Skip to main content

ಬೇಕಾಗಿದ್ದಾರೆ ಭಾಗ-2

****...ಬೇಕಾಗಿದ್ದಾರೆ...****

ಭಾಗ-2

          actually ಈ ಮಂಗ ಇಲ್ಲಿಗೆ ಬಂದೆ ಇರಲಿಲ್ಲ. ನಾವು ಕೂಡ ಇವನ ಜೊತೆ ಬರ್ಲಿ ಅಂತ ನಮಿಗೆಲ್ಲ ಸುಳ್ಳು ಹೇಳಿದ್ದ. ಅವಾಗ್ಲೇ ಗೊತ್ತಾಗಿದ್ದು, ನಾವು ಇಲ್ಲಿವರೆಗೆ ಬಂದಿದ್ದು "ಬೇಕಾಗಿದ್ದಾರೆ" ಜಾಹಿರಾತು ಮೂಲಕ ಎಂದು.
ಅವನಿಗೂ ಉದ್ಯೋಗವೊಂದನ್ನು ಹಿಡಿಯುವ ಆತುರದಲ್ಲಿ ಜೊತೆಗಾಗಿ ನಮ್ಮನ್ನು ಎಳೆದು ತಂದಿದ್ದ. ಅಂತೂ ಮತ್ತೆ ಕಂಪೆನಿಗೆ ಕರೆ ಮಾಡಿದಾಗ ಮತ್ತಾದೆ ನಯವಾದ female voice ವಿಳಾಸ ತಿಳಿಸಿದ್ದಳು. ಕಾಲ್ನಡಿಗೆಯಲ್ಲಿ ಹುಡುಕಿಕೊಂಡು ಹೊರಟೆವು.

ಮಗಂದ್!! ನಾವೆಲ್ಲೋ ದೊಡ್ಡ ಕಂಪನಿ ಅಂದ್ಕೊಂಡ್ರೆ. ಅದೊಂದು ಚಿಕ್ಕ office. ಸುಮಾರು 35, 40 ವಯಸ್ಸಿನ ಮೇಡಂ, ನಮ್ಮ ಮೇಲೆ ಬಹಳ ಕಾಳಜಿ ಇರುವಂತೆ ಮಾತಾಡಿದರು,  ನಿಮಗೆ ಯಾವ ಕಂಪನಿ ಆಗ್ಬೋದು TVS Ashok Leyland, Britannia......ಇನ್ನು ತುಂಬಾ ಹೇಳಿದ್ರು. ನಾವೇ ಮಾತಾಡಿಕೊಂಡು Ashok Leyland ಅಂತಾ ಹೇಳಿದಾಗ, ಬೇಡ TVS ಗೆ ಹೋಗಿ ಅದು ತುಂಬಾ ಒಳ್ಳೆಯದು ಅಂದರು.
ಎಲ್ಲ option ಕೊಟ್ಟು ಕೊನೆಗೆ ಅವರೇ ಸೆಲೆಕ್ಟ್ ಮಾಡಿದ್ದು ನೋಡಿ ನಾವು ಮುಖ ಮುಖ ನೋಡಿಕೊಂಡೆವು.
 ಮಾರ್ಕ್ಸ್ ಕಾರ್ಡ್,ಆಧಾರ್ ಕಾರ್ಡ್, ಜೆರಾಕ್ಸ್ ನಾಲ್ಕು ಫೋಟೋ, ಹಾಗೂ ಪ್ರತಿಯೊಬ್ಬರ ಕೈಯಿಂದ 2000 ರೂ ಪಡೆದುಕೊಂಡು, ಈ ಹಣವನ್ನು ಹಿಂತಿರುಗಿಸಲಾಗುವುದಿಲ್ಲ ಎಂಬ ಒಕ್ಕಣೆಯ ಮುಂದೆ ನಮ್ಮದೊಂದು ಸಹಿ ಹಾಕಿಸಿ. ಅದ್ಯಾರಿಗೋ ಕರೆ ಮಾಡಿದ ನಂತರ "ನೀವು ಅತ್ತಿಬೆಲೆಗೆ ಹೋಗಿ, ಅಲ್ಲಿಗೆ ತಲುಪಿದ ನಂತರ ಈ ನಂಬರ್ ಗೆ ಕರೆಮಾಡಿ, ಅಲ್ಲಿ ನಮ್ಮ ಹುಡುಗರು ಸಿಗುತ್ತಾರೆ," ಎಂದು ಮೊಬೈಲ್ ನಂಬರ್ ಕೊಟ್ಟು ಕಳುಹಿಸಿದರು. ಅಲ್ಲಿಗೆ ಇವರ ಮಧ್ಯವರ್ತಿ ಕೆಲಸ ಮುಗಿದಿತ್ತು.

