ಎರಡು ರಾತ್ರಿ 300+300km ಬೈಕ್ ರೈಡಿಂಗ್, 25 km ಕಾಲ್ನಡಿಗೆಯಲ್ಲಿ ಬೆಟ್ಟ, ಗುಡ್ಡ, ಸಮುದ್ರ ತೀರ ಅಂತ ತಿರುಗಾಟ, ಎರಡು ದಿನದಲ್ಲಿ ನಿದ್ದೆ ಮಾಡಿದ್ದು ಕೇವಲ 3 ಗಂಟೆ, ಸೋಮವಾರ ಮತ್ತೆ ಅವರವರ ಡ್ಯೂಟಿಗೆ,,, ಆದರ್ಶ್, ನಾನು ಪುನೀತ್, ಕಟ್ಟಪ್ಪ ಅಂದ್ರೆ ಪ್ರತಿಕ್ ಮತ್ತೆ ಆದರ್ಶನ ತಮ್ಮ ಅಕ್ಷಯ್, ನಾವು ಒಂದು ವಾರದ ಹಿಂದೇನೆ ಗೋಕರ್ಣ ಹೋಗುವ ಬಗ್ಗೆ ಚರ್ಚಿಸಿ ಕೊನೆಗೆ ಶನಿವಾರ ಹೋಗುವುದೆಂದು ನಿರ್ಧರಿಸಿದೆವು. ನಾನು, ಕಟ್ಟಪ್ಪ, ಅಕ್ಷಯ್ ಮೂವರು ಮನೆಯಿಂದ ಬೈಕ್ನಲ್ಲಿ ಹೊರಟರೆ,ಪುನೀತ್ ಮಂಗಳೂರಿನಿಂದ ಬೈಕ್ನಲ್ಲಿ ಬರ್ತೇನೆ ಅಂದಾ, ಇನ್ನು ಆದರ್ಶ್ ಬೆಂಗಳೂರಿನಿಂದ ಸೀದಾ ಬಂದು ಗೋಕರ್ಣದಲ್ಲೇ ಆದಿತ್ಯವಾರ ಬೆಳಗ್ಗೆ ಸಿಗ್ತೇನೆ ಎಂದು ಹೇಳಿದ. ನಾವು ಶನಿವಾರ ಬೆಳ್ತಂಗಡಿಯಿಂದ ಸಂಜೆ 4:30ಗೆ ಬೈಕ್ start ಮಾಡಿ ಹೊರಟೆವು.ನನ್ನ ಜೊತೆ ಅಕ್ಷಯ್ ಕುಳಿತಿದ್ದ, ಮುರುಡೇಶ್ವರ ಹತ್ತಿರ ತಲುಪುವಾಗ ಪುನೀತ್ ಮತ್ತೆ ಅವನ ಫ್ರೆಂಡ್ ವಿನೀತ್ ಕೂಡ ಒಟ್ಟಿಗೆ ಸೇರಿದರು. ಅಲ್ಲೇ ಹೋಟೆಲೊಂದರಲ್ಲಿ ಊಟ ಮುಗಿಸಿಕೊಂಡು ಮತ್ತೆ 3 ಬೈಕ್ನಲ್ಲಿ ಪಯಣ ಮುಂದುವರೆಸಿದೆವು. ಪುನೀತ್ ಹಾಗೂ ಕಟ್ಟಪ್ಪ ನಮಗಿಂತ ಮುಂದೆ ಹೋದರೆ, ನಾವು ಅವರಿಗಿಂತ ತುಂಬಾ ಹಿಂದೆ ಉಳಿದೆವು. ನಾನು ಅಕ್ಷಯ್ ಮಾತಾಡಿಕೊಂಡು, ಇವರಿಗಿಂತ ಮುಂಚೆ ತಲುಪಬೇಕು ಅಂತ ಹೇಳಿ, ಗೂಗಲ್ ಮ್ಯಾಪ್ ನಂಬಿ ಕುಮಟಾ ದಿಂದ short ದಾರಿ ಹಿಡಿದೆವು. ಇನ್ನೇನು ಗೋಕರ್ಣಗೆ 7km ಇ...