ಸೈಕಲ್ ಸವಾರಿ
ಪುದುವೆಟ್ಟು to ಶಿಶಿಲ
ಕುಮಾರಪರ್ವತ ಚಾರಣ ಹಾಗೂ ಶಿಶಿಲೇಶ್ವರ ದೇವಸ್ಥಾನಕ್ಕೆ ಸೈಕಲ್'ನಲ್ಲಿ ಹೋಗುವ ಪ್ಲಾನ್ sem ಎಕ್ಸಾಮ್ ಪ್ರಾರಂಭವಾಗುವ ಮೊದಲೇ ನಾಲ್ಕು ಜನ ಜೊತೆ ಸೇರಿ ತೀರ್ಮಾಣವಾಗಿತ್ತು. ಎಕ್ಸಾಮ್ ಮುಗಿದು ರಜೆಯಲ್ಲಿ ಒಂದುವಾರ ಕೆಲಸಕ್ಕೆ ಹೋಗಿದ್ದ ದುಡ್ಡನ್ನು ಎತ್ಕೊಂಡು ಹೋಗುವುದೇ ಎಂದು ನಾನು ತಯಾರಾಗಿದ್ದೆ. ಅಂತೆಯೇ ಕುಮಾರ ಪರ್ವತ ಚಾರಣಕ್ಕೆ ಒಂದು ದಿನ ಫಿಕ್ಸ್ ಮಾಡಿದ್ದೇವು. ಈ ಮೂವರು ಗೆಳೆಯರ ಉತ್ಸಾಹ ನೋಡಿ ಈ ಸಲ ಟ್ರೆಕ್ಕಿಂಗ್ ತುಂಬಾ ಆಡ್ವೆಂಚರ್ ಆಗಿ ಇರಬಹುದು ಎಂದು ಅಂದುಕೊಳ್ಳುತ್ತಾ ಒಳಗೊಳಗೇ ಖುಷಿಯಯಾಯಿತು. ಇನ್ನೇನು ಹೊರಡುವ ಮುನ್ನ ದಿನ ಇಬ್ಬರು ಒಂದೊಂದು ಡಬ್ಬಾ ಕತೆ ಕಟ್ಟಿ ಇಬ್ರು ಬರೋದಿಕ್ಕೆ ಆಗೋದಿಲ್ಲ ಎಂದು ಹೇಳಿ ತಪ್ಪಿಸಿಕೊಂಡ್ರು. ನನಗೆ ತುಂಬಾ ನಿರಾಸೆಯಾಯಿತು. ಕೊನೆಗೆ ಆ ಪ್ಲಾನ್'ನ್ನು ಅಲ್ಲೆ ಬಿಡಬೇಕಾಯಿತು.
ಕೊನೆಗೆ ಶಿಶಿಲಕ್ಕದ್ರೂ ಸೈಕಲ್ ರೈಡ್ ಗಾದರು ಬರ್ತರಾ ಎಂದು ನೋಡಿದೆ ಅದಕ್ಕೂ ಯಾರು ಉತ್ಸಾಹ ತೋರಲಿಲ್ಲ ಕೊನೆಗೆ ನಾನೊಬ್ಬನೇ ಶಿಶಿಲಕ್ಕೆ ಸೈಕಲ್ ನಲ್ಲಿ ಹೋಗಲು ಹೊರಟುನಿಂತೆ.ನಮ್ಮ ಊರಿಂದ ಶಿಶಿಲಕ್ಕೆ ಸುಮಾರು 30ರಿಂದ 31 ಕಿ.ಮೀ ದೂರ. ಸೂರ್ಯ ನೆತ್ತಿಗೇರಿ ತನ್ನ ಪ್ರತಾಪವನ್ನು ತೋರಿಸುವ ಮುನ್ನವೇ ದೇವಸ್ಥಾನಕ್ಕೆ ಹೋಗಿ ಮನೆ ಸೇರ್ಕೊಬೇಕು ಎಂಬ ಪ್ಲಾನ್'ನಂತೆ ಬೆಳಗ್ಗೆ 6:45ಕ್ಕೆ ಮನೆಯಿಂದ ಸೈಕಲ್ ಏರಿ ಹೊರಟೆ. ಬೆಳಬೆಳಗ್ಗೆ ಆದುದರಿಂದ ಚಳಿಯ ಪ್ರಭಾವ ತುಸು ಹೆಚ್ಚೇ ಇದ್ದುದರಿಂದ ಬಾಡಿಯೆಲ್ಲ ಗಡಗಡ ವೈಬ್ರೆಟ್ ಆಗುತ್ತಿತ್ತು. ಅರ್ಧ ದಾರಿ ತಲುಪಿದಂತೆ ಸೂರ್ಯ ಮೆಲ್ಲಗೆ ಬಾನಿನಲ್ಲಿ ಇಣುಕಲು ಆರಂಭಿಸಿದ, ಮುಂದೆ ಸಾಗಿದಂತೆ,
ನಿರ್ಜನ ಕಾನನ ನೀರವ ಮೌನವನ್ನು ಸೀಳಿಕೊಂಡು ಸಾಗಿರುವ ಶಿಬಾರಜೆ ರಸ್ತೆಯಲ್ಲಿ ಸಾಗಿದರೆ, ಜೊತೆಗೆ ಚುಮ್'ಚುಮ್ ಚಳಿ ಹಾಗೂ ಮಂಜು ಮುಸುಕಿದ ವಾತಾವರಣ ಜೊತೆಗೂಡಿದರೆ ಇನ್ನೇನು ಸ್ವರ್ಗಕ್ಕೆ ನಾಲ್ಕೇ ಹೆಜ್ಜೆ ಎಂಬ ಹಾಗೆ feel ಆಗುತ್ತಿತ್ತು.