ಅಂತೂ ಮದ್ಯಾಹ್ನಕ್ಕೆ ಅತ್ತಿಬೆಲೆಗೆ ತಲುಪಿ ಅವರು ಕೊಟ್ಟ ನಂಬರ್ಗೆ ಕರೆ ಮಾಡಿದ ಅರ್ಧ ಗಂಟೆ ನಂತರ ಹೆಡ್ ಲೈಟ್  ಇಲ್ಲದ, ಇಂಡಿಕೆಟರ್ ಇಲ್ಲದ ಎರಡು ಬೈಕ್'ನಲ್ಲಿ ಇಬ್ಬರು ಬಂದ್ರು. ಉದ್ದ ಕೂದಲು, ಶೋಕಿ ಜೀವನ ಅಂತ ನೋಡುವಾಗಲೆ ಗೊತ್ತಾಗುತ್ತಿತ್ತು.
ಎಲ್ಲಿ ಏನು, ಎಂತಾ, ವಿಚಾರಿಸಿ. ಪ್ರತಿಯೊಬ್ಬರ ಕೈಯಿಂದ ಮತ್ತೆ 600 ರೂ. ಮತ್ತೆ ಪಡೆದುಕೊಂಡರು. ನಾವು ಅವಾಗ್ಲೇ pay ಮಾಡಿ ಆಗಿದೆ ಸರ್ ಅಂದ್ರೆ. ಇದು ಇಲ್ಲಿನ ಕೆಲಸಕ್ಕೆ join ಆಗಲು ಅಡ್ವಾನ್ಸ್ ಎಂದ. ಮರು ಮಾತಾಡಲಿಲ್ಲ. ನಾನು ಅವಿನಾಶ್ ಐದೈದು ಸಾವಿರ ತಂದಿದ್ರೆ. ಇನ್ನಿಬ್ಬರು ಸ್ವಲ್ಪ ಕಮ್ಮಿ ತಂದಿದ್ದರು. ಪರ್ಸ್'ನ ತೂಕ ಇಳಿಮುಖದತ್ತ ಸಾಗಿತ್ತು. ಅಲ್ಲಿಂದ ಎರಡು ಬೈಕ್ನಲ್ಲಿ ತ್ರಿಬಲ್ ಮಾಡಿಕೊಂಡು. ಒಂದೈದು km  ದೂರದಲ್ಲಿರುವ ರೂಮ್'ಗೆ ಕರೆದುಕೊಂಡು ಬಂದ್ರು ಸಂಜೆ ಹೋಗೋಣ ಇಲ್ಲೇ ಇರಿ ಹೇಳಿ, ಅಲ್ಲೇ ಮಲಗಿಕೊಂಡ,
ಸಂಜೆ ನಿದ್ದೆಯಿಂದ ಎದ್ದವಾ,ಅದ್ಯಾವುದೋ ತಮಿಳ್ ಬೋರ್ಡ್'ನ ಬಸ್ ಹತ್ತಿಸಿ ಒಂದಾರು km ದೂರದಲ್ಲಿ ಇಳಿಸಿದ, ಅಲ್ಲಿಂದ ಒಳಗೊಂದು ರಸ್ತೆಯಲ್ಲಿ ಕರೆದುಕೊಂಡು ಹೋದರು. ಅದು ಪೂರ industrial ಏರಿಯಾ. ಹಡಗಿನಂತಹ ದೊಡ್ಡ  Shelterಗಳು ಅದರ ಹಣೆಯಲ್ಲಿ ದೊಡ್ಡದಾಗಿ ಕಂಪೆನಿಯ ಹೆಸರು, ಒಳಗಡೆಯಿಂದ ಮಿಷಿನ್'ಗಳ ದೊಡ್ಡದದಾ ಸದ್ದು. ನಾವು ನಮ್ಮದೇ ಚಿಂತೆಯಲ್ಲಿ ಅವನನ್ನು ಹಿಂಬಲಿಸುತ್ತ ಹೆಜ್ಜೆ ಹಾಕಿದೆವು. ಅಂತೂ ಆಕಾಶದಲ್ಲಿ ಸೂರ್ಯ ಕಾಣೆಯಾಗುವ ಹೊತ್ತಿಗೆ, ನಾವು  TVS ಕಂಪನಿಯ ಮುಂದೆ ನಿಂತಿದ್ದೆವು. ಸೆಕ್ಯುರಿಟಿಯಿಂದ 4 ಟಿಕೆಟ್ ಕೊಡಿಸಿ ಕಂಪೆನಿಯ ಒಳಗೆ ಬಿಟ್ಟು ಹೋದ. ಒಳಗೆ ಕಿರ್ರ್ ಎಂದು ಸದ್ದು ಮಾಡುವ ದೊಡ್ಡ ದೊಡ್ಡ ಮಿಷಿನ್'ಗಳು. ಅದೊಂದು Tvs ಕಂಪೆನಿಯ ಬೈಕ್ ಹಾಗೂ ಸ್ಕೂಟಿಯ ಬಿಡಿ ಭಾಗಗಳನ್ನು ತಯಾರಿಸುವ ಫ್ಯಾಕ್ಟರಿಯಾಗಿತ್ತು.


