲಿಂದ 12ಗಂಟೆಗೆ ದಿಡುಪೆಗೆ ತಲುಪಿದ್ವಿ.
ಅಷ್ಟೋತ್ತಿಗೆ ಹಮೀದ್ ರವರು ಹೇಳಿದ್ರು "ಸಂಸೆಗೆ ಹೋಗುವ ಇಲ್ಲಿಂದ ಖಾಲಿ 6ಕಿಲೋಮೀಟರ್ ಅಷ್ಟೇ ಇರೋದು" ಅಂತ. ಸಂಸೆಗೆ ಹೇಗೆ ಹೋಗೋದು ಅಂತ ಅಲ್ಲೇ ಒಂದಿಬ್ಬರಲ್ಲಿ ಕೇಳಿಕೊಂಡು ಹೋದೇವು. ಹಮೀದ್ ರವರು "ಇನ್ನು offRoad ನಾನು ಓಡಿಸುತ್ತೇನೆ" ಅಂದ್ರು.
ಹಮೀದ್ ರವರ ಬೈಕ್ ನ ಹಿಂದೆಯೇ ಮೋಹನ ಕೂಡ ಹೊದ.. ನಮ್ಮ ಮೋಹನ ಫುಲ್ ಶಾಕ್..!!
ಮೊದಲ ಗೇರ್'ನಲ್ಲೇ ಬೈಕ್ ಆಫ್ ಆಯಿತು. ಯಾಕೆಂದ್ರೆ ಅಕಾಶಕ್ಕೇನೆ ದಾರಿ ಮಾಡಿದಂತಿರುವ ಏರುರಸ್ತೆ. ರಸ್ತೆ ತುಂಬಾ ponds ಪೌಡರ್ ಚೆಲ್ಲಿದಂತಿರುವ ಮಣ್ಣು , ಜೊತೆಗೆ ರಸ್ತೆ ತುಂಬಾ ಕಲ್ಲುಗಳು. ಇದನ್ನು ನೋಡಿ ರಸ್ತೆ ಅನ್ಬೇಕೋ ಅಥವಾ ಕಲ್ಲಿನ ಕ್ವಾರೆ ಅನ್ಬೇಕೋ ತಿಳಿಯದಾಯಿತು. ಈ ದಾರಿಯಲ್ಲಿ ಬೈಕ್ ಓಡಿಸ್ಬೇಕಂದ್ರೆ ಎದೆ ಸ್ವಲ್ಪ ಗಟ್ಟಿ ಇರಲೇಬೇಕು. ನಮ್ಮ ಮೋಹನ ಒಂದಷ್ಟು ದುಡಿದು, ಅಲ್ಲಿ ಇಲ್ಲಿ, ಅಲ್ಪ ಸ್ವಲ್ಪ, ಗಂಡಗುಂಡಿ ಮಾಡಿ ಒಂದು ಲೈಫ್ ಪಾರ್ಟ್ನಾರ್
ಏ..ಥೋ.. ರೈಡಿಂಗ್ ಪಾರ್ಟ್ನಾರ್,ಒಂದು ಲೀಟರ್ ಪೆಟ್ರೋಲ್'ನಲ್ಲಿ ಅದಮ್ಯ ದೂರ ಚಲಿಸುವ ಬಜಾಜ್ ಪ್ಲಾಟಿನಂ ಖರೀದಿಸಿದ್ದ. ಜೊತೆಗೆ ಇತ್ತೀಚಿಗೆಯಷ್ಟೇ ಬೈಕ್ ರೈಡ್ ಕಲಿತ್ತಿದ್ದರಿಂದ, ಈ ರಸ್ತೆ ಅವನಿಗೆ ನುಂಗಲಾರದ ಬಿಸಿ ತುಪ್ಪದಂತಾಯಿತು. ಬ್ರೇಕ್ ಬಿಟ್ರೆ ಹಿಂದೆ ಚಲಿಸುತ್ತಿತ್ತು,, ಬ್ರೇಕ್ ಹಾಗೂ ಆಕ್ಸಿಲೇಟರ್'ನ್ನು ಬ್ಯಾಲೆನ್ಸ್ ಮಾಡುವಲ್ಲಿ ಸ್ವಲ್ಪ ಎಡವುತ್ತಿದ್ದರಿಂದ, "ನಂಗಾಗಲ್ಲ" ಅಂದ್ಬಿಟ್ಟ.
ನಮ್ಮಂತವರು ಅದಕ್ಕಂತಲೇ ಕಾದಿರ್ತ್ತೇವೆ.!!
ಇನ್ನು ರೈಡಿಂಗ್'ನಲ್ಲಿ ನಮ್ಮ ಸರದಿ. ಹಮೀದ್ ಹಾಗೂ ಜಯರಾಮ ಹೇಗೋ ಮುಂದೆ ಸಾಗಿದ್ದರು.
ಮೋಹನ ಹಾಗೂ ನಾನು ಅವರ ಹಿಂದೇನೆ ಹೋದೆವು.
