Skip to main content
** ----- ಕಾಡಹಾದಿ ----**

        ಒಂದು ವಾರದ ಹಿಂದೆ ನಾನು, ಹಮೀದ್ ಹಾಗೂ ರಕ್ಷಿತ್ ಬ್ಯಾಗ್'ಗೆ ನೀರಿನ ಬಾಟಲ್ ನಾಲ್ಕು ಪ್ಯಾಕೆಟ್ ಬಿಸ್ಕೆಟ್'ನ್ನು  ತುಂಬಿಕೊಂಡು ಸೂರ್ಯನ ಪ್ರಖರತೆ ಹೆಚ್ಚಾಗುವ ಮುನ್ನವೇ ಪಶ್ಚಿಮ ಘಟ್ಟದ ಕಾಡೊಳಗೆ ಟ್ರೆಕ್ಕಿಂಗ್ ಎಂಬ ನಾಮದೊಂದಿಗೆ ಹೆಜ್ಜೆ ಹಾಕಿದೆವು.

ಮುಗಿಲನ್ನೇ ಚುಂಬಿಸಲು ಹೊರಟಿರುವ ಬೃಹತ್ ಮರಗಳು, ಚಪ್ಪರ ಹಾಕಿದಂತಿರುವ ಮರಗಳ ನಡುವೆ ಹರಸಾಹಸ ಮಾಡಿ ಸೂರ್ಯನ ಕಿರಣಗಳು  ಭುವಿಯನ್ನು ಚುಂಬಿಸುವಾಗ, ಕಾಡೊಳಗೆ ರಂಗೋಲಿಗೆ ಚುಕ್ಕೆ ಇಟ್ಟಂತೆ ಹರಡಿರುವ ಬೆಳಕು.
ನಾವಿಡುವ ಪ್ರತಿ ಹೆಜ್ಜೆಯನ್ನು 150ಮೀ. ದೂರದಲ್ಲಿಯೇ ಗುರುತಿಸುವಂತೆ ಹಾದಿ ತುಂಬಾ ತರೆಗೆಲೆಗಳು.
ನಾವು ಮಾತಾಡುತ್ತಾ ಕಾಡಿನ ಹಾದಿಯ ಜಾಡು ಹಿಡಿದು ಹೊರಟೆವು. ಮುಂದೆ ಹೋದಂತೆ 2 ದಿನದ ಹಿಂದಷ್ಟೇ ಆನೆ ಬಂದು ಹೋಗಿರುವ ಗುರುತಿಗೆ ಸಹಿ ಹಾಕಿದಂತೆ ಲದ್ದಿ ಹಾಕಿತ್ತು.
ಈ ಹಮೀದ್ ಅಲ್ಲಿಂದ ಆನೆಯ ಬಗ್ಗೆ ಮಾತಾಡೋಕೆ ಶುರು ಮಾಡಿದ್ರು. ಯಾಕೆಂದ್ರೆ ನಮ್ಮಲ್ಲಿ ಹೇಳಿಕೊಳ್ಳದಿದ್ದರು ಅವರಿಗೆ ಮನಸ್ಸಿನೊಳಗೆ ಸ್ವಲ್ಪ ಫುಕ್,ಫುಕ್ ಆಗಿತ್ತು ಅನ್ಸುತ್ತೆ. ಯಾಕೆಂದರೆ ದಾರಿಯುದ್ದಕ್ಕೂ ಅದರ ಚೇಷ್ಟೆಗೆ ಸಣ್ಣ ಮರಗಳು ಧರೆಗೆ ಉರುಳಿದ್ದವು.
ಮುಂದೆ ಹಾದಿ ಕಡಿದಾಗುತ್ತ ಹೋದಂತೆ ಎರಡ್ಮೂರು ಕಡೆ ದಾರಿಗೆ ಅಡ್ಡಲಾಗಿ ಮಲಗಿದ್ದ ಮರವನ್ನು ದಾಟಿಕೊಂಡು ಹೋದೆವು. ಜಿಗಣೆಗಳ ಬಗ್ಗೆ ಅರಿವಿದ್ದುದ್ದರಿಂದ ಸ್ವಲ್ಪ ತಂಬಾಕು ಹಾಗೂ ಉಪ್ಪು ತೆಗೆದುಕೊಂಡು ಹೋಗಿದ್ದೆ. ಇದರಿಂದ ಸುಲಭದಲ್ಲಿ ಜಿಗಣೆಯಿಂದ ಬಿಡಿಸಿಕೊಳ್ಳಬಹುದಾದ ತಂತ್ರ. ಜಿಗಣೆ ಕಾಟ ಒಂದ್ಕಡೆಯದರೆ, ಈ ಸೂರ್ಯನ ಕಿರಣಗಳು ಭೂಮಿಗೆ ಅಷ್ಟಾಗಿ ಬೀಳದೆ ಇರೋದರಿಂದ ಜೇನು ನೊಣಗಳ ಹಿಂಡಿನಂತೆ ಸೊಳ್ಳೆಗಳು ನಮ್ಮನ್ನು ಮುತ್ತಿಗೆ ಹಾಕಿ ಕಚ್ಚಿದವು. ಸೊಳ್ಳೆ ಕಚ್ಚಿಸಿಕೊಂಡ ನನ್ನ ಪಾಡಂತೂ ಹೇಳತೀರದು.