ನಾವು ಹೋದ ತಕ್ಷಣವೇ ಒಬ್ಬಾತ 'ಇವತ್ತು ನೈಟ್ ಡ್ಯೂಟಿ ಮಾಡಿ" ಎಂದು ಹೇಳಿದ.
ಏನು ಎಂತಾ ಕೇಳದೆ ನಮಿಗೆ ಅದೇಗೆ ಕೆಲಸ ಹೇಳಿದನೋ ಒಂದು ಗೊತ್ತಗಲಿಲ್ಲ. ಇನ್ನೊಬ್ಬರು ಬಂದು ಬಾಕ್ಸ್ ಗಳನ್ನು ಸೆಟ್ ಮಾಡ್ಲಿಕೆ ಹೇಳಿದ್ರು. ಅಲ್ಲಿಯೇ ನಮ್ಮ ಹಾಗೇನೇ ಬಂದಿದ್ದ ಉತ್ತರ ಕರ್ನಾಟಕದ ಮಂದಿ, ನಮ್ಮ ಕೆಲಸದ ಜೊತೆ ಅವರು ಸೇರಿಕೊಂಡರು. ಅವರು ಒಂದೊಂದು ವಿಷಯಗಳನ್ನು ಹೇಳತೊಡಗಿದರು. " ಇಲ್ಲಿಗೆ ಬಂದು 7 ತಿಂಗಳು ಆಯ್ತು ಇನ್ನು ಸಂಬಳನೆ ಆಗಿಲ್ಲ". ಇನ್ನೊಬ್ಬ "ಕೆಲಸದ ಸಮಯದಲ್ಲಷ್ಟೇ ಎರಡು ಹೊತ್ತು ಊಟ ಉಳಿದದ್ದು ನಾವೇ ನೋಡ್ಕೋಬೇಕು" ಎಂದ. ಒಬ್ಬೊಬ್ಬರದು ಒಂದೊಂದು ರೋಧನೆ ಕೇಳಿದಾಗ ನಮಿಗೆ ನಿಂತಲ್ಲೇ temperature ಜಾಸ್ತಿಯಾಗಿತ್ತು.