ಈ ಪ್ಲಾಟಿನಂ ಬೈಕ್'ನ ಹಣೆಬರ, ಏರು ರಸ್ತೆಯಲ್ಲಿ
ಮುಂದಿನ ಚಕ್ರಕ್ಕೆ ಕಲ್ಲು ಸಿಕ್ಕಿದ ತಕ್ಷಣ ಬೈಕ್ ತಲೆ ಎತ್ತುತ್ತಿತು.
ಜೊತೆಗೆ ಮೊದಲ ಗೇರ್'ನಲ್ಲಿ ಅರಚಟಾದ ಜೊತೆಗೆ ಬೈಕ್ ಆಫ್ ಆಗೋದು. "ಅಬ್ಬಾ.. ಈ ಪ್ಲಾಟಿನಂ ಬೈಕ್'ನ ಸವಾಸಲ್ಲ'ಎಂಬಂತೆ ಅನಿಸಿತು. ಈ ಬೈಕ್ ಕೊಂಡು ಕೊಂಡಿದಕ್ಕೆ ಮೋಹನನಿಗೆ ಬಯ್ಯೋಣವೆನಿಸಿದರು, ನನ್ನತ್ರ ಅಷ್ಟು ಇಲ್ಲ!! ಯಾಕೆ ಸುಮ್ನೆ ರಿಸ್ಕ್ ಎಂದು ಸುಮ್ನಾದೆ. ಹೇಗೋ ಒಂದು ಹಂತಕ್ಕೆ ತಲುಪಿದ್ವಿ.
ಅಷ್ಟೋತ್ತಿಗೆ ಬಾಯಾರಿಕೆ ಕೂಡ ಆಗತೊಡಕಿತು. ರಸ್ತೆಯುದ್ದಕ್ಕೂ ಚಪ್ಪರ ಹಾಕಿದಂತಿರುವ ಮರಗಳ ನಡುವೆಯೂ ಬೆವರಿಳಿಸುವ ತಾಪವಿತ್ತು.
ನೀರು ಕುಡಿಯೋಣ ಅಂದ್ರೆ ಯಾರೊಬ್ಬರೂ ಕೂಡ ನೀರು ತಂದಿರಲಿಲ್ಲ. ಸ್ವಲ್ಪ ಮುಂದೆ ಸಾಗಿದರೆ ಇಲ್ಲೇ ಎಲ್ಲಾದ್ರೂ ನೀರು ಸಿಗಬಹುದೇನೋ ಅಂದುಕೊಂಡು ಬಂದೆವು. ಕೊನೆಗೂ ಒರತೆ ನೀರು ಸಿಕ್ಕಿತು. ಗಂಟಲು ಒಣಗಿದ ದೇಹಕ್ಕೆ ತಿಳಿಯದ ನೀರನ್ನು ಕುಡಿದಾಗ ಅಮೃತ ಕುಡಿದ ಆಗೆ ಆಯಿತು.
ಅಲ್ಲಿಂದ ಸೀದಾ ಹೊರಟೆವು. ನಂತರ ಎರಡು ಕಿಲೋಮೀಟರ್ ಮಣ್ಣಿನ ರಸ್ತೆಯದರು ರೈಡಿಂಗ್ ಗೆ ತುಂಬಾ ಅನುಕೂಲಕರವಾಗಿತ್ತು. ಮುಂದೆ ಸಾಗಿದಂತೆ ತೋಟ ಹಾಗೂ ಒಂದೆರಡು ಮನೆ ಕಾಣಿಸಿತು. ಅಷ್ಟೋತ್ತಿಗೆ ಇದೆ ರಸ್ತೆಗೆ ಸೇರುವ ಎಡ ಕಡೆಯಿಂದ ನಮ್ಮದೇ ವಯಸ್ಸಿನ ಹುಡುಗನೊಬ್ಬ ಡ್ರಿಮ್ ಯುಗ ಬೈಕ್ನನ್ನು ಹಾರಿಸಿಕೊಂಡು ಬಂದ.!!
ನಿಲ್ಲಿಸುತ್ತಾನೋ, ಇಲ್ವೋ ಎಂಬ ಗೊಂದಲದಲ್ಲಿಯೇ ಹಮೀದ್ ರವರು ಮೆಲ್ಲಗೆ ಕೈ ಸನ್ನೆಯಿಂದ ನಿಲ್ಲಿಸುವಂತೆ ಸೂಚಿಸಿದರು. ಕೊನೆಗೂ ಬೈಕ್ನ ವೇಗವನ್ನು ತಗ್ಗಿಸಿದ.