ಘಟ್ಟಕ್ಕೆ ಹತ್ತಿರವಾದಂತೆ ಬೇರೆ ಥರದ ಸಸ್ಯವರ್ಗ ಕಾಟಿಗಳ ಹೆಜ್ಜೆ ಗುರುತುಗಳೆಲ್ಲ ಕಾಣ ಸಿಕ್ಕವು.
ಗುಡ್ಡಕ್ಕೆ ಏಣಿ ಇಟ್ಟಂತಿರುವ ದಾರಿಯಲ್ಲಿ ಮುಂದೆ ಸಾಗಿದಂತೆ ಎಲ್ಲೋ ದಾರಿ ತಪ್ಪಿದೆವು ಎಂಬ ಅರಿವಾಯಿತು. ಅದಕ್ಕೆ ಅಲ್ಲಿಂದಲೇ ಕಟ್ಟಿಗೆ, ಸೊಪ್ಪನ್ನಿಡುತ್ತಾ ಹೋದೆವು. ದಾರಿ ತಪ್ಪಿದ ಪರಿಣಾಮ ನಾವಂದುಕೊಂಡ ಸ್ಥಳಕ್ಕೆ ಹೋಗಲು ಆಗದೆ ನಿರಾಸೆಯಾಯಿತು. ಹಮೀದ್ ರವರು ಸ್ವಲ್ಪ ಮನಸ್ಸು ಮಾಡುತ್ತಿದ್ದಾರೆ ಸಾಧ್ಯವಿತ್ತೇನೋ! ಆದರೆ ಅವರು ಇನ್ನೊಂದು ಹೆಜ್ಜೆ ಕೂಡ ಮುಂದಕ್ಕೆ ಇಡಲಾರೆ ಎಂಬ ಶಪಥವನ್ನೇ ಮಾಡಿದರು.
 ಅನಿವಾರ್ಯವಾಗಿ ಅಲ್ಪ ತೃಪ್ತಿಯಲ್ಲೇ  ಹಿಂತಿರುಗಬೇಕಾಯಿತು. ಅಲ್ಲಿಂದ ಸುಮಾರು 8, 9 ಕಿಮೀ. ದೂರ ಕ್ರಮಿಸಬೇಕು.
ಸುಮಾರು 3ಕಿಮೀ.ನಷ್ಟು ದೂರ ಬೆಟ್ಟದಿಂದ ಇಳಿದಿದ್ದೆವು. ಇಲ್ಲಿಂದಲೇ ಸಮಸ್ಯೆ ಶುರುವಾಯಿತು ನೋಡಿ. ಕಾಡು ಪ್ರಾಣಿಗಳ ದಾರಿಗಳು ಅಲ್ಲಲ್ಲಿ ಕವಲು ಪಡೆದುಕೊಂಡಿದ್ದರಿಂದ ದಿಕ್ಕು ತಪ್ಪಿದೆವು. ಎಲ್ಲರಿಗಿಂತ ಮುಂದೆ ನಾನೇ ಇದ್ದುದ್ದರಿಂದ ಇವರ ಬೈಗುಳಗಳೆಲ್ಲ ನನ್ನ ಪಾಲಾಯಿತು. ಒಂದು ದಾರಿ ಹಿಡಿದು ಹೊರಟರೆ ಒಂದಷ್ಟು ದೂರ ಹೆಜ್ಜೆ ಹಾಕಿದಾಗ ಆ ದಾರಿ ಅಲ್ಲಿಗೆ ಕೊನೆಯಾಗುತ್ತಿತ್ತು. ಸಮಯ ಕೂಡ ಮದ್ಯಾಹ್ನ 3 ದಾಟಿತ್ತು. ಮೊದಲೇ ನಡೆದು ಸುಸ್ತಾಗಿದ್ದ ಹಮೀದ್ ಸ್ವಲ್ಪ ದಿಗಿಲಾದರು. ಅವರ ಈ ನಡವಳಿಕೆಯಿಂದ ನನಗೇನೆ tension ಆಯಿತು. ಯಾಕೆಂದರೆ ನಾನೇ ದಿಕ್ಸೂಚಿಯಾಗಿದ್ದೆ, ಇವರಿಬ್ಬರನ್ನು ಕರೆದುಕೊಂಡು ಹೋದವನು ನಾನೇ.
