Skip to main content

Posts

Showing posts from 2018

ಹಳೇಬೀಡು ಸೈಕಲ್'ಯಾನ

              ಯುಗಾದಿಯ ರಜೆಯನ್ನು ಹೇಗೆ ಕಳೆಯಬೇಕೆಂದು ಯೋಚಿಸಿದಾಗ ಹೊಳೆದದ್ದು, ಶಿಲ್ಪಾಕಲೆಗಳ ಬೀಡು ಹಳೇಬೀಡು. ಹಾಸನದಿಂದ ಹಳೇಬೀಡಿಗೆ ಸುಮಾರು 30 ಕಿಲೋಮೀಟರ್, ಬಸ್ಸಿನಲ್ಲಿ ಹೋಗುವ ಎಂದು ಅನಿಸಿತು. ಆದರೆ ಬಸ್ಸಿನಲ್ಲಿ ನಿದ್ದೆ ಮಾಡಿಕೊಂಡು ಹೋಗುವ ಬದಲು, ಸ್ವಲ್ಪ ಭಿನ್ನವಾಗಿ ಸೈಕಲ್ ನಲ್ಲಿ ಹೋಗಿಬರೋಣವೆನಿಸಿತು. ನೇಸರನ ಬಿಸಿಲ ತಾಪ ಜಾಸ್ತಿಯಾಗುತ್ತಿದ್ದಂತೆ ಸೈಕಲ್ ಏರಿ ಹಳೇಬೀಡಿನತ್ತ ಹೊರಟೆ. ಬಸ್ಸುಯಾನಕ್ಕಿಂತ ಸೈಕಲ್ ಸವಾರಿಯ ಮಜಾನೆ ಬೇರೆ!. ದೂರ ಸಾಗಿದಂತೆ, ಸುಸ್ತಾಗಿ ಮಜಾ ಎಲ್ಲೋಯ್ತು ಎಂದು ಹುಡುಕುವ ಪರಿಸ್ಥಿತಿಯು ಬಂತು. ಆದರೆ ನನ್ನಲ್ಲಿನ ಕುತೂಹಲ ಎಳೆದೊಯ್ದು, ನೇಸರ ನೆತ್ತಿಯ ಮೇಲೆ ತಲುಪುವ ವೇಳೆಗೆ ನಾನು ಹಳೇಬೀಡು ತಲುಪಿದೆ. ಹಾಸನದಿಂದ ಸಾಲಗಾಮೆ ಮಾರ್ಗವಾಗಿ ಹಳೇಬೀಡಿಗೆ ಬಂದರೆ, ನಮ್ಮನ್ನು ಸ್ವಾಗತಿಸುವುದು ದ್ವಾರಸಮುದ್ರ. ಆದರೆ ಈ ದ್ವಾರ ಸಮುದ್ರದ ಹೆಸರಿನಂತೆ ಇಲ್ಲದೆ, ಭಿನ್ನವಾಗಿ ಬರಡಗಿರೋದನ್ನು ಕಂಡು ಮನಸ್ಸಿಗೆ ಖೇದವುಂಟಾಯಿತು. ಹಳೇಬೀಡು ಹೊಯ್ಸಳರ 12ನೇ ಶತಮಾನದಲ್ಲಿ ರಾಜಧಾನಿಯಾಗಿತ್ತು. ಈ ಹೊಯ್ಸಳೇಶ್ವರ ದೇವಾಲಯವನ್ನು 1121ರಲ್ಲಿ ಕಟ್ಟಿಸಲಾಯಿತೆಂದು ಹೇಳಲಾಗಿದೆ. ಈ ದೇವಾಲಯವನ್ನು ಪೂರ್ಣಗೊಳಿಸಲು ಸುಮಾರು 190 ವರ್ಷಗಳಾಗಿದೆಯೆಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಹೊಯ್ಸಳೇಶ್ವರ ದೇವಾಲಯವು ನಾಲ್ಕು ಪ್ರವೇಶ ದ್ವಾರಗಳನ್ನು ಹೊಂದಿದ್ದು, ನ...

