ಹಾಸ್ಟೆಲ್ ನೆನಪು...
ಗದ್ದೆ, ತೋಟ, ಕಾಡು, ಹಳ್ಳ, ನಾಯಿ, ದನ ಆಟ ಅಂತ ತಿರುಗಾಡುತ್ತಿದ್ದ ಕಾಲದಲ್ಲಿ 6ನೇ ತರಗತಿಗೆ, ನನ್ನನ್ನು ಹಾಸ್ಟೆಲ್'ಗೆ ಎತ್ತಾಕಿದ್ರು, ಮಳೆಗಾಲ ಬೇರೆ, ಕಾರ್ಮೋಡ ಕವಿದಾಗ ಮನೆ, ಮನೆಯವರನ್ನೆಲ್ಲ ನೆನೆದುಕೊಂಡಾಗ ಮನಸ್ಸಲ್ಲಿ ಬೇಡ ಅಂದ್ರು, ಕಣ್ಣಂಚಿನಲ್ಲಿ ನೀರು ಬರುತ್ತಿತ್ತು. ನಮ್ಮನ್ನು ಸಮಾಧಾನ ಮಾಡಲು 7, 8ನೇ ತರಗತಿಯವರು "ಲೋ ಯಾಕೋ ಅಳ್ತಿಯಾ, ನಾವೆಲ್ಲ ಇಲ್ವಾ ಇಲ್ಲಿ, ಎಲ್ಲ ಸರಿಯಾಗುತ್ತೆ ಇನ್ನೊಂದೆರಡು ತಿಂಗಳು ಅಷ್ಟೇ" ಎಂದು ಹೇಳುತ್ತ ಸಮಾಧಾನ ಮಾಡುತ್ತಿದ್ದರು. ನನಗಂತೂ ಈ ಹಾಸ್ಟೇಲ್ ಜೀವನ Ristrict ನ ಒಳಗೆ ಬದುಕಬೇಕಾದ್ದರಿಂದ ಜೈಲ್'ನಲ್ಲಿ ಹಾಕಿದಂತಾಗಿತ್ತು. ಇದಕ್ಕೆಲ್ಲ ಕುಮ್ಮಕ್ಕು ಕೊಡುವಂತೆ 9,10ನೆಯವರ ಹವಾ ಬೇರೆ ಕೇಡು!.
ಒಂದು ವರ್ಷ ಹೇಗೋ ತೆಪ್ಪಾಗೆನೆ ಕಳೆದುಹೋಯಿತು.
7ನೇ ತರಗತಿಗೆ ಬಂದಾಗ ಹಾಸ್ಟೆಲ್ ಸಿಬ್ಬಂದಿಯ ಕಣ್ತಪ್ಪಿಸಿ
ಒಂದು ಚಾಕ್ಲೆಟ್'ನ ಆಸೆಗೆ ಕದ್ದು ಅಂಗಡಿಗೆ ಹೋಗಲು ದೈರ್ಯವಿಲ್ಲದವರಿಗೆ ತಿಂಡಿ supply ಮಾಡೋದು. ಹೀಗೆ ಮೆಲ್ಲನೆ ಧೈರ್ಯ ಅನ್ನೋದು ಚಿಗುರಿತು.
ಈಗೇನೆ ಮಳೆಗಾಲದ ಸಮಯ mostly ಆಟಿ(ಆಷಾಢ) ತಿಂಗಳು ಅನಿಸುತ್ತೆ, ಹಾಸ್ಟೆಲ್ನಲ್ಲಿ ಹೊಟ್ಟೆ ತಣ್ಣಗಾಗುವಷ್ಟು ಎಲ್ಲ ಸೌಕರ್ಯವಿದ್ದರು ಮತ್ತಿನ್ನೇನೋಬೇಕೆಂಬ ಹಂಬಲ.
ಅಂತೆಯೇ ರವಿವಾರದ ಬೆಳಗ್ಗಿನ ಗಂಜಿ ಊಟ ಮುಗಿಸಿ ನಮ್ಮ ಮೇಲಿನ ಮಹಡಿಯಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಹನಿಗಳನ್ನೇ ನೋಡುತ್ತಿದ್ದವರಿಗೆ ಹಲಸಿನ ಹಣ್ಣು ತಿನ್ನಬೇಕೆಂಬ ಆಸೆಯಾಯಿತು. ಹಾಸ್ಟೆಲ್ನ ಕೆಲವೊಂದು ಸೂಕ್ಷ್ಮ ಕಣ್ಣುಗಳನ್ನು ಹಾಗೂ ಕೆಲವು ಚಾಡಿಕೊರ ಹುಡುಗರ ಕಣ್ಣನ್ನು ತಪ್ಪಿಸಿ ಹಾಸ್ಟೆಲ್ನ ಬೇಲಿಯನ್ನು ಭೇದಿಸಿ ಕಾನರ್ಪದ ರಸ್ತೆಯಲ್ಲಿ ನಾಲ್ವರು ಹೆಜ್ಜೆ ಹಾಕಿದೆವು.