ಈ ರಸ್ತೆಯಲ್ಲಿ ಮರಗಳ ಚಪ್ಪರದ ಜೊತೆಗೆ ಇಳಿಜಾರು ಹಾಗೂ ಏರಿನದ್ದೇ ಹವಾ!, ಈ ರಸ್ತೆಯಲ್ಲಿ ಇಳಿಜಾರು ಎಷ್ಟು ಖುಷಿ ಕೊಡುತ್ತೋ ಏರು ರಸ್ತೆ ಅಷ್ಟೇ ಕಷ್ಟ ಕೊಡುತ್ತಿತ್ತು.
ಇನ್ನು ಈ ರಸ್ತೆಯ ಉದ್ದಕ್ಕೂ ಕಂಡು ಬರುವ ಪ್ರಕೃತಿ ಸೌಂದರ್ಯ ಪದಗಳನ್ನು ಮೀರಿದ್ದು!
ಸುಮಾರು 8:15ಕ್ಕೆ ಶಿಶಿಲೇಶ್ವರ ದೇಗುಲಕ್ಕೆ ತಲುಪಿದೆ. ಶಿಶಿಲೇಶ್ವರ ದೇವಾಲಯದ ಎಡ ಬದಿಯಲ್ಲಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಪೆರುವೆಲ್ ಮೀನುಗಳ(ದೇವರ ಮೀನು) ಮತ್ಸ್ಯ ತೀರ್ಥವಿದೆ. ಎಲ್ಲಾ ದೇವಸ್ಥಾನಗಳಲ್ಲಿರುವಂತೆ ಈ ದೇವಾಲಯದಲ್ಲಿ ಬಾವಿ ಇರುವುದಿಲ್ಲ.ಈ ಮತ್ಸ್ಯತೀರ್ಥವನ್ನೇ ದೇವರಿಗೆ ಅಭಿಷೇಕ ಮಾಡುವುದು ಇಲ್ಲಿಯ ವೈಶಿಷ್ಟ್ಯ.
ಇನ್ನು ಮೂರು ಕಡೆಯಲ್ಲೂ ವನ್ಯ ಸಂಪತ್ತು ತುಂಬಿಕೊಂಡು, ಒಂದು ಕ್ಷಣ ನಮ್ಮನ್ನು ಮೈಮರೆಸುವುದರಲ್ಲಿ ಸಂದೇಹವಿಲ್ಲ.
ದೇವರ ದರ್ಶನ ಪಡೆದ ನಂತರ ಬಹುಕಾಲ ನದಿಯಲ್ಲಿನ ಮೀನುಗಳನ್ನೇ ಮೈಮರೆತು ನೋಡುತ್ತಾ ಹಾಗೂ ಒಂದಷ್ಟು ಅರಳನ್ನು ಮತ್ಸಗಳಿಗೆ ಹಾಕುತ್ತಾ ಸಮಯ ಜಾರಿದ್ದು ಗೊತ್ತಾಗಲೇ ಇಲ್ಲ.
ಒಂದಷ್ಟು ಮೀನುಗಳ ಹಾಗೂ ದೇವಸ್ಥಾನದ ಫೋಟೋವನ್ನು ತೆಗೆದುಕೊಂಡು ಮತ್ತೊಮ್ಮೆ ದೇವರಿಗೆ ಮನದಲ್ಲಿಯೇ ನಮಿಸುತ್ತ ಶಿಶಿಲದಿಂದ 10:00 ಗಂಟೆಗೆ ಊರಿನ ದಾರಿಯ ಕಡೆಗೆ ಸೈಕಲ್ ಹ್ಯಾಂಡಲ್'ನ್ನು ತಿರುಗಿಸಿದೆ. ರಸ್ತೆಯ ಬದಿಯಲ್ಲಿ ಮರಗಳೇ ತುಂಬಾ ಇದ್ದುದರಿಂದ ಸುಸ್ತು ಅನ್ನೋದು ದೂರದ ಮಾತಗಿತ್ತು. ಸುಮಾರು 11:30ಗೆ ನಾನು ಮನೆಯನ್ನು ತಲುಪಿದೆ. ಎಕ್ಸಾಮ್'ನಿಂದ ಕಂಗೆಟ್ಟಿದ್ದ😜 ಮನಕ್ಕೆ ಈ ಒಂದು ಸೈಕಲ್ ರೈಡ್ ಹಾಗೂ ದೇವರ ದರ್ಶನ ಖುಷಿ ನೀಡಿತು...😍
ಸಾಧ್ಯವಾದರೆ ನೀವು ಶಿಶಿಲೇಶ್ವರ ದೇವಸ್ಥಾನಕ್ಕೆ ಹೋಗಿ ಬನ್ನಿ.






Comments
Post a Comment