ಆದರೆ ಈ ರಕ್ಷಿತ್ ಮಾತ್ರ ಇದ್ಯಾವುದರ ಪರಿವೇ ಇಲ್ಲದಂತೆ "ಇದ್ಯಾವುದೂ ಬೆತ್ತ, ಇದ್ಯಾವ ತಳಿ" ಎಂಬ ಪ್ರಶ್ನೆ ಕೇಳುತ್ತಿದ್ದ. ನಾನು ಹಮೀದ್ ಅವನನ್ನು ಗುರಾಯಿಸಿ ನೋಡಿದೆವು. ಈ ನಡುವೆ ಹಮೀದ್ full tension ಮಾಡಿಕೊಂಡು. ಕೋಪದಲ್ಲಿ ಮಾತಾಡೋಕೆ ಶುರು ಮಾಡಿದರು. ತಲೆಯಲ್ಲಿ ಏನೇನೋ ಯೋಚನೆಗಳು ಓಡಾಡತೊಡಗಿತು. ಕೊನೆಗೆ ನಾನು ಹೇಳಿದೆ " ನೋಡಿ ದಾರಿ ತಪ್ಪಿಯಾಗಿದೆ. ನಮ್ಮೊಳಗೇನೆ ಗೊಂದಲ, ಮನಸ್ತಾಪ ಮಾಡಿಕೊಳ್ಳೋದು ಬೇಡವೆಂದೇ".
ಈ ವಿಸ್ತಾರವಾದ ಕಾಡಲ್ಲಿ ನಾವು ಎಲ್ಲಿದ್ದೇವೆ ಅನ್ನೋದೇ ತಿಳಿಯಾದ ಆಗೆ ಒಂದು ಕ್ಷಣ mind blank ಆಗಿತ್ತು. ಆ ದಾರಿ ಈ ದಾರಿ ಅಂತ ಅಲೆದಾಡಿ. ಕೊನೆಗೂ ಒಂದಷ್ಟು ದೂರ ಹೆಜ್ಜೆ ಹಾಕಿದಾಗ, ನಾವು ಬಂದ  ಹಾದಿ ಗೋಚರಿಸಿತು. ಒಂದು ದೊಡ್ಡ ನಿಟ್ಟುಸಿರು ಬಿಡುತ್ತಾ ಆಕಸ್ಮಾತ್ ಕಾಡಿನಲ್ಲೇ ಇರುತ್ತಿದ್ದರೆ. ಈ ಸೋಷಿಯಲ್ ಮಿಡಿಯಾದಲ್ಲಿ ವಾಟ್ಸಪ್ ಸ್ಟೇಟಸ್'ನಲ್ಲಿ ಹೇಗೆಲ್ಲ ಕಾಟ ಕೊಡಬಹುದು ಎಂದು ಮೂವರು ಮಾತಾಡಿಕೊಂಡು ಬಂದೆವು. ಮನೆ ಕಡೆಗೆ ಬೈಕ್ ತಿರುಗಿಸುವಾಗ ಹಮೀದ್'ರವರು "ನನಾ ಮಾತ್ರ ಯಾನ್ ನಿಕ್ಲೆನೋಟ್ಟುಗ್ ಟ್ರೆಕ್ಕಿಂಗ್ ಬರಯೇ" ಎಂದು ನಮಸ್ಕಾರ ಮಾಡಿ ಹೊರಟು ಹೋದರು. ನಾನು ರಕ್ಷಿತ್ ಇವರ ಸ್ಥಿತಿಗೆ ನಗುತ್ತಾ ಮನೆ ಕಡೆಗೆ ಬಂದೆವು.

