Skip to main content

Posts

ಬಿರ್ಲಾ ದೇವಸ್ಥಾನ ಕೋಲ್ಕತಾ.

  ಬೆಳಗ್ಗೆನೇ ನಿತ್ಯ ದಿನಚರಿಗಳನ್ನು ಮುಗಿಸಿ, ಕ್ಯಾಮೆರಾ ಬ್ಯಾಗ್ ಎತ್ತಿಕೊಂಡು ಕಂಟೋನ್ಮೆಂಟ್ ನಿಂದ ಹೊರಗೆ ಬಂದೆ. ಅಲ್ಲಿಂದ ಸೀದಾ ಬಂದವ ಪ್ರತಿ ರಜೆಯ ದಿನ ಚಾ ಕುಡಿವ ಸ್ಥಳಕ್ಕೆ ಬಂದು, ಒಂದು ಚಹಾದ ಜೊತೆಗೆ ಹೂಗ್ಲಿ ನದಿಯ ಹರಿವನ್ನು ನೋಡುತ್ತಾ  ಇವತ್ತು  ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಾ ಗೂಗಲ್ ಮಾಡಿದಾಗ ಮೊದಲೇ Note ಮಾಡಿಟ್ಟುಕೊಂಡಿದ್ದ ಬಿರ್ಲಾ ಮಂದಿರ ಕಾಣಿಸಿತು. ನಾನಿದ್ದ ಸ್ಥಳದಿಂದ ನಡೆದುಕೊಂಡು ಹೋಗಲು ಎಷ್ಟು ಕಿಮೀ ಇದೆ ಎಂದು ಹುಡುಕಿದಾಗ 8 ಕಿಮೀ ತೋರಿಸಿತು. ಅಲ್ಲಿಂದ ಸೀದಾ ವೇಗವಾಗಿ ಹೆಜ್ಜೆ ಯ ಮೇಲೊಂದು ಹೆಜ್ಜೆ  ಹಾಕುತ್ತಾ ಹೊರಟೆ. ಯಾಕಂದ್ರೆ 11ಕ್ಕೆ ದೇವಸ್ಥಾನ ಕ್ಲೋಸ್ ಆಗುತ್ತೆ ಎನ್ನುವ ಮಾಹಿತಿ ಕೂಡ ಗೂಗಲ್ ನಲ್ಲಿ ತೋರಿಸ್ತಾ ಇತ್ತು. ಇನ್ನು ನನ್ಯಾವತ್ತು ಸುತ್ತಾಡಲು ಪ್ರಾಥಮಿಕವಾಗಿ ಆಯ್ಕೆ ಮಾಡುವ ಸ್ಥಳ ಯಾವುದೆಂದರೆ, ನಮಗೆ ನಡೆದುಕೊಂಡು ಹೋಗಲು ಸಾಧ್ಯವಿರುವಂತಹ ಸ್ಥಳಗಳು, ಯಾಕಂದ್ರೆ ನಡೆದುಕೊಂಡು ಹೋಗುವಾಗ ನಮಗೆ ಬೇಕಾದ ಹಾಗೆ ಫೋಟೋವನ್ನು ಸೆರೆ ಹಿಡಿಯಬಹುದು ಹಾಗೂ ಏಕಾಂಗಿಯಾಗಿ ನಡೆದುಕೊಂಡು ಹೋಗುವ ಒಂದು ಮಜನೆ ಇದ್ಯಾಲ್ವ ಅದೊಂದು ನಶೆನೆ ಬೇರೆ ಮರ್ರೆ. ಅಂತೂ 10 ಗಂಟೆ ಆಗುವಷ್ಟರಲ್ಲಿ ಬಿರ್ಲಾ ಮಂದಿರಕ್ಕೆ ತಲುಪಿದೆ. ಮೊದಲನೆಯದಾಗಿ ಅಲ್ಲಿನ ಸಿಬ್ಬಂದಿ ನಗು ಮೊಗದೊಂದಿಗೆ ಸ್ವಾಗತಿಸಿದರೆ ಎರಡನೆಯದಾಗಿ ಇಲ್ಲಿ "ಯಾವುದೇ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲು ಅವಕಾಶ ಇಲ್ಲ" ಎಂದರು. ಇನ್ನು...