ನೇತ್ರಾವತಿ ನದಿಯ ಉಗಮ ಸ್ಥಳಕ್ಕೆ ಇಲ್ಲಿಂದ ಎಷ್ಟು ದೂರವಿದೆ ಎಂದು ಕೇಳಿದೆವು. ಅದ್ಕೆ ಅವ ''ಅಲ್ಲಿಗೆ ಬೈಕ್ನಲ್ಲಿ ಹೋಗೋದು ಸ್ವಲ್ಪ ಕಷ್ಟ, ಇನ್ನು ಸ್ವಲ್ಪ ದೂರ ಇದೆ" ಎಂದು ಹೇಳಿದ.
ಜಯರಾಮ ಇನ್ನು ಸಾಕು ವಾಪಸ್ ಹೋಗೋಣ ಎಂದ.
ನನಗೆ ಬಂದ ದಾರಿಯಲ್ಲಿಯೆ ವಾಪಸ್ ಹೋಗೋದು ಇಷ್ಟ ಇರಲಿಲ್ಲ, ಇಲ್ಲಿವರೆಗೆ ಬಂದಿದ್ದೇವೆ. ಇನ್ನು ಸ್ವಲ್ಪ ಮುಂದೆ ಸಾಗಿದ್ರೆ ಯಾವುದಾದರೂ ಚಂದದ ಸ್ಥಳ ನೋಡಬಹುದೆಂಬ ಕಾತರ. ಜೊತೆಗೆ ಬೈಕ್'ನ ಹ್ಯಾಂಡಲ್ ನನ್ನ ಕೈಯ್ಯಲ್ಲಿ ಇದ್ದುದರಿಂದ ಇನ್ನು ಸ್ವಲ್ಪ ದೂರ ಎಲ್ಲಾದ್ರೂ ಹೋಗೋಣ ಎಂದು ನನ್ನ ಮನಸ್ಸು ಕೂಡ ಹೇಳುತ್ತಿತ್ತು. ಹಾಗೇನೇ ವಾಪಸ್ ಹೋಗೋದು ಅಂದ್ರೆ ಸ್ವಲ್ಪ ಕಷ್ಟನು ಇದೆ, ಯಾಕೆಂದ್ರೆ ಸಂಸೆ ಇಳಿಜಾರಿನಲ್ಲಿ ಬೈಕ್ ಇಳಿಸಿಕೊಂಡು ಹೋಗೋದು ಸುಲಭದ ಮಾತಲ್ಲ.
ಸ್ವಲ್ಪ ಎಡವಿದರು, ಕೆಲವೊಂದು ಕಡೆ ಅಪಾಯ ತಪ್ಪಿದ್ದಲ್ಲ.
ಹೇಗೋ ಜಯರಾಮನನ್ನು ಸಂಬಾಳಿಸಿ ಹಮೀದ್'ರವರು ಬಲ್ಲಾಳರಾಯನದುರ್ಗ ಕೋಟೆಗೆ ಹೋಗೋಣ ಎಂದರು.
ಎಲ್ರು ಸರಿ ಅಂದಾಗ, ಕಳಸದ ದಾರಿ ಹಿಡಿದೆವು. ಮೂರ್ನಾಲ್ಕು ಕಿಲೋಮೀಟರ್ ಕುದುರೆಮುಖಕ್ಕೆ ಹೋಗುವ ರಸ್ತೆಯಲ್ಲಿ ಮುಂದೆ ಸಾಗಿದಾಗ ಚಹಾದ ತೋಟ ಹಾಗೂ ಗಣಪತಿ ದೇವಸ್ಥಾನ ಸಿಗುತ್ತದೆ. ಅಲ್ಲಿ ಸ್ವಲ್ಪ ಹೊತ್ತು ಇದ್ದು ಒಂದೆರಡು ಪಟ ಕ್ಲಿಕ್ಕಿಸಿ ನಂತರ ಕಳಸದತ್ತ ಸಾಗಿದೆವು.