ಅದೇನೋ ಕಾರಣದಿಂದ ಅವತ್ತು ನೈಟ್ ಡ್ಯೂಟಿ ಕ್ಯಾನ್ಸಲ್ ಆಯಿತು. ಕಂಪನಿಯಿಂದ ಹೊರಗೆ ನಮಿಗೊಂದು ರೂಮ್ ತೋರಿಸಿದರು. ಅದರಲ್ಲಿ ಅದಾಗಲೇ ಅಡ್ಡ ನೀಟ ಬಿದ್ದುಕೊಂಡಿದ್ದರು, ಬದಿಯಲ್ಲಿ ಸ್ವಲ್ಪ ಜಾಗವಿತ್ತು. ಇದನ್ನು ನೋಡಿ ಮೂವರು ಕೂಡ ಹೇಳಿದ್ರು. "ಈ ರಾತ್ರಿಯಲ್ಲೇ ಇಲ್ಲಿಂದ ಜಾಗ ಖಾಲಿ ಮಾಡೋಣ". ನಾನು ಸ್ವಲ್ಪ ಹಿಂಜರಿದೆ, ಮೊದಲೇ ಬೆಂಗಳೂರಿಗೆ ಹೋಗುತ್ತೇನೆಂದು ಮನೆಯಲ್ಲಿ ರಂಪ ಮಾಡಿ ಬಂದಿದ್ದ ನನಿಗೆ ವಾಪಸ್ ಮನೆಗೆ ಹೇಗೆ ಮುಖ ತೋರಿಸಲಿ ಎನ್ನುವ ಭಯ. ಮನೆಗೆ ಫೋನ್ ಮಾಡದೆ ಚಿಕ್ಕಮ್ಮನಿಗೆ ಫೋನ್ ಮಾಡಿ," ಕೆಲಸ ಅಷ್ಟೊಂದು ಸರಿ ಇಲ್ಲ, ನಾಳೆ ಏನಾಗುತ್ತೋ ನೋಡ್ತೇನೆ," ಎಂದು ಹೇಳಿದೆ. ಮೊಬೈಲ್ನಲ್ಲಿ ಇದ್ದ ಬ್ಯಾಲೆನ್ಸ್ ಒಂದೇ ಬಾರಿಗೆ ಖಾಲಿಯಾಗಿತ್ತು. ಯಾಕಂತ ನೋಡಿದ್ರೆ, ತಮಿಳುನಾಡು ರೋಮಿಂಗ್ ಮೆಸೇಜ್ ಬಂದಿತ್ತು.   ಕೊನೆಗೆ ನಾನೇಲಿದೆ "ನಾಳೆ ಒಂದು ದಿನ ನೋಡುವ ಏನಾದರೂ ಬದಲಾವಣೆ ಕಾಣಬಹುದು" ಎಂದು. "ಆಯ್ತು" ಎಂದು ಎಲ್ರು ಒಪ್ಪಿಕೊಂಡರು. ಹೇಗೋ ಬದಿಯಲ್ಲಿ ನಾಲ್ವರು ಬಿದ್ದುಕೊಂಡೆವು. ಆ ಸೆಕೆಯಲ್ಲಿ ಈ ಚಿಂತೆಯಲ್ಲಿ ನಿದ್ದೇನೆ ಬರಲಿಲ್ಲ, ಯಾವಾಗ ಬೆಳಗ್ಗೆ ಆಗುತ್ತೋ ಎಂದು ಮಲಗಿದಲ್ಲೆ  ಕಾಯುತ್ತಿದ್ದೆವು, ಅಂತೂ ಬೆಳಗಾಯಿತು ಎದ್ದು ಮುಖ ತೊಳೆಯೋಣ ಅಂತ bathroom ಕಡೆ ಹೋದ್ರೆ Toliletನಲ್ಲಿ  ಮೂತ್ರ ಮಾಡಿ ನೀರಿಲ್ಲದ್ದೆ ಹಳದಿಗಟ್ಟಿತ್ತು ಅದನ್ನು ನೋಡಿದ್ದೆ ತಡ ಬ್ಯಾಗ್ ಪ್ಯಾಕ್ ಮಾಡಿ ಹೊರಡೋಣ ಅಂದುಬಿಟ್ಟೆ.
ರೂಮ್'ನವರು ಎದ್ದೇಳುವ ಮುಂಚೆನೇ ನಾವು ಜಾಗ ಖಾಲಿ ಮಾಡಿದ್ದೆವು. ಅಲ್ಲಿಂದ ಮೈನ್ ರೋಡ್'ವರೆಗೆ ನಡೆದು ರಿಕ್ಷಾ ಹಿಡಿದು ಅತ್ತಿಬೆಲೆಗೆ ತಲುಪಿದೆವು. ಪರ್ಸ್ ನೋಡಿದ್ರೆ ಅದೊಗತಿಗೆ ಇಳಿದಿತ್ತು. ಇನ್ನೊಂದು ಕಡೆ ಮುಖನು ತೊಳೆದಿಲ್ಲ. ಬೆಂಗಳೂರಿನಲ್ಲಿ ಒಂದು ನರ ಪಿಳ್ಳೆಯ ಪರಿಚಯ ಕೂಡ ಇಲ್ಲ. ಇಲ್ಲಿಂದ ಒಂದೊಂದು ರೂಪಾಯಿ ಕೂಡ ಲೆಕ್ಕಾಚಾರದಲ್ಲಿಯೇ ನಡೆಸಬೇಕಿತ್ತು.