Recent posts

ಗೋಕರ್ಣ ಬೀಚ್ ಟ್ರೆಕ್

ಎರಡು ರಾತ್ರಿ 300+300km ಬೈಕ್ ರೈಡಿಂಗ್, 25 km ಕಾಲ್ನಡಿಗೆಯಲ್ಲಿ ಬೆಟ್ಟ, ಗುಡ್ಡ, ಸಮುದ್ರ ತೀರ ಅಂತ ತಿರುಗಾಟ, ಎರಡು ದಿನದಲ್ಲಿ ನಿದ್ದೆ ಮಾಡಿದ್ದು ಕೇವಲ 3 ಗಂಟೆ, ಸೋಮವಾರ ಮತ್ತೆ ಅವರವರ ಡ್ಯೂಟಿಗೆ,,,       ಆದರ್ಶ್, ನಾನು ಪುನೀತ್, ಕಟ್ಟಪ್ಪ ಅಂದ್ರೆ ಪ್ರತಿಕ್ ಮತ್ತೆ ಆದರ್ಶನ ತಮ್ಮ ಅಕ್ಷಯ್, ನಾವು ಒಂದು ವಾರದ ಹಿಂದೇನೆ ಗೋಕರ್ಣ ಹೋಗುವ ಬಗ್ಗೆ ಚರ್ಚಿಸಿ ಕೊನೆಗೆ ಶನಿವಾರ ಹೋಗುವುದೆಂದು ನಿರ್ಧರಿಸಿದೆವು. ನಾನು, ಕಟ್ಟಪ್ಪ, ಅಕ್ಷಯ್ ಮೂವರು ಮನೆಯಿಂದ ಬೈಕ್ನಲ್ಲಿ ಹೊರಟರೆ,ಪುನೀತ್ ಮಂಗಳೂರಿನಿಂದ ಬೈಕ್ನಲ್ಲಿ ಬರ್ತೇನೆ ಅಂದಾ, ಇನ್ನು ಆದರ್ಶ್ ಬೆಂಗಳೂರಿನಿಂದ ಸೀದಾ ಬಂದು ಗೋಕರ್ಣದಲ್ಲೇ ಆದಿತ್ಯವಾರ ಬೆಳಗ್ಗೆ ಸಿಗ್ತೇನೆ ಎಂದು ಹೇಳಿದ. ನಾವು ಶನಿವಾರ ಬೆಳ್ತಂಗಡಿಯಿಂದ ಸಂಜೆ 4:30ಗೆ ಬೈಕ್ start ಮಾಡಿ ಹೊರಟೆವು.ನನ್ನ ಜೊತೆ ಅಕ್ಷಯ್ ಕುಳಿತಿದ್ದ,  ಮುರುಡೇಶ್ವರ ಹತ್ತಿರ ತಲುಪುವಾಗ ಪುನೀತ್ ಮತ್ತೆ ಅವನ ಫ್ರೆಂಡ್ ವಿನೀತ್ ಕೂಡ ಒಟ್ಟಿಗೆ ಸೇರಿದರು. ಅಲ್ಲೇ ಹೋಟೆಲೊಂದರಲ್ಲಿ ಊಟ ಮುಗಿಸಿಕೊಂಡು ಮತ್ತೆ 3 ಬೈಕ್ನಲ್ಲಿ ಪಯಣ ಮುಂದುವರೆಸಿದೆವು. ಪುನೀತ್ ಹಾಗೂ ಕಟ್ಟಪ್ಪ  ನಮಗಿಂತ ಮುಂದೆ ಹೋದರೆ, ನಾವು ಅವರಿಗಿಂತ ತುಂಬಾ ಹಿಂದೆ ಉಳಿದೆವು. ನಾನು ಅಕ್ಷಯ್ ಮಾತಾಡಿಕೊಂಡು, ಇವರಿಗಿಂತ ಮುಂಚೆ ತಲುಪಬೇಕು ಅಂತ ಹೇಳಿ, ಗೂಗಲ್ ಮ್ಯಾಪ್ ನಂಬಿ  ಕುಮಟಾ ದಿಂದ short ದಾರಿ ಹಿಡಿದೆವು. ಇನ್ನೇನು ಗೋಕರ್ಣಗೆ 7km ಇ...

