ಸೈಕಲ್ ಸವಾರಿ ಪುದುವೆಟ್ಟು to ಶಿಶಿಲ ಕುಮಾರಪರ್ವತ ಚಾರಣ ಹಾಗೂ ಶಿಶಿಲೇಶ್ವರ ದೇವಸ್ಥಾನಕ್ಕೆ ಸೈಕಲ್'ನಲ್ಲಿ ಹೋಗುವ ಪ್ಲಾನ್ sem ಎಕ್ಸಾಮ್ ಪ್ರಾರಂಭವಾಗುವ ಮೊದಲೇ ನಾಲ್ಕು ಜನ ಜೊತೆ ಸೇರಿ ತೀರ್ಮಾಣವಾಗಿತ್ತು. ಎಕ್ಸಾಮ್ ಮುಗಿದು ರಜೆಯಲ್ಲಿ ಒಂದುವಾರ ಕೆಲಸಕ್ಕೆ ಹೋಗಿದ್ದ ದುಡ್ಡನ್ನು ಎತ್ಕೊಂಡು ಹೋಗುವುದೇ ಎಂದು ನಾನು ತಯಾರಾಗಿದ್ದೆ. ಅಂತೆಯೇ ಕುಮಾರ ಪರ್ವತ ಚಾರಣಕ್ಕೆ ಒಂದು ದಿನ ಫಿಕ್ಸ್ ಮಾಡಿದ್ದೇವು. ಈ ಮೂವರು ಗೆಳೆಯರ ಉತ್ಸಾಹ ನೋಡಿ ಈ ಸಲ ಟ್ರೆಕ್ಕಿಂಗ್ ತುಂಬಾ ಆಡ್ವೆಂಚರ್ ಆಗಿ ಇರಬಹುದು ಎಂದು ಅಂದುಕೊಳ್ಳುತ್ತಾ ಒಳಗೊಳಗೇ ಖುಷಿಯಯಾಯಿತು. ಇನ್ನೇನು ಹೊರಡುವ ಮುನ್ನ ದಿನ ಇಬ್ಬರು ಒಂದೊಂದು ಡಬ್ಬಾ ಕತೆ ಕಟ್ಟಿ ಇಬ್ರು ಬರೋದಿಕ್ಕೆ ಆಗೋದಿಲ್ಲ ಎಂದು ಹೇಳಿ ತಪ್ಪಿಸಿಕೊಂಡ್ರು. ನನಗೆ ತುಂಬಾ ನಿರಾಸೆಯಾಯಿತು. ಕೊನೆಗೆ ಆ ಪ್ಲಾನ್'ನ್ನು ಅಲ್ಲೆ ಬಿಡಬೇಕಾಯಿತು. ಕೊನೆಗೆ ಶಿಶಿಲಕ್ಕದ್ರೂ ಸೈಕಲ್ ರೈಡ್ ಗಾದರು ಬರ್ತರಾ ಎಂದು ನೋಡಿದೆ ಅದಕ್ಕೂ ಯಾರು ಉತ್ಸಾಹ ತೋರಲಿಲ್ಲ ಕೊನೆಗೆ ನಾನೊಬ್ಬನೇ ಶಿಶಿಲಕ್ಕೆ ಸೈಕಲ್ ನಲ್ಲಿ ಹೋಗಲು ಹೊರಟುನಿಂತೆ. ನಮ್ಮ ಊರಿಂದ ಶಿಶಿಲಕ್ಕೆ ಸುಮಾರು 30ರಿಂದ 31 ಕಿ.ಮೀ ದೂರ. ಸೂರ್ಯ ನೆತ್ತಿಗೇರಿ ತನ್ನ ಪ್ರತಾಪವನ್ನು ತೋರಿಸುವ ಮುನ್ನವೇ ದೇವಸ್ಥಾನಕ್ಕೆ ಹೋಗಿ ಮನೆ ಸೇರ್ಕೊಬೇಕು ಎಂಬ ಪ್ಲಾನ್'ನಂತೆ ಬೆಳಗ್ಗೆ 6:45ಕ್ಕೆ...