ಒಂದು ಕಡೆ ಹಣ ಕಳೆದುಕೊಂಡ ಬೇಸರದಲ್ಲಿ ಮಲ್ಲೇಶ್ವರಂಗೆ ಹೋಗಿ ಜಗಳ ಮಾಡೋಣ ಅನ್ನುವಷ್ಟು ಕೋಪ ಬಂದಿತ್ತು. ಅಲ್ಲಿಗೆ ಹೋಗೊಕ್ಕೂ ಹಣದ ಸಮಸ್ಯೆ. ಅತ್ತಿಬೆಲೆಯಿಂದ ಮೆಜೆಸ್ಟಿಕ್'ಗೆ ಬಂದು ಸೀದಾ ಧರ್ಮಸ್ಥಳ ಬೋರ್ಡ್ ಹೊತ್ತುಕೊಂಡಿರುವ ಬಸ್ಸನ್ನು ಹುಡುಕುತ್ತ ಹೋದೆವು. ಅಲ್ಲೇ ಬಸ್ಟ್ಯಾಂಡ್'ನಲ್ಲಿ  freshup ಆಗಿ ಎಲ್ಲರ ಹಣ ಒಟ್ಟು ಮಾಡಿದಾಗ 1200 ಆಗಿತ್ತು. ಅವಾಗ ಟಿಕೆಟ್ಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ 301ರೂ. ಇತ್ತು ನಾಲ್ಕು ರೂಪಾಯಿಯನ್ನು ಮುಗುಳ್ನಗೆಯ ಮೂಲಕ pay ಮಾಡಿದೆವು. ಆ ಒಂದು ರಾತ್ರಿ ಹಾಗೂ ಇಡೀ ದಿನ ಊಟ ಇಲ್ಲದೆ ಬಸ್ ಸ್ಟಾಪ್ ಇರುವ ಬಸ್ಟ್ಯಾಂಡಿನಲ್ಲಿ ಬಾಟಲ್'ಗೆ ನೀರು ತುಂಬಿಸಿಕೊಂಡು ಬಂದು ಕುಡಿಯೋದೊಂದೆ ದಾರಿಯಾಗಿತ್ತು. ಅಂತೂ ಸಂಜೆ ಧರ್ಮಸ್ಥಳ ತಲುಪಿದೆವು.
ಅಲ್ಲೇ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ರಂಜಿತ್ ಗೆ ಕರೆಮಾಡಿ, ಒಂದು 200ರೂ. ಕೊಡು ಮಾರಾಯ ಎಂದು ಕೇಳಿದೆವು.
ಎಲ್ಲರೂ 50, 50 ಹಂಚಿಕೊಂಡು ಮನೆಗೆ ನಡೆದೆವು.

ನನಿಗೆ ಮನೆಗೆ ಹೇಗೆ ಹೋಗುವುದು ಎಂಬುದೇ ಚಿಂತೆಯಾಗಿತ್ತು. ಆಗಸದಲ್ಲಿ ಸೂರ್ಯ ತನ್ನ ಕೆಲಸ ಮುಗಿಸಿ ಬಹಳ ಸಮಯನೇ ಆಗಿತ್ತು.  ಅಪ್ಪ ಮನೆಯ ಹೊರಗೇನೆ ಕೂತಿದ್ದರು. ಅವರ ಕೋಪದ ತೀಕ್ಷ್ಣತೆಯನ್ನು ಎದುರಿಸಲಾಗದೆ ಅವರತ್ತ ನೋಡದೇ ಸೀದಾ ಮನೆಯೊಳಗೆ ಸೇರಿದೆ. ಮನೆಯಲ್ಲಿ ಕೆಲಸ ಸರಿ ಇರಲಿಲ್ಲ ಹಾಗಾಗಿ ವಾಪಸ್ ಬಂದ್ಬಿಟ್ಟೆ ಅಂತ ಮಾತ್ರ ಹೇಳಿದ್ದೆ.
ಐದುಸಾವಿರ ರೂಪಾಯಿ  ಕಳೆದುಕೊಂಡಿದ್ದೇನೆ ಅಂತ ಮನೆಯಲ್ಲಿ ಇವತ್ತಿಗೂ ಗೊತ್ತಿಲ್ಲ.
ಅಂತೂ ಊರಲ್ಲಿ 25ದಿನ ಹೋಟೆಲ್ನಲ್ಲಿ ಕೆಲಸ ಮಾಡಿದ ಹಣವನ್ನು ಧರ್ಮಕ್ಕೆ ಅವರ ತಿಗಲೇಗೆ ಇಟ್ಟು ಬಂದಿದ್ದೆ.
ಅಷ್ಟೋತ್ತಿಗೆ ಮಳೆಗಳ ಕೂಡ ಶುರುವಾಗಿತ್ತು. ಊರಲ್ಲಿ ಕೂಡ ಯಾವುದೇ ಕೆಲಸವಿರಲಿಲ್ಲ. ಮತ್ತದೇ ಹೋಟೆಲ್ಗೆ ಹೋಗಲು  ಆಸಕ್ತಿ ಇಲ್ಲದೆ, ಎರಡು ತಿಂಗಳು ಮನೆಯಲ್ಲಿಯೇ ದನಗಳಿಗೆ ಹುಲ್ಲು ಸೊಪ್ಪು ತರುವುದು. ಅಪ್ಪ ಅಮ್ಮನ ಸುಪ್ರಭಾತ ಕೇಳೋದು ಅಷ್ಟೇ ಕೆಲಸವಾಗಿತ್ತು. ಆಮೇಲೆ ಒಂದು ದಿನ ಬೆಳಗ್ಗೆ ಡೈರಿಗೆ ಹಾಲು ಹಾಕಲು ಹೋದಾಗ ಪ್ರವೀಣ್ ಹೇಳಿದ  ಹಾಸನದಲ್ಲೊಂದು ಕ್ಯಾಶರ್ ಕೆಲಸವಿದೆಯೆಂದು.
ಅಲ್ಲಿ ಹೋದ ಮೇಲೆ ಸ್ವಲ್ಪ ಸುಧಾರಿಸಿಕೊಂಡೇ ಒಂದು ವರ್ಷ ಅಂತ ಹೋದವನು ಎರಡು ವರ್ಷ ಅಲ್ಲೇ ಇದ್ದೆ...
ಪಿಯುಸಿ  ಆದ್ಮೇಲೆ ಎರಡು ವರ್ಷ ಕೆಲಸ ಮಾಡಿ ಮತ್ತೆ ಡಿಗ್ರಿ ಸೇರಿದೆ.
ಕೆಲವರು ನಿಕ್ ದಾದ ಮರ್ಲ್ ಮರ್ರೆ. ಅಂತ ಹೇಳಿದ್ದು ಇದೆ...🤣☺️