ಬಂಡಾಜೆಯ ಹಾದಿ

               ===== ಬಂಡಾಜೆಯ ಹಾದಿ ===== ಮುಂಡಾಜೆ ಹಾಸ್ಟೆಲ್ನಲ್ಲಿ ಇರುವಾಗಲೇ ನನಿಗೆ ಬಂಡಾಜೆಗೊಮ್ಮೆ ಹೋಗ್ಬೇಕು ಎಂಬ ಆಸೆ ಮೂಡಿತ್ತು.(ಎಂಟು ವರ್ಷದ ಹಿಂದೆ)ಯಾಕೆಂದರೆ ಬೆಳ್ಳಿಯ ಹೊಳಪಿನಿಂದ ವಯ್ಯಾರದಿಂದ ಮೇಲಿಂದ ಜಿಗಿಯುವುದು ನಮ್ಮ ಹಾಸ್ಟೆಲ್ಗೆ ಕಾಣುವಷ್ಟು ಅಂದವಾಗಿ ಬೇರೆಲ್ಲಿಯೂ ಕಾಣಿಸೋದಿಲ್ಲ ಅನಿಸುತ್ತೆ. ಮೊನ್ನೆ ಎಕ್ಸಾಮ್ ಮುಗಿದ ಮೇಲೆ ಎಲ್ಲಿಗಾದರು ಹೋಗಬೇಕು ಎಂದು ಅನಿಸಿದಾಗಲೇ ಬಂಡಾಜೆಗೆ ಹೋಗೋಣವೆನಿಸಿತು. ಒಂದೈದು ಜನಕ್ಕೆ ಕರೆಮಾಡಿ ಕೊನೆಗೆ ಹಮೀದ್, ರಕ್ಷಿತ್ ಸಿಕ್ಕರು. ಎರಡು ಬೈಕಿನಲ್ಲಿ ಬೆಳಗ್ಗೆ 8 ಗಂಟೆಗೆನೆ ಬ್ಯಾಗ್'ಗೆ ನೀರು, ಬಿಸ್ಕೆಟ್ ಪ್ಯಾಕೇಟ್ಗಳನ್ನು ತುಂಬಿಕೊಂಡು, ನಾವು ಮೂವರು ಬಂಡಾಜೆಯ ತಣ್ಣನೆಯ ನೀರನ್ನು ಸ್ಪರ್ಶಿಸಲು ಹಾತೊರೆಯುತ್ತ ಹೊರಟೆವು. ಪಶ್ಚಿಮ ಘಟ್ಟದ ಬುಡಕ್ಕೆ ಹೋಗಿ ಬಂಡಾಜೆಯ ತುತ್ತಾ ತುದಿಗೆರಲು ಅರಣ್ಯ ಇಲಾಖೆಗೆ ಸಂಬಂಧಿಸಿದವರ ಅನುಮತಿಯನ್ನು ಪಡೆದುಕೊಂಡು ಪ್ರಶಾಂತವಾಗಿದ್ದ ಕಾಡೊಳಗೆ ಹೆಜ್ಜೆ ಹಾಕಿದೆವು. ದಾರಿ ತುಂಬಾ ತರೆಗೆಲೆ ಹರಡಿದ್ದರಿಂದ ಪ್ರತಿ ಹೆಜ್ಜೆ ಕೂಡ ಕಾಡಿನ ನಿಶಬ್ಧತೆಗೆ ಭಂಗ ತರುವಂತಿತ್ತು. ಆಗ ತಾನೇ ಮೇಲೇರುತ್ತಿದ್ದ ಸೂರ್ಯ ಕಾಡೊಳಗಿನ brightnessನ್ನು ಹೆಚ್ಚಿಸಲು ಮರಗಳ ಚಪ್ಪರದೊಂದಿಗೆ ಸೆಣಸುತ್ತ ಲಗ್ಗೆ ಇಡುತ್ತಿದ್ದ. ನಾವು ಮಾತ್ರ ಲೋಕದ ಚಿಂತೆಗಳೆಲ್ಲವನ್ನು ಬಿಟ್ಟು ಕಾಲಿ...