ಕಳಸದ ಸಸ್ಯಾಹಾರಿ ಹೋಟೆಲೊಂದರಲ್ಲಿ ಚಂದದ ಊಟ ಮಾಡಿ ಬಲ್ಲಾಳರಾಯನದುರ್ಗದ ಕಡೆಗೆ ಹೊರಡಲು ಸಿದ್ದರದೆವು. ಅಷ್ಟೋತ್ತಿಗೆ ಅಪ್ಪನ ಕಾಲ್ ಬಂತು. ಸ್ವಲ್ಪ ಕಸಿವಿಸಿಯಾಯಿತು. ಏನು ಹೇಳೋದು ಈಗ, ಮನೆಯಲ್ಲಿ ಹೊರಡುವಾಗ ''ಆದರೆ ದಿಡುಪೆವರೆಗೆ ಹೋಗ್ಲಿಕೆ ಇದೆ'' ಎಂದು ಮಾತ್ರ ಹೇಳಿದ್ದೆ, ಕಾಲ್ ರಿಸೀವ್ ಮಾಡ್ದೇ,,
ಒಲ್ಲಂಬೆ? (ಎಲ್ಲಿದ್ದೀಯ) ಎಂದು ಕೇಳಿದರು. ಏನು ಹೇಳೋದು ಎಂದು ತೋಚಲಿಲ್ಲ. ಮೆಲ್ಲಗೆ ಕಳಸದಲ್ಲಿದ್ದೇನೆ ಎಂದು ಹೇಳಿದೆ. ಮೂರು ಸೆಕೆಂಡ್ ಮೌನದ ನಂತರ ಒಂದಷ್ಟು ಬುದ್ಧಿವಾದ ಹಾಗೂ ಲೈಟಾಗಿ ಬೈಗುಳಗಳನ್ನು ಮೊಬೈಲ್ ಮೂಲಕ ನನ್ನ ಕಿವಿಗೆ ಧಾರೆರೆದರೂ. ಇನ್ನು ಮನೆಗೆ ಹೇಗಪ್ಪಾ ಎಂಟ್ರಿ ಕೊಡೋದು ಎಂದು ಯೋಚಿಸ್ತಾ ಇದ್ದೆ. ಅಷ್ಟೋತ್ತಿಗೆ ಹಮೀದ್ ಹೊರಡೋಣ ಅಂದರು. ಹಮೀದ್'ರವರ CBZ ಬೈಕ್'ನ್ನು ನನಗೆ ಓಡಿಸಲು ಹೇಳಿದರು. ಸುಮಾರು 2:30ಕ್ಕೆ ಕಳಸದಿಂದ ಜಾಗ ಖಾಲಿ ಮಾಡಿದೆವು.
ತಿರುವು ಮುರುವು ರಸ್ತೆ ನಮಗೇನು ಹೊಸತು ಅಲ್ಲ.
ಆದ್ರೂ ಕಾಫಿ ತೋಟವನ್ನು ಸೀಳಿಕೊಂಡು ಹೋಗಿರೋ ರಸ್ತೆಯಲ್ಲಿ ಹಿತವಾದ ವೇಗದಲ್ಲಿ ಸಾಗುವಾಗ, ಕೆಲವು ಸಿನಿಮಾಗಳಲ್ಲಿ ಇಂಥದ್ದೆ ದೃಶ್ಯದಲ್ಲಿ ಹೀರೋ ಬೈಕ್ನಲ್ಲಿ ಹೋಗ್ತರಲ್ವಾ..!!
ಆ ಫೀಲ್ ಬಂದಿದ್ದಂತೂ ಸುಳ್ಳಾಲ್ಲ.!!
ಸುಮಾರು 21, 24km ಮುಂದೆ ಸಾಗಿ ಸುಂಕಸಾಲೆಯ ಬಳಿ ಬಲ ರಸ್ತೆಯಲ್ಲಿ ಸಾಗಿದೆವು. ಈ ರಸ್ತೆ ಶುರುವಾಗೋದೇ ಏರು ದಾರಿಯಲ್ಲೇ ಕೊನೆಯಾಗೋದು ಕೂಡ ಏರು ರಸ್ತೆ ಮೂಲಕವೇ.!! ದೂರದಿಂದಲೇ ಶಿಖರಗಳು ನಮ್ಮನ್ನು ಕೋಟೆಗೆ ಸ್ವಾಗತಿಸುತ್ತಿರುವಂತೆ ಕಾಣುತ್ತಿತ್ತು. ಸುಮಾರು
3:15ಕ್ಕೆ ಬಲ್ಲಾಳರಾಯನ ದುರ್ಗದ ಕೋಟೆಗೆ ತಲ್ಪುಪಿದ್ವಿ. ನಮ್ಮ ಜಯರಾಮ ಮೊದಲ ಬಾರಿ ಇಷ್ಟು ದೂರ ಬೈಕ್ನಲ್ಲಿ ಬಂದಿದ್ದರಿಂದ ಸೊಂಟ ನೋವಾಗುತ್ತಿದೆ ಎಂದು ತನ್ನ ವೇದನೆಯನ್ನು ತೋಡಿಕೊಂಡ. ಅವನ ವೇದನೆ ನಮಿಗೆ ಕಾಮಿಡಿಯೆನಿಸಿತು. "ಬರೀ ಇಷ್ಟೇ ದೂರಕ್ಕೆ ಹೀಗಂದ್ರೆ ಹೇಗೆ, ನೀನೇನು ಪರಬ್ಬನ(ವಯಸ್ಸದವನ)" ಎಂದು ಹಿಯಾಳಿಸಿದೆ. ಕೆಲವೊಮ್ಮೆ ಹೀಗೆ ಹೇಳಿದ್ರೆ ಸ್ವಲ್ಪನಾದ್ರು ಪಾಸಿಟಿವ್ ಆಗಿ ಯೋಚಿಸಿ, ಇವ್ನ ರೋದ್ನೆ ಕಡಿಮೆಯಾಗಬಹುದೆಂಬ ಉದ್ದೇಶದಿಂದ,, ಒಂದು ನೂರು ಕಿಲೋಮೀಟರ್ ಬೈಕ್ನಲ್ಲಿ ಕುತುಕೊಳ್ಳೋದಕ್ಕೆ ಆಗಲ್ವಾ? ಅಂದೆ.