ಮುಗಿಯಿತು...🙏🙏

Comments

Popular posts from this blog

ಬಂಡಾಜೆಯ ಹಾದಿ

               ===== ಬಂಡಾಜೆಯ ಹಾದಿ ===== ಮುಂಡಾಜೆ ಹಾಸ್ಟೆಲ್ನಲ್ಲಿ ಇರುವಾಗಲೇ ನನಿಗೆ ಬಂಡಾಜೆಗೊಮ್ಮೆ ಹೋಗ್ಬೇಕು ಎಂಬ ಆಸೆ ಮೂಡಿತ್ತು.(ಎಂಟು ವರ್ಷದ ಹಿಂದೆ)ಯಾಕೆಂದರೆ ಬೆಳ್ಳಿಯ ಹೊಳಪಿನಿಂದ ವಯ್ಯಾರದಿಂದ ಮೇಲಿಂದ ಜಿಗಿಯುವುದು ನಮ್ಮ ಹಾಸ್ಟೆಲ್ಗೆ ಕಾಣುವಷ್ಟು ಅಂದವಾಗಿ ಬೇರೆಲ್ಲಿಯೂ ಕಾಣಿಸೋದಿಲ್ಲ ಅನಿಸುತ್ತೆ. ಮೊನ್ನೆ ಎಕ್ಸಾಮ್ ಮುಗಿದ ಮೇಲೆ ಎಲ್ಲಿಗಾದರು ಹೋಗಬೇಕು ಎಂದು ಅನಿಸಿದಾಗಲೇ ಬಂಡಾಜೆಗೆ ಹೋಗೋಣವೆನಿಸಿತು. ಒಂದೈದು ಜನಕ್ಕೆ ಕರೆಮಾಡಿ ಕೊನೆಗೆ ಹಮೀದ್, ರಕ್ಷಿತ್ ಸಿಕ್ಕರು. ಎರಡು ಬೈಕಿನಲ್ಲಿ ಬೆಳಗ್ಗೆ 8 ಗಂಟೆಗೆನೆ ಬ್ಯಾಗ್'ಗೆ ನೀರು, ಬಿಸ್ಕೆಟ್ ಪ್ಯಾಕೇಟ್ಗಳನ್ನು ತುಂಬಿಕೊಂಡು, ನಾವು ಮೂವರು ಬಂಡಾಜೆಯ ತಣ್ಣನೆಯ ನೀರನ್ನು ಸ್ಪರ್ಶಿಸಲು ಹಾತೊರೆಯುತ್ತ ಹೊರಟೆವು. ಪಶ್ಚಿಮ ಘಟ್ಟದ ಬುಡಕ್ಕೆ ಹೋಗಿ ಬಂಡಾಜೆಯ ತುತ್ತಾ ತುದಿಗೆರಲು ಅರಣ್ಯ ಇಲಾಖೆಗೆ ಸಂಬಂಧಿಸಿದವರ ಅನುಮತಿಯನ್ನು ಪಡೆದುಕೊಂಡು ಪ್ರಶಾಂತವಾಗಿದ್ದ ಕಾಡೊಳಗೆ ಹೆಜ್ಜೆ ಹಾಕಿದೆವು. ದಾರಿ ತುಂಬಾ ತರೆಗೆಲೆ ಹರಡಿದ್ದರಿಂದ ಪ್ರತಿ ಹೆಜ್ಜೆ ಕೂಡ ಕಾಡಿನ ನಿಶಬ್ಧತೆಗೆ ಭಂಗ ತರುವಂತಿತ್ತು. ಆಗ ತಾನೇ ಮೇಲೇರುತ್ತಿದ್ದ ಸೂರ್ಯ ಕಾಡೊಳಗಿನ brightnessನ್ನು ಹೆಚ್ಚಿಸಲು ಮರಗಳ ಚಪ್ಪರದೊಂದಿಗೆ ಸೆಣಸುತ್ತ ಲಗ್ಗೆ ಇಡುತ್ತಿದ್ದ. ನಾವು ಮಾತ್ರ ಲೋಕದ ಚಿಂತೆಗಳೆಲ್ಲವನ್ನು ಬಿಟ್ಟು ಕಾಲಿ...