ಬೇಕಾಗಿದ್ದಾರೆ ಭಾಗ-2

****...ಬೇಕಾಗಿದ್ದಾರೆ...**** ಭಾಗ-2           actually ಈ ಮಂಗ ಇಲ್ಲಿಗೆ ಬಂದೆ ಇರಲಿಲ್ಲ. ನಾವು ಕೂಡ ಇವನ ಜೊತೆ ಬರ್ಲಿ ಅಂತ ನಮಿಗೆಲ್ಲ ಸುಳ್ಳು ಹೇಳಿದ್ದ. ಅವಾಗ್ಲೇ ಗೊತ್ತಾಗಿದ್ದು, ನಾವು ಇಲ್ಲಿವರೆಗೆ ಬಂದಿದ್ದು "ಬೇಕಾಗಿದ್ದಾರೆ" ಜಾಹಿರಾತು ಮೂಲಕ ಎಂದು. ಅವನಿಗೂ ಉದ್ಯೋಗವೊಂದನ್ನು ಹಿಡಿಯುವ ಆತುರದಲ್ಲಿ ಜೊತೆಗಾಗಿ ನಮ್ಮನ್ನು ಎಳೆದು ತಂದಿದ್ದ. ಅಂತೂ ಮತ್ತೆ ಕಂಪೆನಿಗೆ ಕರೆ ಮಾಡಿದಾಗ ಮತ್ತಾದೆ ನಯವಾದ female voice ವಿಳಾಸ ತಿಳಿಸಿದ್ದಳು. ಕಾಲ್ನಡಿಗೆಯಲ್ಲಿ ಹುಡುಕಿಕೊಂಡು ಹೊರಟೆವು. ಮಗಂದ್!! ನಾವೆಲ್ಲೋ ದೊಡ್ಡ ಕಂಪನಿ ಅಂದ್ಕೊಂಡ್ರೆ. ಅದೊಂದು ಚಿಕ್ಕ office. ಸುಮಾರು 35, 40 ವಯಸ್ಸಿನ ಮೇಡಂ, ನಮ್ಮ ಮೇಲೆ ಬಹಳ ಕಾಳಜಿ ಇರುವಂತೆ ಮಾತಾಡಿದರು,  ನಿಮಗೆ ಯಾವ ಕಂಪನಿ ಆಗ್ಬೋದು TVS Ashok Leyland, Britannia......ಇನ್ನು ತುಂಬಾ ಹೇಳಿದ್ರು. ನಾವೇ ಮಾತಾಡಿಕೊಂಡು Ashok Leyland ಅಂತಾ ಹೇಳಿದಾಗ, ಬೇಡ TVS ಗೆ ಹೋಗಿ ಅದು ತುಂಬಾ ಒಳ್ಳೆಯದು ಅಂದರು. ಎಲ್ಲ option ಕೊಟ್ಟು ಕೊನೆಗೆ ಅವರೇ ಸೆಲೆಕ್ಟ್ ಮಾಡಿದ್ದು ನೋಡಿ ನಾವು ಮುಖ ಮುಖ ನೋಡಿಕೊಂಡೆವು.  ಮಾರ್ಕ್ಸ್ ಕಾರ್ಡ್,ಆಧಾರ್ ಕಾರ್ಡ್, ಜೆರಾಕ್ಸ್ ನಾಲ್ಕು ಫೋಟೋ, ಹಾಗೂ ಪ್ರತಿಯೊಬ್ಬರ ಕೈಯಿಂದ 2000 ರೂ ಪಡೆದುಕೊಂಡು, ಈ ಹಣವನ್ನು ಹಿಂತಿರುಗಿಸಲಾಗುವುದಿಲ್ಲ ಎಂಬ ಒಕ್ಕಣೆಯ ಮುಂದೆ ನಮ್ಮದೊಂದು ಸಹಿ ಹಾಕಿಸಿ. ಅದ್ಯಾರಿಗೋ ಕ...

