Skip to main content

Posts

Showing posts from 2020

ಬಂಡಾಜೆಯ ಹಾದಿ

               ===== ಬಂಡಾಜೆಯ ಹಾದಿ ===== ಮುಂಡಾಜೆ ಹಾಸ್ಟೆಲ್ನಲ್ಲಿ ಇರುವಾಗಲೇ ನನಿಗೆ ಬಂಡಾಜೆಗೊಮ್ಮೆ ಹೋಗ್ಬೇಕು ಎಂಬ ಆಸೆ ಮೂಡಿತ್ತು.(ಎಂಟು ವರ್ಷದ ಹಿಂದೆ)ಯಾಕೆಂದರೆ ಬೆಳ್ಳಿಯ ಹೊಳಪಿನಿಂದ ವಯ್ಯಾರದಿಂದ ಮೇಲಿಂದ ಜಿಗಿಯುವುದು ನಮ್ಮ ಹಾಸ್ಟೆಲ್ಗೆ ಕಾಣುವಷ್ಟು ಅಂದವಾಗಿ ಬೇರೆಲ್ಲಿಯೂ ಕಾಣಿಸೋದಿಲ್ಲ ಅನಿಸುತ್ತೆ. ಮೊನ್ನೆ ಎಕ್ಸಾಮ್ ಮುಗಿದ ಮೇಲೆ ಎಲ್ಲಿಗಾದರು ಹೋಗಬೇಕು ಎಂದು ಅನಿಸಿದಾಗಲೇ ಬಂಡಾಜೆಗೆ ಹೋಗೋಣವೆನಿಸಿತು. ಒಂದೈದು ಜನಕ್ಕೆ ಕರೆಮಾಡಿ ಕೊನೆಗೆ ಹಮೀದ್, ರಕ್ಷಿತ್ ಸಿಕ್ಕರು. ಎರಡು ಬೈಕಿನಲ್ಲಿ ಬೆಳಗ್ಗೆ 8 ಗಂಟೆಗೆನೆ ಬ್ಯಾಗ್'ಗೆ ನೀರು, ಬಿಸ್ಕೆಟ್ ಪ್ಯಾಕೇಟ್ಗಳನ್ನು ತುಂಬಿಕೊಂಡು, ನಾವು ಮೂವರು ಬಂಡಾಜೆಯ ತಣ್ಣನೆಯ ನೀರನ್ನು ಸ್ಪರ್ಶಿಸಲು ಹಾತೊರೆಯುತ್ತ ಹೊರಟೆವು. ಪಶ್ಚಿಮ ಘಟ್ಟದ ಬುಡಕ್ಕೆ ಹೋಗಿ ಬಂಡಾಜೆಯ ತುತ್ತಾ ತುದಿಗೆರಲು ಅರಣ್ಯ ಇಲಾಖೆಗೆ ಸಂಬಂಧಿಸಿದವರ ಅನುಮತಿಯನ್ನು ಪಡೆದುಕೊಂಡು ಪ್ರಶಾಂತವಾಗಿದ್ದ ಕಾಡೊಳಗೆ ಹೆಜ್ಜೆ ಹಾಕಿದೆವು. ದಾರಿ ತುಂಬಾ ತರೆಗೆಲೆ ಹರಡಿದ್ದರಿಂದ ಪ್ರತಿ ಹೆಜ್ಜೆ ಕೂಡ ಕಾಡಿನ ನಿಶಬ್ಧತೆಗೆ ಭಂಗ ತರುವಂತಿತ್ತು. ಆಗ ತಾನೇ ಮೇಲೇರುತ್ತಿದ್ದ ಸೂರ್ಯ ಕಾಡೊಳಗಿನ brightnessನ್ನು ಹೆಚ್ಚಿಸಲು ಮರಗಳ ಚಪ್ಪರದೊಂದಿಗೆ ಸೆಣಸುತ್ತ ಲಗ್ಗೆ ಇಡುತ್ತಿದ್ದ. ನಾವು ಮಾತ್ರ ಲೋಕದ ಚಿಂತೆಗಳೆಲ್ಲವನ್ನು ಬಿಟ್ಟು ಕಾಲಿ...