ಮತ್ತೆ ಅವರವರ ಸಾಮರ್ಥ್ಯ ಅವರಿಗೆನೆ ದೊಡ್ಡದು.. ಎಂದು ಸುಮ್ನಾದೆ. ಬೈಕನ್ನು ಬದಿಗೆ ನಿಲ್ಲಿಸಿ, ಒಂದೆರಡು ಹೆಜ್ಜೆ ಇಟ್ಟಾಗ ರಪ್ಪನೇ... ಹೊಸ ಲೋಕಕ್ಕೆ ಬಂದಂತೆ ಭಾಸವಾಯಿತು. ತಪ್ಪಲಿನಲ್ಲಿ ಕಾಣುವ ಅಗಾಧವಾದ ಸಸ್ಯ ಸಂಪತ್ತು. ಹಾಗೂ ದಿಡುಪೆ, ಗಡಾಯಿಕಲ್ಲು, ಕುದುರೆಮುಖ ಪರ್ವತಶ್ರೇಣಿ, ಅಂತ್ಯವೇ ಇಲ್ಲ ಎಂಬಂತಹ ಸಾಲು ಸಾಲು ಬೆಟ್ಟಗಳು, ಅಬ್ಬಾ..!! ಅದೇಗೆ ವರ್ಣಿಸೋದು,, ನನಗಂತೂ ಗೊತ್ತಿಲ್ಲ.
ರಾಣಿ ಜರಿ ನೋಡಲು ಹೋದೆವು. ಹಮೀದ್ ರವರು ರಾಣಿ ಜರಿ ಬಗ್ಗೆ ವಿವರಿಸುತ್ತಾ.
ಟಿಪ್ಪು ಗಡಾಯಿಕಲ್ಲಿನಿಂದ ಫಿರಂಗಿ ಹಾಕಿದ್ದರಿಂದ
ರಾಣಿ ಜರಿಯ ಎಡ್ಜ್ ಜರಿದು ಹೋಗಿದೆ ಅಂದರು.
ಇನ್ನು ವಿವರಿಸುತ್ತಾ, ಆ ರಾಣಿಜರಿಯೊಳಗೆ ಸಂಪತ್ತಿದೆ ಎಂದೆಲ್ಲ ಹೇಳಿದ್ರು. ಇವೆಲ್ಲ ಸುದ್ದಿ ಅಷ್ಟೇ, ಎಷ್ಟು ಸತ್ಯವೋ ಆ ರಾಣಿಗೆ ಗೊತ್ತು..!! ಸಮಯದ ಅಭಾವವನ್ನು ಅರಿತು ಕೋಟೆಗೆ ಹೋಗದೆ ಸೀದಾ ಬಂದ್ವಿ. ಅಲ್ಲೇ ಹತ್ತಿರದಲ್ಲೆ ಒಂದು ದೇವಸ್ಥಾನ ನೋಡಿದೆವು. ದೇವಸ್ಥಾನ ಅಂದ್ರೆ ಹಿಂಗೆ ಇರ್ಬೇಕಪ್ಪ ಅನಿಸ್ತು, ಸುತ್ತ ಹಸಿರು, ಪಕ್ಷಿ ಕೀಟಗಳ ಸದ್ದು ಬಿಟ್ರೆ ದೇವಸ್ಥಾನದ ಘಂಟೆಯ ಸದ್ದೊಂದೇ. ಇಂತಹ ನಿಶಬ್ದದ ನಡುವೆ ದೇವಸ್ಥಾನ. ಇಂತಹ ಕ್ಷೇತ್ರದಲ್ಲಿ ಗ್ಯಾರಂಟಿ ದೇವರು ನೆಲೆಸಿರುತ್ತಾರೆ.