ಬೇಕಾಗಿದ್ದಾರೆ ಭಾಗ-1

******..ಬೇಕಾಗಿದ್ದಾರೆ.. ****         ‌ಪಿಯುಸಿ ಪರೀಕ್ಷೆ ಮುಗಿಸಿ ಮೂರು ವರ್ಷದಿಂದ ರಜೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಹೋಟೆಲ್ ನತ್ತ ಹೆಜ್ಜೆ ಹಾಕಿದ್ದೆ, ಮುಂದೆ ಓದು ನಿಲ್ಲಿಸೋದ?, ಡಿಗ್ರಿ ಹೋಗೋದಾ?, ಪಾಲಿಟೆಕ್ನಿಕ್ ಕೋರ್ಸ್'ನತ್ತ ತಲೆ ಹಾಕೋದ? ಎನ್ನುವ ಯೋಚನೆ. ಪಿಯುಸಿ ಆದ ಮೇಲೆ ಇಲ್ಲೇ ಇಕ್ಕಟ್ಟು ಆಗೋದು ನೋಡಿ.  ಏನೇ ಆಗಲಿ ಮೊದಲು ರಿಸಲ್ಟ್ ಬರಲಿ ಆಮೇಲೆ ನೋಡೋಣ ಎಂದು ಹೋಟೆಲ್ನ ಕೆಲಸದೊಳಗೆ ಮುಳುಗಿಹೋದೆ. ಪ್ರತಿವರ್ಷ ನಾನು ಹಾಗೂ ನೀತಿನ್ ಬೇಸಿಗೆ ಹಾಗೂ ದಸರಾ ರಜೆಗೆ ಹೋಟೆಲ್'ಗೆ ಖಾಯಂ ಕೆಲಸಗಾರರು. ನಮ್ಮನ್ನು ಕೆಲಸ ಮಾಡಿಸಿಕೊಳ್ಳುವ ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ತಾ ಇದ್ದುದ್ದರಿಂದ ಹೋಟೆಲ್, ಹಾಗೂ ಅಲ್ಲಿನ ಕೆಲಸಗಾರರು ತುಂಬಾ ಆಪ್ತವಾಗಿದ್ದರು. ಆದ್ದರಿಂದ ಬೇರೆ ಕಡೆ ಕೆಲಸ ಹುಡುಕುವ ಯೋಚನೆ ಮಾಡಲು ಕೂಡ ಹೋಗಿರಲಿಲ್ಲ.  ಪಿಯುಸಿ ಬರುವ ಹೊತ್ತಿಗೆ  ಕ್ಲಿನರ್, ಪಾತ್ರ ತೊಳೆಯುವುದು, ತರಕಾರಿ ಕಟ್ ಮಾಡುವುದರಿಂದ ಹಿಡಿದು ದೋಸೆ ಹಾಕುವವರೆಗೆ ಕಲಿತಿದ್ದೆ. ಇನ್ನೊಂದು ವರ್ಷ ಅಲ್ಲೇ ಇರುತ್ತಿದ್ದರೆ ಒಂದಷ್ಟು ಅಡುಗೆ ಮಾಡೋದು ಕೂಡ ಕಲಿಯುತ್ತಿದ್ದೆ. ಅಂತೂ ಮೇ ನಲ್ಲಿ Result ಬಂತು First ಕ್ಲಾಸ್ ನಲ್ಲಿ ಪಾಸ್ ಕೂಡ ಆಗಿದ್ದೆ. ಯಾವ ದಾರಿ ಹಿಡಿಯೋದು ಎಂದು ಮಾತ್ರ ಗೊತ್ತಾಗಲಿಲ್ಲ.  ನನಗೆ ಡಿಗ್ರಿ ಹೋಗಬೇಕು ಅನಿಸಿದ್ರೆ. ಮನೆಯಲ್ಲಿ ಯಾವುದರು ಪಾಲಿಟೆಕ್ನಿಕ್ ...