ಬೇಕಾಗಿದ್ದಾರೆ ಭಾಗ-2

****...ಬೇಕಾಗಿದ್ದಾರೆ...**** ಭಾಗ-2           actually ಈ ಮಂಗ ಇಲ್ಲಿಗೆ ಬಂದೆ ಇರಲಿಲ್ಲ. ನಾವು ಕೂಡ ಇವನ ಜೊತೆ ಬರ್ಲಿ ಅಂತ ನಮಿಗೆಲ್ಲ ಸುಳ್ಳು ಹೇಳಿದ್ದ. ಅವಾಗ್ಲೇ ಗೊತ್ತಾಗಿದ್ದು, ನಾವು ಇಲ್ಲಿವರೆಗೆ ಬಂದಿದ್ದು "ಬೇಕಾಗಿದ್ದಾರೆ" ಜಾಹಿರಾತು ಮೂಲಕ ಎಂದು. ಅವನಿಗೂ ಉದ್ಯೋಗವೊಂದನ್ನು ಹಿಡಿಯುವ ಆತುರದಲ್ಲಿ ಜೊತೆಗಾಗಿ ನಮ್ಮನ್ನು ಎಳೆದು ತಂದಿದ್ದ. ಅಂತೂ ಮತ್ತೆ ಕಂಪೆನಿಗೆ ಕರೆ ಮಾಡಿದಾಗ ಮತ್ತಾದೆ ನಯವಾದ female voice ವಿಳಾಸ ತಿಳಿಸಿದ್ದಳು. ಕಾಲ್ನಡಿಗೆಯಲ್ಲಿ ಹುಡುಕಿಕೊಂಡು ಹೊರಟೆವು. ಮಗಂದ್!! ನಾವೆಲ್ಲೋ ದೊಡ್ಡ ಕಂಪನಿ ಅಂದ್ಕೊಂಡ್ರೆ. ಅದೊಂದು ಚಿಕ್ಕ office. ಸುಮಾರು 35, 40 ವಯಸ್ಸಿನ ಮೇಡಂ, ನಮ್ಮ ಮೇಲೆ ಬಹಳ ಕಾಳಜಿ ಇರುವಂತೆ ಮಾತಾಡಿದರು,  ನಿಮಗೆ ಯಾವ ಕಂಪನಿ ಆಗ್ಬೋದು TVS Ashok Leyland, Britannia......ಇನ್ನು ತುಂಬಾ ಹೇಳಿದ್ರು. ನಾವೇ ಮಾತಾಡಿಕೊಂಡು Ashok Leyland ಅಂತಾ ಹೇಳಿದಾಗ, ಬೇಡ TVS ಗೆ ಹೋಗಿ ಅದು ತುಂಬಾ ಒಳ್ಳೆಯದು ಅಂದರು. ಎಲ್ಲ option ಕೊಟ್ಟು ಕೊನೆಗೆ ಅವರೇ ಸೆಲೆಕ್ಟ್ ಮಾಡಿದ್ದು ನೋಡಿ ನಾವು ಮುಖ ಮುಖ ನೋಡಿಕೊಂಡೆವು.  ಮಾರ್ಕ್ಸ್ ಕಾರ್ಡ್,ಆಧಾರ್ ಕಾರ್ಡ್, ಜೆರಾಕ್ಸ್ ನಾಲ್ಕು ಫೋಟೋ, ಹಾಗೂ ಪ್ರತಿಯೊಬ್ಬರ ಕೈಯಿಂದ 2000 ರೂ ಪಡೆದುಕೊಂಡು, ಈ ಹಣವನ್ನು ಹಿಂತಿರುಗಿಸಲಾಗುವುದಿಲ್ಲ ಎಂಬ ಒಕ್ಕಣೆಯ ಮುಂದೆ ನಮ್ಮದೊಂದು ಸಹಿ ಹಾಕಿಸಿ. ಅದ್ಯಾರಿಗೋ ಕ...