ಕೆಲವೊಮ್ಮೆ ಟ್ರೆಕ್ಕಿಂಗ್ ಸವಾಸಲ್ಲ ಮರ್ರೆ, ಆದ್ರೂ ಬಿಡಕ್ಕಾಗಲ್ಲ..☺️

◆ ಎಲ್ಲಿ ಏನು ಅಂತ ಕೇಳ್ಬೇಡಿ ಆಯ್ತಾ..😁

Comments

Popular posts from this blog

ಬಂಡಾಜೆಯ ಹಾದಿ

               ===== ಬಂಡಾಜೆಯ ಹಾದಿ ===== ಮುಂಡಾಜೆ ಹಾಸ್ಟೆಲ್ನಲ್ಲಿ ಇರುವಾಗಲೇ ನನಿಗೆ ಬಂಡಾಜೆಗೊಮ್ಮೆ ಹೋಗ್ಬೇಕು ಎಂಬ ಆಸೆ ಮೂಡಿತ್ತು.(ಎಂಟು ವರ್ಷದ ಹಿಂದೆ)ಯಾಕೆಂದರೆ ಬೆಳ್ಳಿಯ ಹೊಳಪಿನಿಂದ ವಯ್ಯಾರದಿಂದ ಮೇಲಿಂದ ಜಿಗಿಯುವುದು ನಮ್ಮ ಹಾಸ್ಟೆಲ್ಗೆ ಕಾಣುವಷ್ಟು ಅಂದವಾಗಿ ಬೇರೆಲ್ಲಿಯೂ ಕಾಣಿಸೋದಿಲ್ಲ ಅನಿಸುತ್ತೆ. ಮೊನ್ನೆ ಎಕ್ಸಾಮ್ ಮುಗಿದ ಮೇಲೆ ಎಲ್ಲಿಗಾದರು ಹೋಗಬೇಕು ಎಂದು ಅನಿಸಿದಾಗಲೇ ಬಂಡಾಜೆಗೆ ಹೋಗೋಣವೆನಿಸಿತು. ಒಂದೈದು ಜನಕ್ಕೆ ಕರೆಮಾಡಿ ಕೊನೆಗೆ ಹಮೀದ್, ರಕ್ಷಿತ್ ಸಿಕ್ಕರು. ಎರಡು ಬೈಕಿನಲ್ಲಿ ಬೆಳಗ್ಗೆ 8 ಗಂಟೆಗೆನೆ ಬ್ಯಾಗ್'ಗೆ ನೀರು, ಬಿಸ್ಕೆಟ್ ಪ್ಯಾಕೇಟ್ಗಳನ್ನು ತುಂಬಿಕೊಂಡು, ನಾವು ಮೂವರು ಬಂಡಾಜೆಯ ತಣ್ಣನೆಯ ನೀರನ್ನು ಸ್ಪರ್ಶಿಸಲು ಹಾತೊರೆಯುತ್ತ ಹೊರಟೆವು. ಪಶ್ಚಿಮ ಘಟ್ಟದ ಬುಡಕ್ಕೆ ಹೋಗಿ ಬಂಡಾಜೆಯ ತುತ್ತಾ ತುದಿಗೆರಲು ಅರಣ್ಯ ಇಲಾಖೆಗೆ ಸಂಬಂಧಿಸಿದವರ ಅನುಮತಿಯನ್ನು ಪಡೆದುಕೊಂಡು ಪ್ರಶಾಂತವಾಗಿದ್ದ ಕಾಡೊಳಗೆ ಹೆಜ್ಜೆ ಹಾಕಿದೆವು. ದಾರಿ ತುಂಬಾ ತರೆಗೆಲೆ ಹರಡಿದ್ದರಿಂದ ಪ್ರತಿ ಹೆಜ್ಜೆ ಕೂಡ ಕಾಡಿನ ನಿಶಬ್ಧತೆಗೆ ಭಂಗ ತರುವಂತಿತ್ತು. ಆಗ ತಾನೇ ಮೇಲೇರುತ್ತಿದ್ದ ಸೂರ್ಯ ಕಾಡೊಳಗಿನ brightnessನ್ನು ಹೆಚ್ಚಿಸಲು ಮರಗಳ ಚಪ್ಪರದೊಂದಿಗೆ ಸೆಣಸುತ್ತ ಲಗ್ಗೆ ಇಡುತ್ತಿದ್ದ. ನಾವು ಮಾತ್ರ ಲೋಕದ ಚಿಂತೆಗಳೆಲ್ಲವನ್ನು ಬಿಟ್ಟು ಕಾಲಿ...