ನಾನು ರಕ್ಷಿತ್ ಹಾಗೂ ಇನ್ನಿಬ್ಬರು ಬಯಲು ಸೀಮೆಯವರು, ಸುಮಾರು ಒಂದು ಕಿಲೋಮೀಟರ್ ಮುಂದೆ ಸಾಗಿ ಕುರುಡ್ಯ ಬಸ್ಟ್ಯಾಂಡ್'ನ ಹತ್ತಿರ ಒಳ ರಸ್ತೆಯಲ್ಲಿ ನಡೆದುಕೊಂಡು ಹೋದೆವು. ಯಾವ ಮನೆಯವರ ಪರಿಚಯ ಕೂಡ ನಮಗಿಲ್ಲ. ಹಿಂಜರಿಕೆಯಿಂದಲೇ ಹೋಗಿ ಒಂದು ಮನೆಯಲ್ಲಿ "ಹಲಸಿನ ಹಣ್ಣು ಸಿಗಬಹುದೇ" ಎಂದು ಕೇಳಿದೆವು. ನಮ್ಮನ್ನು ಸಂಶಯದಿಂದಲೇ ನೋಡಿ "ಇಲ್ಲ" ಎಂಬ ಉತ್ತರದೊಂದಿಗೆ ಕಳುಹಿಸಿದರು. ಮತ್ತೊಂದು ಮನೆಯಲ್ಲಿ ಕೇಳಿದೆವು. ಆ ಮನೆಯವರು ಮಾತ್ರ ನಗುತ್ತಲೇ ಮನೆಯ ಹಿಂಬಂದಿಯಲ್ಲಿರುವ ಹಲಸಿನ ಮರಕ್ಕೆ ಹತ್ತಿ ಒಬ್ಬನಿಗೆ ಹೊತ್ತುಕೊಂಡು ಹೋಗಲು ಕಷ್ಟ ಆಗುವಷ್ಟು ದೊಡ್ಡ ಹಲಸಿನ ಹಣ್ಣನ್ನು ನೀಡಿದರು.
ನಮ್ಮ ಮೊಗದಲ್ಲಿ colgate ಜಾಹಿರಾತು!.
"ನೀವು ಎಲ್ಲಿಯವರು?" ಎಂದು ಕೇಳಿದರು. ನಾವು ಹಾಸ್ಟೆಲ್'ನವರು ಎಂದು ಮಾತ್ರ ಹೇಳಲಿಲ್ಲ. "ನಾವು ಇಲ್ಲೇ ದೇವಿಗುಡಿಯವರು" ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆವು.
ಈಗ ಅನಿಸುತ್ತಿದೆ, ನಮ್ಮ ವೇಷ ಭೂಷಣ ನೋಡಿ ಅವತ್ತು ಅವರಿಗೆ ಖಂಡಿತ ನಾವು ಹಾಸ್ಟೆಲ್ ನವರು ಎಂದು ಗೊತ್ತಾಗಿರಬಹುದು!!.