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.

ತಡಿಯಂಡಮೊಳ್ ಚಾರಣ ಭಾಗ -2, ನಾಲ್ನಾಡು ಅರಮನೆ.           ಅರಮನೆಯನ್ನು ನೋಡಿಕೊಳ್ಳುವವರು ನಮ್ಮನ್ನೋಡಿ ವೇಗವಾಗಿ ಧಾವಿಸಿ ನಗುಮೊಗದಿಂದಲೇ ಸ್ವಾಗತಿಸಿದರು. ಅಂದಾ ಹಾಗೆ, ಈ ನಾಲ್ನಾಡು ಅರಮನೆಯ ನಿರ್ಮಾಣದ ಕುರಿತು ಇತಿಹಾಸವನ್ನು ಹುಡುಕುತ್ತ ಹೋದರೆ, ದೊಡ್ಡವೀರ ರಾಜೇಂದ್ರರು ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸೂಕ್ತ ಸ್ಥಳವನ್ನು ಹುಡುಕುತ್ತ ಬಂದಾಗ ಅವರ ಕಣ್ಣಿಗೆ ಬಿದ್ದಿದ್ದು ಈ ಬೆಟ್ಟ ಶ್ರೇಣಿಗಳಿಂದ ಹಾಗೂ ದಟ್ಟವಾದ ಕಾನನದಿಂದ ಸುತ್ತುವರೆದ ಯುವಕಪಾಡಿ ಗ್ರಾಮದಲ್ಲಿರುವ ಈ ಪ್ರದೇಶ. ಈ ಸ್ಥಳದಲ್ಲಿ 1792ರಲ್ಲಿ ಎರಡು ಅಂತಸ್ತಿನ ಸಣ್ಣ ಅರಮನೆಯನ್ನು  ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತೆ. ಅರಮನೆಯನ್ನು ನೋಡಿಕೊಳ್ಳುವವರು, ನಮ್ಮ ಊರಿನ ಬಗ್ಗೆ ಹಾಗೂ ನಮ್ಮ ಪರಿಚಯ ಮಾಡಿಕೊಳ್ಳುತ್ತಾ, ಅರಮನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅರಮನೆಯೊಳಗೆ ಹೆಜ್ಜೆ ಹಾಕಿದರು. ನಾವು ಅವರನ್ನು ಹಿಂಬಾಲಿಸುತ್ತಾ ಮುಖ್ಯ ದ್ವಾರವನ್ನು ದಾಟಿ ಅರಮನೆಯೊಳಗೆ ಹೋದಾಗ ಬಲ ಬದಿಯಲ್ಲಿ ಒಂದು ಮಂಟಪವಿದೆ. ಇವರು ಹೇಳುವ ಪ್ರಕಾರ ಇದು ದೊಡ್ಡವೀರ ರಾಜೇಂದ್ರರ ತಂಗಿಯ ವಿವಾಹ ಮಂಟಪವೆಂದು  ಹೇಳಿದರು. ಆದರೆ ನಾನು ಗೂಗಲ್ನಲ್ಲಿ ಜಾಲಾಡಿದಾಗ ದೊಡ್ಡವೀರ ರಾಜೇಂದ್ರರ ಮದುವೆ ಮಂಟಪವೆಂದು ತಿಳಿದು ಬರುತ್ತದೆ. ಈ ಮಂಟಪಕ್ಕೆ ನಾಲ್ಕು ಪ್ರವೇಶ ದ್ವಾರಗಳಿದ್ದು ಮೇಲ್ಬಾಗದಲ್ಲಿ ನಾಲ್ಕು ದಿಕ್ಕಿಗ...