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.           ಅರಮನೆಯನ್ನು ನೋಡಿಕೊಳ್ಳುವವರು ನಮ್ಮನ್ನೋಡಿ ವೇಗವಾಗಿ ಧಾವಿಸಿ ನಗುಮೊಗದಿಂದಲೇ ಸ್ವಾಗತಿಸಿದರು. ಅಂದಾ ಹಾಗೆ, ಈ ನಾಲ್ನಾಡು ಅರಮನೆಯ ನಿರ್ಮಾಣದ ಕುರಿತು ಇತಿಹಾಸವನ್ನು ಹುಡುಕುತ್ತ ಹೋದರೆ, ದೊಡ್ಡವೀರ ರಾಜೇಂದ್ರರು ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸೂಕ್ತ ಸ್ಥಳವನ್ನು ಹುಡುಕುತ್ತ ಬಂದಾಗ ಅವರ ಕಣ್ಣಿಗೆ ಬಿದ್ದಿದ್ದು ಈ ಬೆಟ್ಟ ಶ್ರೇಣಿಗಳಿಂದ ಹಾಗೂ ದಟ್ಟವಾದ ಕಾನನದಿಂದ ಸುತ್ತುವರೆದ ಯುವಕಪಾಡಿ ಗ್ರಾಮದಲ್ಲಿರುವ ಈ ಪ್ರದೇಶ. ಈ ಸ್ಥಳದಲ್ಲಿ 1792ರಲ್ಲಿ ಎರಡು ಅಂತಸ್ತಿನ ಸಣ್ಣ ಅರಮನೆಯನ್ನು  ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತೆ. ಅರಮನೆಯನ್ನು ನೋಡಿಕೊಳ್ಳುವವರು, ನಮ್ಮ ಊರಿನ ಬಗ್ಗೆ ಹಾಗೂ ನಮ್ಮ ಪರಿಚಯ ಮಾಡಿಕೊಳ್ಳುತ್ತಾ, ಅರಮನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅರಮನೆಯೊಳಗೆ ಹೆಜ್ಜೆ ಹಾಕಿದರು. ನಾವು ಅವರನ್ನು ಹಿಂಬಾಲಿಸುತ್ತಾ ಮುಖ್ಯ ದ್ವಾರವನ್ನು ದಾಟಿ ಅರಮನೆಯೊಳಗೆ ಹೋದಾಗ ಬಲ ಬದಿಯಲ್ಲಿ ಒಂದು ಮಂಟಪವಿದೆ. ಇವರು ಹೇಳುವ ಪ್ರಕಾರ ಇದು ದೊಡ್ಡವೀರ ರಾಜೇಂದ್ರರ ತಂಗಿಯ ವಿವಾಹ ಮಂಟಪವೆಂದು  ಹೇಳಿದರು. ಆದರೆ ನಾನು ಗೂಗಲ್ನಲ್ಲಿ ಜಾಲಾಡಿದಾಗ ದೊಡ್ಡವೀರ ರಾಜೇಂದ್ರರ ಮದುವೆ ಮಂಟಪವೆಂದು ತಿಳಿದು ಬರುತ್ತದೆ. ಈ ಮಂಟಪಕ್ಕೆ ನಾಲ್ಕು ಪ್ರವೇಶ ದ್ವಾರಗಳಿದ್ದು ಮೇಲ್ಬಾಗದಲ್ಲಿ ನಾಲ್ಕು ದಿಕ್ಕಿಗ...