ಎಂದೆನಿಸಿತು. ಅಲುಪರ ಕಾಲದಲ್ಲಿ ಆ ದೇವಸ್ಥಾನಕ್ಕೆ ಪೂಜೆ ಮಾಡಲು ಬಂಗಾಡಿಯಿಂದ ಅರ್ಚಕರು ಬರುತ್ತಿದ್ದರಂತೆ ಎಂದು ಹಮೀದ್ ಹೇಳಿದ್ರು. ಹಾಗೂ ಈ ದೇವಸ್ಥಾನದಲ್ಲಿ ಇತ್ತೀಚಿಕೆ ಎರಡು ಬಾರಿ ಕಳ್ಳತನ ಕೂಡ ಆಗಿತ್ತಂತೆ. ಪಾಪ..! ಈ ಜನರು ದೇವರನ್ನು ಕೂಡ ಬಿಡಲ್ಲ ಅನಿಸ್ತು. ದೇವಾಲಯಕ್ಕೆ ಬೀಗ ಹಾಕಿದ್ದರಿಂದ ಹೊರಗಿನಿಂದಲೇ ಪ್ರಾರ್ಥಿಸಿ ಅಲ್ಲಿಂದ ಸೀದಾ ಹಮೀದ್'ರವರ ಗೆಳೆಯ, ನನಿಗೆ ಹಾಸ್ಟೆಲ್ನಲ್ಲಿ ಇರುವಾಗ ಪರಿಚಿತನಾದ ಅಕ್ಷಯ್'ನ ಮನೆಗೆ ಹೊರಟೆವು. ದೇವಸ್ಥಾನದ ಕೆಳಗೆ, ರಸ್ತೆಯ ಬದಿಯಲ್ಲೇ ಒಂದು ಸಣ್ಣ ಕೆರೆ ಇತ್ತು. ಬಿರು ಬೇಸಿಗೆಯಲ್ಲೂ ತುಂಬಿದ್ದ ನೀರನ್ನು ನೋಡಿ, ತಡವಾಗುತ್ತೆ ಹೊರಡು ಅಂತ ಮನಸ್ಸು ಹೇಳಿದ್ರು, ಬಿಸಿಲಿನ ತಾಪ ಹಾಗೂ ದೂಳಿಗೆ ನಲುಗಿ ಹೋದ ದೇಹ ಮಾತ್ರ ಒಂದು ಸಲ ನೀರನ್ನು ಸ್ಪರ್ಶಿಸುವಂತೆ ಹಾತೊರೆಯುತ್ತಿತ್ತು.
ಆ ನೀರು ಅದೆಷ್ಟು ತಂಪಾಗಿತ್ತೆಂದರೆ ಪದೇ ಪದೇ ಮುಖಕ್ಕೆ ನೀರು ಚಿಮ್ಮಿಸಿಕೊಂಡರು ಸಾಕೆನಿಸದಷ್ಟು.!! ಹಮೀದ್'ರವರು "ಲೇಟಾಂಡ್ ನವೀನೆರೆ ಬಲೇ ಪೋಯಿ" ಎಂದು ಕರೆದು ಕರೆದು ಸೀದಾ ಹೋದ್ರು.
ಮೋಹನ ಸುಮ್ನೆ ನನ್ನನ್ನೇ ನೋಡ್ದಾ ಇದ್ದ,
ಕ್ಷಮಿಸು ಬಿಡು ಗುರುವೇ ಎಂಬಂತೆ ಮುಗುಲುನಗುತ್ತ ಹೊರಟೇ. ಸಮಯ ಆಗ್ಲೇ 4:00PM ಮೀರಿತ್ತು. ಹಾವು ಏಣಿ ಆಟದಲ್ಲಿ ಔಟಾದ್ರೆ ಸುಲಭದಲ್ಲಿ ಕೆಳಗೆ ಇಳಿಯುತ್ತೇವೆ ಅಲ್ವಾ,, ಆ ರೀತಿ ಇಳಿಜಾರಿನಲ್ಲಿ ಇಳಿಯುತ್ತಾ ಸುಂಕಸಾಲೆ ಬಳಿ ಬೈಕನ್ನು ಜಾವಳಿ ಕಡೆಗೆ ತಿರುಗಿಸಿದೆ. ಅಲ್ಲೊಂದು ತಿರುವಿನಲ್ಲಿ ಮತ್ತೆ ಪೊಲೀಸರು ಎದುರಾದರೂ. ಮೋಹನನಲ್ಲಿ ಕೇಳಿದೆ "ಡಾಕ್ಯುಮೆಂಟ್ ಎಲ್ಲ ಇದೆಯಲ್ವಾ"?
ಆಗ ಮೋಹನ ಹೇಳ್ತಾನೆ "ಅದು ಮನೆಯಲ್ಲೇ ಬಾಕಿ" ಎಂದ..!! ಅವನಿಗೆ ಬೈಯ್ಯುವ ಸಮಯವಂತು ಅದು ಆಗಿರಲಿಲ್ಲ.
ಪೊಲೀಸರು ನಮ್ಮೆದುರಿಗೆ ಹೋಗುತ್ತಿದ್ದ ಮಿನಿ ಬಸ್ಸೊಂದನ್ನು ನಿಲ್ಲಿಸಿದರು. ಪುಣ್ಯಕ್ಕೆ ನಮ್ಮನ್ನು ನಿಲ್ಲಿಸಲಿಲ್ಲ. ಹಮೀದ್'ರವರನ್ನೇನಾದರು ನಿಲ್ಲಿಸಿದರೆಯೇ? ಎಂದು ಹಿಂತಿರುಗಿ ನೋಡಿದೆ, ಅವರನ್ನು ನಿಲ್ಲಿಸಲಿಲ್ಲ.