** ----- ಕಾಡಹಾದಿ ----**         ಒಂದು ವಾರದ ಹಿಂದೆ ನಾನು, ಹಮೀದ್ ಹಾಗೂ ರಕ್ಷಿತ್ ಬ್ಯಾಗ್'ಗೆ ನೀರಿನ ಬಾಟಲ್ ನಾಲ್ಕು ಪ್ಯಾಕೆಟ್ ಬಿಸ್ಕೆಟ್'ನ್ನು  ತುಂಬಿಕೊಂಡು ಸೂರ್ಯನ ಪ್ರಖರತೆ ಹೆಚ್ಚಾಗುವ ಮುನ್ನವೇ ಪಶ್ಚಿಮ ಘಟ್ಟದ ಕಾಡೊಳಗೆ ಟ್ರೆಕ್ಕಿಂಗ್ ಎಂಬ ನಾಮದೊಂದಿಗೆ ಹೆಜ್ಜೆ ಹಾಕಿದೆವು. ಮುಗಿಲನ್ನೇ ಚುಂಬಿಸಲು ಹೊರಟಿರುವ ಬೃಹತ್ ಮರಗಳು, ಚಪ್ಪರ ಹಾಕಿದಂತಿರುವ ಮರಗಳ ನಡುವೆ ಹರಸಾಹಸ ಮಾಡಿ ಸೂರ್ಯನ ಕಿರಣಗಳು  ಭುವಿಯನ್ನು ಚುಂಬಿಸುವಾಗ, ಕಾಡೊಳಗೆ ರಂಗೋಲಿಗೆ ಚುಕ್ಕೆ ಇಟ್ಟಂತೆ ಹರಡಿರುವ ಬೆಳಕು. ನಾವಿಡುವ ಪ್ರತಿ ಹೆಜ್ಜೆಯನ್ನು 150ಮೀ. ದೂರದಲ್ಲಿಯೇ ಗುರುತಿಸುವಂತೆ ಹಾದಿ ತುಂಬಾ ತರೆಗೆಲೆಗಳು. ನಾವು ಮಾತಾಡುತ್ತಾ ಕಾಡಿನ ಹಾದಿಯ ಜಾಡು ಹಿಡಿದು ಹೊರಟೆವು. ಮುಂದೆ ಹೋದಂತೆ 2 ದಿನದ ಹಿಂದಷ್ಟೇ ಆನೆ ಬಂದು ಹೋಗಿರುವ ಗುರುತಿಗೆ ಸಹಿ ಹಾಕಿದಂತೆ ಲದ್ದಿ ಹಾಕಿತ್ತು. ಈ ಹಮೀದ್ ಅಲ್ಲಿಂದ ಆನೆಯ ಬಗ್ಗೆ ಮಾತಾಡೋಕೆ ಶುರು ಮಾಡಿದ್ರು. ಯಾಕೆಂದ್ರೆ ನಮ್ಮಲ್ಲಿ ಹೇಳಿಕೊಳ್ಳದಿದ್ದರು ಅವರಿಗೆ ಮನಸ್ಸಿನೊಳಗೆ ಸ್ವಲ್ಪ ಫುಕ್,ಫುಕ್ ಆಗಿತ್ತು ಅನ್ಸುತ್ತೆ. ಯಾಕೆಂದರೆ ದಾರಿಯುದ್ದಕ್ಕೂ ಅದರ ಚೇಷ್ಟೆಗೆ ಸಣ್ಣ ಮರಗಳು ಧರೆಗೆ ಉರುಳಿದ್ದವು. ಮುಂದೆ ಹಾದಿ ಕಡಿದಾಗುತ್ತ ಹೋದಂತೆ ಎರಡ್ಮೂರು ಕಡೆ ದಾರಿಗೆ ಅಡ್ಡಲಾಗಿ ಮಲಗಿದ್ದ ಮರವನ್ನು ದಾಟಿಕೊಂಡು ಹೋದೆವು. ಜಿಗಣೆಗಳ ಬಗ್ಗೆ ಅರಿವಿದ್ದುದ್ದರಿಂದ ಸ್ವಲ್ಪ ತಂಬಾಕು...