ಬಿರ್ಲಾ ದೇವಸ್ಥಾನ ಕೋಲ್ಕತಾ.

  ಬೆಳಗ್ಗೆನೇ ನಿತ್ಯ ದಿನಚರಿಗಳನ್ನು ಮುಗಿಸಿ, ಕ್ಯಾಮೆರಾ ಬ್ಯಾಗ್ ಎತ್ತಿಕೊಂಡು ಕಂಟೋನ್ಮೆಂಟ್ ನಿಂದ ಹೊರಗೆ ಬಂದೆ. ಅಲ್ಲಿಂದ ಸೀದಾ ಬಂದವ ಪ್ರತಿ ರಜೆಯ ದಿನ ಚಾ ಕುಡಿವ ಸ್ಥಳಕ್ಕೆ ಬಂದು, ಒಂದು ಚಹಾದ ಜೊತೆಗೆ ಹೂಗ್ಲಿ ನದಿಯ ಹರಿವನ್ನು ನೋಡುತ್ತಾ  ಇವತ್ತು  ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಾ ಗೂಗಲ್ ಮಾಡಿದಾಗ ಮೊದಲೇ Note ಮಾಡಿಟ್ಟುಕೊಂಡಿದ್ದ ಬಿರ್ಲಾ ಮಂದಿರ ಕಾಣಿಸಿತು. ನಾನಿದ್ದ ಸ್ಥಳದಿಂದ ನಡೆದುಕೊಂಡು ಹೋಗಲು ಎಷ್ಟು ಕಿಮೀ ಇದೆ ಎಂದು ಹುಡುಕಿದಾಗ 8 ಕಿಮೀ ತೋರಿಸಿತು. ಅಲ್ಲಿಂದ ಸೀದಾ ವೇಗವಾಗಿ ಹೆಜ್ಜೆ ಯ ಮೇಲೊಂದು ಹೆಜ್ಜೆ  ಹಾಕುತ್ತಾ ಹೊರಟೆ. ಯಾಕಂದ್ರೆ 11ಕ್ಕೆ ದೇವಸ್ಥಾನ ಕ್ಲೋಸ್ ಆಗುತ್ತೆ ಎನ್ನುವ ಮಾಹಿತಿ ಕೂಡ ಗೂಗಲ್ ನಲ್ಲಿ ತೋರಿಸ್ತಾ ಇತ್ತು. ಇನ್ನು ನನ್ಯಾವತ್ತು ಸುತ್ತಾಡಲು ಪ್ರಾಥಮಿಕವಾಗಿ ಆಯ್ಕೆ ಮಾಡುವ ಸ್ಥಳ ಯಾವುದೆಂದರೆ, ನಮಗೆ ನಡೆದುಕೊಂಡು ಹೋಗಲು ಸಾಧ್ಯವಿರುವಂತಹ ಸ್ಥಳಗಳು, ಯಾಕಂದ್ರೆ ನಡೆದುಕೊಂಡು ಹೋಗುವಾಗ ನಮಗೆ ಬೇಕಾದ ಹಾಗೆ ಫೋಟೋವನ್ನು ಸೆರೆ ಹಿಡಿಯಬಹುದು ಹಾಗೂ ಏಕಾಂಗಿಯಾಗಿ ನಡೆದುಕೊಂಡು ಹೋಗುವ ಒಂದು ಮಜನೆ ಇದ್ಯಾಲ್ವ ಅದೊಂದು ನಶೆನೆ ಬೇರೆ ಮರ್ರೆ. ಅಂತೂ 10 ಗಂಟೆ ಆಗುವಷ್ಟರಲ್ಲಿ ಬಿರ್ಲಾ ಮಂದಿರಕ್ಕೆ ತಲುಪಿದೆ. ಮೊದಲನೆಯದಾಗಿ ಅಲ್ಲಿನ ಸಿಬ್ಬಂದಿ ನಗು ಮೊಗದೊಂದಿಗೆ ಸ್ವಾಗತಿಸಿದರೆ ಎರಡನೆಯದಾಗಿ ಇಲ್ಲಿ "ಯಾವುದೇ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲು ಅವಕಾಶ ಇಲ್ಲ" ಎಂದರು. ಇನ್ನು...