ಸೈಕಲ್ ಸವಾರಿ... ಹಾಸನ to ಪುದುವೆಟ್ಟು(near ಧರ್ಮಸ್ಥಳ)

       ಹೈಸ್ಕೂಲಿನಲ್ಲಿ ಇರುವಾಗ ಶುರುವಾದ ಸೈಕಲ್ ಸವಾರಿಯ ಹುಚ್ಚು ಈಗಲೂ ಕೂಡ ಕಡಿಮೆಯಾಗಲೇ ಇಲ್ಲ. ಯಾವಾಗ  ನಮಗೆ ಸುಸ್ತಾಗುವುದು ಕೂಡ ಒಂದು ನಶೆಯಂತೆ ಅನುಭವಕ್ಕೆ ಬರುತ್ತದೋ,! ಅದೊಂಥರಾ ಮಜಾನೆ ಬೇರೆ. ದೇಹ ದಣಿದು pain relief ಆಗುವಾಗ ಅದು ಇನ್ನೊಂದು ಥರ ಅನುಭವ, ದೇಹ ದಣಿದು ಬೆವರು ಸುರಿದ ನಂತರ ತಂಗಾಳಿಗೆ ಮೊಗವನ್ನೊಡ್ಡಿದಾಗ ಸಿಗುವ ಖುಷಿನೆ ಬೇರೆ. ಇದನ್ನೆಲ್ಲ ಅನುಭವಿಸಬೇಕಾದರೆ 40 ಕಿಲೋಮೀಟರ್ ಮೇಲ್ಪಟ್ಟ ಸೈಕಲ್ ಸವಾರಿ ಮಾಡಬೇಕು. ಈಗ ವಿಷಯಕ್ಕೆ ಬರೋಣ. ಹಾಸನದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದೆ, ಕೆಲವು ಅನಿವಾರ್ಯ ಕಾರಣಗಳಿಂದ ಹಾಸನವನ್ನು ಬಿಡಬೇಕಾಗಿ ಬಂತು.  ಆಗ ನನ್ನ ಜೊತೆ ಬೇಲೂರು, ಹಳೇಬೀಡು, ಗೊರೂರು ಹಾಗೂ ಹಾಸನದ ಗಲ್ಲಿ ಗಲ್ಲಿನು ಸುತ್ತಿದ್ದ ಸೈಕಲ್'ನ್ನು ಮಾರಿ ಹೋಗೋದಾ? ಅಥವಾ ಮನೆಗೆ ಸೈಕಲ್'ನಲ್ಲೇ ಹೋಗೋದಾ? ಎಂದು ಯೋಚಿಸ್ತಾ ಇದ್ದೆ. ಅವಾಗ್ಲೇ ಅಮ್ಮನಿಗೆ ಫೋನ್ ಮಾಡಿ "ಅಮ್ಮ ಯಾನ್  ಸೈಕಲ್'ಡು ಇಲ್ಲಾಗ್ ಬರೊಡ" (ಅಮ್ಮ ನಾನು ಸೈಕಲ್'ನಲ್ಲಿ ಊರಿಗೆ ಬರ್ಬೇಕಾ) ಎಂದು ಕೇಳಿದೆ ತಡ, ಒಂದಷ್ಟು ಬೈಗುಳದ ಜೊತೆಗೆ ಬುದ್ದಿವಾದದ ಮಿಶ್ರಿತ ಮಾತುಗಳು ಅಮ್ಮನ ಬಾಯಿಂದ ಉದುರಿ, ನನ್ನ ಕಿವಿಯೊಳಗೆ ನೊಣ ನುಸುಳಿದಂತಾಯಿತು. ಅಮ್ಮನ ಇಂತಹ ಮಾತುಗಳಿಗೆ ಕಾರಣಗಳು ಕೂಡ ಇತ್ತು. ಒಂದು ವಾರದ ಹಿಂದೆ ಸುರಿದ ಭಾರಿ ಮಳೆಗೆ ಚಾರ್ಮಾಡಿ ಘಾಟ್'ನಲ್ಲಿ ಎರಡು ಬಾರಿ ಭೂ ಕುಸಿತ ಉಂಟಾಗಿತ್ತು....