ಬಿರ್ಲಾ ದೇವಸ್ಥಾನ ಕೋಲ್ಕತಾ.

  ಬೆಳಗ್ಗೆನೇ ನಿತ್ಯ ದಿನಚರಿಗಳನ್ನು ಮುಗಿಸಿ, ಕ್ಯಾಮೆರಾ ಬ್ಯಾಗ್ ಎತ್ತಿಕೊಂಡು ಕಂಟೋನ್ಮೆಂಟ್ ನಿಂದ ಹೊರಗೆ ಬಂದೆ. ಅಲ್ಲಿಂದ ಸೀದಾ ಬಂದವ ಪ್ರತಿ ರಜೆಯ ದಿನ ಚಾ ಕುಡಿವ ಸ್ಥಳಕ್ಕೆ ಬಂದು, ಒಂದು ಚಹಾದ ಜೊತೆಗೆ ಹೂಗ್ಲಿ ನದಿಯ ಹರಿವನ್ನು ನೋಡುತ್ತಾ  ಇವತ್ತು  ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಾ ಗೂಗಲ್ ಮಾಡಿದಾಗ ಮೊದಲೇ Note ಮಾಡಿಟ್ಟುಕೊಂಡಿದ್ದ ಬಿರ್ಲಾ ಮಂದಿರ ಕಾಣಿಸಿತು. ನಾನಿದ್ದ ಸ್ಥಳದಿಂದ ನಡೆದುಕೊಂಡು ಹೋಗಲು ಎಷ್ಟು ಕಿಮೀ ಇದೆ ಎಂದು ಹುಡುಕಿದಾಗ 8 ಕಿಮೀ ತೋರಿಸಿತು. ಅಲ್ಲಿಂದ ಸೀದಾ ವೇಗವಾಗಿ ಹೆಜ್ಜೆ ಯ ಮೇಲೊಂದು ಹೆಜ್ಜೆ  ಹಾಕುತ್ತಾ ಹೊರಟೆ. ಯಾಕಂದ್ರೆ 11ಕ್ಕೆ ದೇವಸ್ಥಾನ ಕ್ಲೋಸ್ ಆಗುತ್ತೆ ಎನ್ನುವ ಮಾಹಿತಿ ಕೂಡ ಗೂಗಲ್ ನಲ್ಲಿ ತೋರಿಸ್ತಾ ಇತ್ತು. ಇನ್ನು ನನ್ಯಾವತ್ತು ಸುತ್ತಾಡಲು ಪ್ರಾಥಮಿಕವಾಗಿ ಆಯ್ಕೆ ಮಾಡುವ ಸ್ಥಳ ಯಾವುದೆಂದರೆ, ನಮಗೆ ನಡೆದುಕೊಂಡು ಹೋಗಲು ಸಾಧ್ಯವಿರುವಂತಹ ಸ್ಥಳಗಳು, ಯಾಕಂದ್ರೆ ನಡೆದುಕೊಂಡು ಹೋಗುವಾಗ ನಮಗೆ ಬೇಕಾದ ಹಾಗೆ ಫೋಟೋವನ್ನು ಸೆರೆ ಹಿಡಿಯಬಹುದು ಹಾಗೂ ಏಕಾಂಗಿಯಾಗಿ ನಡೆದುಕೊಂಡು ಹೋಗುವ ಒಂದು ಮಜನೆ ಇದ್ಯಾಲ್ವ ಅದೊಂದು ನಶೆನೆ ಬೇರೆ ಮರ್ರೆ. ಅಂತೂ 10 ಗಂಟೆ ಆಗುವಷ್ಟರಲ್ಲಿ ಬಿರ್ಲಾ ಮಂದಿರಕ್ಕೆ ತಲುಪಿದೆ. ಮೊದಲನೆಯದಾಗಿ ಅಲ್ಲಿನ ಸಿಬ್ಬಂದಿ ನಗು ಮೊಗದೊಂದಿಗೆ ಸ್ವಾಗತಿಸಿದರೆ ಎರಡನೆಯದಾಗಿ ಇಲ್ಲಿ "ಯಾವುದೇ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲು ಅವಕಾಶ ಇಲ್ಲ" ಎಂದರು. ಇನ್ನು...