ಅಷ್ಟು ದೊಡ್ಡ ಹಲಸಿನ ಹಣ್ಣನ್ನು ನಾಲ್ಕು ಜನ ಒಬ್ಬ ಸುಸ್ತಾದಗ ಇನ್ನೊಬ್ಬ ಹೆಗಲು ಕೊಡುತ್ತ ಎತ್ತಿಕೊಂಡು ಬಂದೆವು. ಯಾಕೆಂದರೆ ಅವಾಗಿನ ವಯಸ್ಸಿಗೆ, ಹಾಗೂ ಶಕ್ತಿಗೆ ಹಲಸಿನ ಹಣ್ಣಿನ ಗಾತ್ರ ಮೀರಿಸಿತ್ತು!. ಹಲಸಿನ ಹಣ್ಣೆನೋ ಸಿಕ್ಕಿತು. ಆದರೆ ಅದನ್ನು ಹೇಗೆ ಕುಯ್ದು ಭಾಗ ಮಾಡೋದು, ಅತ್ತ ಹಾಸ್ಟೆಲ್'ಗೆ ತೆಗೆದುಕೊಂಡು ಹೋಗುವ ಹಾಗೆನು ಇಲ್ಲ. ಇತ್ತ ಇದನ್ನು ಹೇಗೆ ಕುಯ್ಯೊದು ಎಂದು ತಲೆ ಕೇರ್ಕೊಳ್ಳುವ ಆಗೆ ಆಯಿತು. ಅಲ್ಲೇ ಬಸ್ಟ್ಯಾಂಡ್ ಹತ್ತಿರ ನಿರ್ಜನ ಪ್ರದೇಶದಲ್ಲಿ ಹಲಸಿನ ಹಣ್ಣನ್ನು, ಒಬ್ಬೊಬ್ಬರ ಸಾಹಸ ಪ್ರದರ್ಶನದಂತೆ ಕಲ್ಲಿನ ಮೇಲೆ ಎತ್ತಿ ಹಾಕಿದೆವು. ಹಲಸಿನ ಹಣ್ಣು 'ತುಳುವೇ' ತಳಿಯಾಗಿದ್ದರೆ ಸುಲಭದಲ್ಲಿ ಭಾಗ ಮಾಡಬಹುದಿತ್ತು. ಆದರೆ ಇದು 'ಬರ್ಕೆ' (ಕನ್ನಡದಲ್ಲಿ ಬೇರೆ ಹೆಸರು ಇರಬಹುದು) ತಳಿಯದ್ದರಿಂದ ಹಾಗೇನೇ, ಇದು ಹೆಚ್ಚು ಹಣ್ಣು ಅಲ್ಲ ಇತ್ತ ಕಾಯಿಯು ಅಲ್ಲ ಎನ್ನುವ ಸ್ಥಿತಿಯಲ್ಲಿದ್ದುದ್ದರಿಂದ ಎರಡು ತೊಳೆ ಹಣ್ಣನ್ನು ತಿನ್ನಬೇಕಾದರೆ ಹರಸಾಹಸನೇ ಮಾಡಬೇಕಾಯಿತು. ಕಲ್ಲಿನ ಮೇಲೆ ಎತ್ತಿ ಹಾಕಿದ್ದ ಪರಿಣಾಮ ಹಣ್ಣು ನಜ್ಜುಗುಜ್ಜಾಗಿತ್ತು. ಅಷ್ಟೆಲ್ಲ ಕಷ್ಟಪಟ್ಟ ಪರಿಣಾಮವೋ ಅಥವಾ ಅಪರೂಪಕ್ಕೆ ನಾಲಗೆಗೆ ಸ್ಪರ್ಶಿಸಿದ ಪರಿಣಾಮವೋ ಏನೋ!. ತುಂಬಾ ರುಚಿಯಾಗಿತ್ತು. ಈ ಸಾಹಸದ ನಡುವೆ ನಾಲ್ವರು ಕೂಡ ಮಳೆಗೆ ಚೆನ್ನಾಗಿ ನೆನೆದು ಹೋಗಿದ್ದೆವು. ಆಗಲೇ ಸೂರ್ಯ ನೆತ್ತಿಯ ಮೇಲೆ ಆಗೊಮ್ಮೆ ಈಗೊಮ್ಮೆ ಮೋಡಗಳ ಮರೆಯಲ್ಲಿ ಇಣುಕುತ್ತಿದ್ದ. ನಾವು ಮೆಲ್ಲಗೆ ತಂತಿ ಬೇಲಿಯನ್ನು ಸರಿಸಿ ಯಾರಿಗೂ ಸಂಶಯ ಬಾರದಂತೆ ಇಲಿಗಳು ಜಾಗ್ರತೆಯಾಗಿ ಬಿಲ ಸೇರಿದಂತೆ ಹಾಸ್ಟೆಲ್ ಸೇರಿಕೊಂಡೆವು.
(ಧೋ ಎಂದು ಸುರಿಯುತ್ತಿದ್ದ ಮಳೆಯ ಹನಿಯನ್ನು ನೋಡುತ್ತಿದ್ದಾಗ ಇಷ್ಟೆಲ್ಲ Flashback ನೆನಪಾಯಿತು.)
#HostelLife

Comments
Post a Comment