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.           ಅರಮನೆಯನ್ನು ನೋಡಿಕೊಳ್ಳುವವರು ನಮ್ಮನ್ನೋಡಿ ವೇಗವಾಗಿ ಧಾವಿಸಿ ನಗುಮೊಗದಿಂದಲೇ ಸ್ವಾಗತಿಸಿದರು. ಅಂದಾ ಹಾಗೆ, ಈ ನಾಲ್ನಾಡು ಅರಮನೆಯ ನಿರ್ಮಾಣದ ಕುರಿತು ಇತಿಹಾಸವನ್ನು ಹುಡುಕುತ್ತ ಹೋದರೆ, ದೊಡ್ಡವೀರ ರಾಜೇಂದ್ರರು ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸೂಕ್ತ ಸ್ಥಳವನ್ನು ಹುಡುಕುತ್ತ ಬಂದಾಗ ಅವರ ಕಣ್ಣಿಗೆ ಬಿದ್ದಿದ್ದು ಈ ಬೆಟ್ಟ ಶ್ರೇಣಿಗಳಿಂದ ಹಾಗೂ ದಟ್ಟವಾದ ಕಾನನದಿಂದ ಸುತ್ತುವರೆದ ಯುವಕಪಾಡಿ ಗ್ರಾಮದಲ್ಲಿರುವ ಈ ಪ್ರದೇಶ. ಈ ಸ್ಥಳದಲ್ಲಿ 1792ರಲ್ಲಿ ಎರಡು ಅಂತಸ್ತಿನ ಸಣ್ಣ ಅರಮನೆಯನ್ನು  ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತೆ. ಅರಮನೆಯನ್ನು ನೋಡಿಕೊಳ್ಳುವವರು, ನಮ್ಮ ಊರಿನ ಬಗ್ಗೆ ಹಾಗೂ ನಮ್ಮ ಪರಿಚಯ ಮಾಡಿಕೊಳ್ಳುತ್ತಾ, ಅರಮನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅರಮನೆಯೊಳಗೆ ಹೆಜ್ಜೆ ಹಾಕಿದರು. ನಾವು ಅವರನ್ನು ಹಿಂಬಾಲಿಸುತ್ತಾ ಮುಖ್ಯ ದ್ವಾರವನ್ನು ದಾಟಿ ಅರಮನೆಯೊಳಗೆ ಹೋದಾಗ ಬಲ ಬದಿಯಲ್ಲಿ ಒಂದು ಮಂಟಪವಿದೆ. ಇವರು ಹೇಳುವ ಪ್ರಕಾರ ಇದು ದೊಡ್ಡವೀರ ರಾಜೇಂದ್ರರ ತಂಗಿಯ ವಿವಾಹ ಮಂಟಪವೆಂದು  ಹೇಳಿದರು. ಆದರೆ ನಾನು ಗೂಗಲ್ನಲ್ಲಿ ಜಾಲಾಡಿದಾಗ ದೊಡ್ಡವೀರ ರಾಜೇಂದ್ರರ ಮದುವೆ ಮಂಟಪವೆಂದು ತಿಳಿದು ಬರುತ್ತದೆ. ಈ ಮಂಟಪಕ್ಕೆ ನಾಲ್ಕು ಪ್ರವೇಶ ದ್ವಾರಗಳಿದ್ದು ಮೇಲ್ಬಾಗದಲ್ಲಿ ನಾಲ್ಕು ದಿಕ್ಕಿಗ...