ಕೆಳಗೂರು ತಲುಪಿದಾಗ ಹಮೀದ್'ರವರು "ಎಂಕೊಂಜಿ ಚಾ ಪರೋಡೆ" (ನನಗೊಂದು ಚಹಾ ಕುಡಿಲೇಬೇಕು) ಎಂದು ಬೈಕ್ ನಿಲ್ಲಿಸಿದರು. ಮೂರು ಜನ ಚಹಾ ಸೇವಿಸಿದರೆ,
ಜಯರಾಮ ಮಾತ್ರ sprite ತೆಗೆದುಕೊಂಡ.
ಈ ವಿಚಾರವಾಗಿ ನಾನು ಮೋಹನ ಜಯರಾಮನಿಗೆ ಪ್ಲಾಸ್ಟಿಕ್'ಬಾಟಲ್ ಹಾಗೂ ಸ್ವದೇಶಿ ಉತ್ಪನ್ನಗಳನ್ನು ಬಳಸುವುದರ ಬಗ್ಗೆ ಸ್ವಲ್ಪ ಕಾಲೆಳೆದೆವು.
ಹಾಗೇನೆ ಮನೆಗೆ 1.ಕೆಜಿ ಕೆಳಗೂರು ಚಹಾ ಪುಡಿಯನ್ನು ತೆಗೆದುಕೊಂಡೆ. ಈ ಮೂಲಕವಾದರೂ ಮನೆಯವರ ಕೋಪ ತುಸು ಕಡಿಮೆಯಾಗಬಹುದೆಂಬ ನಿರೀಕ್ಷೆಯಿಂದ.!!
ಅಲ್ಲಿಂದ ಹೊರಟು ಜಾವಳಿ ಬಳಿ ಇರುವ ಅಕ್ಷಯ್'ನ ಮನೆಗೆ ಹೋದೆವು. ನಮ್ಮ ಊರಿನ ಮನೆಯ ಶೈಲಿಗೂ ಅಲ್ಲಿಯವರ ಮನೆಗೂ ತುಂಬಾ ವ್ಯತ್ಯಾಸ.! ಕಾಫಿ ತೋಟದ ಬದಿಯ ಇಳಿಜಾರಿನಲ್ಲಿ ಚಿಕ್ಕದಾದ ಚಂದದ ಮನೆ. ಅದಕ್ಕೊಂದಿಷ್ಟು ಗಾಢವಾದ ಬಣ್ಣವನ್ನು ಬಳಿದು ಚಂದ ಕಾಣುತ್ತಿತ್ತು. ಬೇಡ ಬೇಡ ಅಂದರು, ನಾವು ಬರುವ ಮುಂಚೆನೇ ಚಹಾ ಮಾಡಿಟ್ಟಿದ್ದರಿಂದ ಅಲ್ಲೊಂದು ಲೋಟ ಚಹಾ ಕುಡಿದು ಅಕ್ಷಯ್ ಹಾಗೂ ಅವನ ಮನೆಯವರಲ್ಲಿ ಮಾತಾಡಿಸಿ, ಇನ್ನೊಂದು ಸಲ ಬರುವೆವು ಎಂದು ಹೇಳಿ, ಸ್ವಲ್ಪ ಬೇಗನೆ ಹೊರಟೆವು. ಹೆಚ್ಚು ಮೈಲೇಜ್ ಕೊಡುತ್ತೆ ಎನ್ನುವ ಪ್ಲಾಟಿನಂ ಬೈಕ್ ಕೊಟ್ಟಿಗೆಹಾರ ತಲುಪುವ ಮುನ್ನವೇ Reserveಗೆ ಬಿತ್ತು. ಕೊಟ್ಟಿಗೆಹಾರದಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಬಂದ್ರೆ. ಈ ಹಮೀದ್ ಮತ್ತೆ ಜಯರಾಮ ಕಾಣೆ!!
ಸಮಯ ಆಗ್ಲೇ 5:30ಕಳೆದಿದ್ದು. ಲೇಟಾದ್ರೆ ಮನೆಯಲ್ಲಿ ಬೈತಾರೆ ಎಂದು ತಲೆಬಿಸಿಯಲ್ಲಿ ಇದ್ರೆ ಇವ್ರಿಬ್ರು ಮಾತ್ರ ಬಿಸಿ ಬಿಸಿ ಬಜ್ಜಿ ತಿನ್ನುತ್ತಾ ಕೂತಿದ್ರು.
ಪ್ಲೇಟ್'ನಲ್ಲಿ ಉಳಿದಿದ್ದ ಬಜ್ಜಿಯನ್ನು ನಾನು ಮೋಹನ ಮುಗಿಸಿದ್ದರಿಂದ ಬೇಗ ಎದ್ದು ಬಂದ್ರು.
ಚಾರ್ಮಾಡಿ view pointಗೆ ತಲುಪುವ ವೇಳೆಗೆ ಸೂರ್ಯಾಸ್ತವಾಗಿತ್ತು. ಈ ಚಾರ್ಮಾಡಿ ಘಾಟ್ ಅದೆಷ್ಟು
ಸಲ ಹೋಗಿದ್ದೇನೋ,, ಆದರೂ ನೋಡಿದಷ್ಟು ಬೇಜಾರೆನಿಸದ ಸ್ಥಳ.