ಬೇಕಾಗಿದ್ದಾರೆ ಭಾಗ-1

******..ಬೇಕಾಗಿದ್ದಾರೆ.. ****         ‌ಪಿಯುಸಿ ಪರೀಕ್ಷೆ ಮುಗಿಸಿ ಮೂರು ವರ್ಷದಿಂದ ರಜೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಹೋಟೆಲ್ ನತ್ತ ಹೆಜ್ಜೆ ಹಾಕಿದ್ದೆ, ಮುಂದೆ ಓದು ನಿಲ್ಲಿಸೋದ?, ಡಿಗ್ರಿ ಹೋಗೋದಾ?, ಪಾಲಿಟೆಕ್ನಿಕ್ ಕೋರ್ಸ್'ನತ್ತ ತಲೆ ಹಾಕೋದ? ಎನ್ನುವ ಯೋಚನೆ. ಪಿಯುಸಿ ಆದ ಮೇಲೆ ಇಲ್ಲೇ ಇಕ್ಕಟ್ಟು ಆಗೋದು ನೋಡಿ.  ಏನೇ ಆಗಲಿ ಮೊದಲು ರಿಸಲ್ಟ್ ಬರಲಿ ಆಮೇಲೆ ನೋಡೋಣ ಎಂದು ಹೋಟೆಲ್ನ ಕೆಲಸದೊಳಗೆ ಮುಳುಗಿಹೋದೆ. ಪ್ರತಿವರ್ಷ ನಾನು ಹಾಗೂ ನೀತಿನ್ ಬೇಸಿಗೆ ಹಾಗೂ ದಸರಾ ರಜೆಗೆ ಹೋಟೆಲ್'ಗೆ ಖಾಯಂ ಕೆಲಸಗಾರರು. ನಮ್ಮನ್ನು ಕೆಲಸ ಮಾಡಿಸಿಕೊಳ್ಳುವ ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ತಾ ಇದ್ದುದ್ದರಿಂದ ಹೋಟೆಲ್, ಹಾಗೂ ಅಲ್ಲಿನ ಕೆಲಸಗಾರರು ತುಂಬಾ ಆಪ್ತವಾಗಿದ್ದರು. ಆದ್ದರಿಂದ ಬೇರೆ ಕಡೆ ಕೆಲಸ ಹುಡುಕುವ ಯೋಚನೆ ಮಾಡಲು ಕೂಡ ಹೋಗಿರಲಿಲ್ಲ.  ಪಿಯುಸಿ ಬರುವ ಹೊತ್ತಿಗೆ  ಕ್ಲಿನರ್, ಪಾತ್ರ ತೊಳೆಯುವುದು, ತರಕಾರಿ ಕಟ್ ಮಾಡುವುದರಿಂದ ಹಿಡಿದು ದೋಸೆ ಹಾಕುವವರೆಗೆ ಕಲಿತಿದ್ದೆ. ಇನ್ನೊಂದು ವರ್ಷ ಅಲ್ಲೇ ಇರುತ್ತಿದ್ದರೆ ಒಂದಷ್ಟು ಅಡುಗೆ ಮಾಡೋದು ಕೂಡ ಕಲಿಯುತ್ತಿದ್ದೆ. ಅಂತೂ ಮೇ ನಲ್ಲಿ Result ಬಂತು First ಕ್ಲಾಸ್ ನಲ್ಲಿ ಪಾಸ್ ಕೂಡ ಆಗಿದ್ದೆ. ಯಾವ ದಾರಿ ಹಿಡಿಯೋದು ಎಂದು ಮಾತ್ರ ಗೊತ್ತಾಗಲಿಲ್ಲ.  ನನಗೆ ಡಿಗ್ರಿ ಹೋಗಬೇಕು ಅನಿಸಿದ್ರೆ. ಮನೆಯಲ್ಲಿ ಯಾವುದರು ಪಾಲಿಟೆಕ್ನಿಕ್ ...