ಸಮಯವು ಇರುಳನ್ನು ಸ್ವಾಗತಿಸುತ್ತಿದ್ದರಿಂದ, ನಾವು ಬೇಗನೆ ಜಾಗ ಖಾಲಿ ಮಾಡಿದೆವು.
ಅಲ್ಲಿಂದ ನಾನು ಹಮೀದ್ ಒಂದು ಬೈಕ್ನಲ್ಲಿ ಬಂದೆವು. ಘಾಟ್ ಸೆಕ್ಷನ್ ಶುರುವಾಗಿನಿಂದ ಮುಗಿಯುವವರೆಗೂ ಬೈಕ್ neutralನಲ್ಲಿಯೇ ಬಂದೆವು.
ಇದು ಪೆಟ್ರೋಲ್ ಉಳಿಸುವ ಹಮೀದ್ ರವರ ಒಂದು ಭಯಂಕರ ವಿದ್ಯೆ. ಈ ವಿದ್ಯೆಗೆ ಸ್ವಲ್ಪ ಜಾಸ್ತಿ ಎಚ್ಚರಿಕೆಯಿಂದಲು ಇರಬೇಕು.
ಕಕ್ಕಿಂಜೆ ತಲುಪುವ ಹೊತ್ತಿಗೆ ಸೂರ್ಯ ತನ್ನ ದಿನದ ಕೆಲಸ ಮುಗಿಸಿ ಹೊರಟಿದ್ದ.!!
ಎಲ್ಲರೂ ನಮ್ಮನೆಗೆ ಹೋಗೋಣ ಎಂದು ಹೇಳಿದೆ. ಹಮೀದ್ ರವರು ನಾಳೆ ಕೆಲ್ಸಕ್ಕೆ ಹೋಗಲು ಕಷ್ಟ ಆಗ್ತಾದೆ ಎಂದು ಹೇಳಿ ಉಜಿರೆಯ ಕಡೆಗೆ ಮುಖ ಮಾಡಿದರು.
ಅಮ್ಮನಿಗೆ ಕರೆ ಮಾಡಿ ಮೋಹನ ಹಾಗೂ ಜಯರಾಮ ಬರುತ್ತಿದ್ದಾರೆ ಎಂದು ಹೇಳಿದೆ.
ನಾವು ಮೂವರು ಅನಿವಾರ್ಯ ಕಾರಣಗಳಿಂದ ಮೂವರು ಒಂದೇ ಬೈಕಿನಲ್ಲಿ ಮನೆಗೆ ಬಂದೆವು.
ಇವರೆಲ್ಲ ಇದ್ದುದ್ದರಿಂದ ಅಪ್ಪ ಎಲ್ಲಿಯೂ ತನ್ನ ಕೋಪವನ್ನು ಹೊರಗೆ ಹಾಕಲಿಲ್ಲ. ಅಪ್ಪನಿಗೆ ನಾವು ಹೋಗಿ ಬಂದ ಸ್ಥಳದ ಬಗ್ಗೆ ತಿಳಿಸಿ ಹೇಳಿದೆವು.
(ಕೊನೆಗೊಂದು ಮಾತು,,
ನಿವೇನಾದ್ರು ಪ್ರವಾಸಮಾಡುತ್ತೀರಿ ಅಂದ್ರೆ ಪ್ಲಾಸ್ಟಿಕ್ ಬಾಟಲ್ ಅಥವಾ ಕವರ್'ಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ ಆಯ್ತಾ😍)
#SamseDairiesStory
#AlemariNaveenStories
#Mobilephotography
#Naveenphoto
ಈ #ಸಂಸೆಟ್ರಾವೆಲ್ ಅದೆಷ್ಟು ಎಫ್ಫೆಕ್ಟಿವ್ ಆಯ್ತು ಅಂದ್ರೆ...
ಮನೆ ಬಿಟ್ಟು ಹೊರಡದ ಮೋಹನ ಇತ್ತೀಚಿಗೆ
"ಇನ್ನು ಎಲ್ಲಿಗೆ ಹೋಗೋಣ" ಎಂದು ಕೇಳುತ್ತಲೇ ಇದ್ದಾನೆ.
ಜಯರಾಮ ಮಾತ್ರ "ನಿಮ್ಗಳ ಸವಾಸಲ್ಲ ಮಾರಾಯ" ಎಂದು ಹೇಳುತ್ತಿದ್ದ.
ಹಮೀದ್'ರವರು ಮಾತ್ರ ಟ್ರಾವೆಲ್ನ ನಶೆ ಏರಿಸಿಕೊಂಡು ಎರಡು ಸಲ ಚಿಕ್ಕಮಗಳೂರು ಕಡೆಗೆ ಹೋಗ್ಬಂದ್ರಂತೆ..!!











Comments
Post a Comment