ಬೆಳಗ್ಗೆನೇ ನಿತ್ಯ ದಿನಚರಿಗಳನ್ನು ಮುಗಿಸಿ, ಕ್ಯಾಮೆರಾ ಬ್ಯಾಗ್ ಎತ್ತಿಕೊಂಡು ಕಂಟೋನ್ಮೆಂಟ್ ನಿಂದ ಹೊರಗೆ ಬಂದೆ. ಅಲ್ಲಿಂದ ಸೀದಾ ಬಂದವ ಪ್ರತಿ ರಜೆಯ ದಿನ ಚಾ ಕುಡಿವ ಸ್ಥಳಕ್ಕೆ ಬಂದು, ಒಂದು ಚಹಾದ ಜೊತೆಗೆ ಹೂಗ್ಲಿ ನದಿಯ ಹರಿವನ್ನು ನೋಡುತ್ತಾ ಇವತ್ತು ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಾ ಗೂಗಲ್ ಮಾಡಿದಾಗ ಮೊದಲೇ Note ಮಾಡಿಟ್ಟುಕೊಂಡಿದ್ದ ಬಿರ್ಲಾ ಮಂದಿರ ಕಾಣಿಸಿತು.
ನಾನಿದ್ದ ಸ್ಥಳದಿಂದ ನಡೆದುಕೊಂಡು ಹೋಗಲು ಎಷ್ಟು ಕಿಮೀ ಇದೆ ಎಂದು ಹುಡುಕಿದಾಗ 8 ಕಿಮೀ ತೋರಿಸಿತು. ಅಲ್ಲಿಂದ ಸೀದಾ ವೇಗವಾಗಿ ಹೆಜ್ಜೆ ಯ ಮೇಲೊಂದು ಹೆಜ್ಜೆ ಹಾಕುತ್ತಾ ಹೊರಟೆ. ಯಾಕಂದ್ರೆ 11ಕ್ಕೆ ದೇವಸ್ಥಾನ ಕ್ಲೋಸ್ ಆಗುತ್ತೆ ಎನ್ನುವ ಮಾಹಿತಿ ಕೂಡ ಗೂಗಲ್ ನಲ್ಲಿ ತೋರಿಸ್ತಾ ಇತ್ತು. ಇನ್ನು ನನ್ಯಾವತ್ತು ಸುತ್ತಾಡಲು ಪ್ರಾಥಮಿಕವಾಗಿ ಆಯ್ಕೆ ಮಾಡುವ ಸ್ಥಳ ಯಾವುದೆಂದರೆ, ನಮಗೆ ನಡೆದುಕೊಂಡು ಹೋಗಲು ಸಾಧ್ಯವಿರುವಂತಹ ಸ್ಥಳಗಳು, ಯಾಕಂದ್ರೆ ನಡೆದುಕೊಂಡು ಹೋಗುವಾಗ ನಮಗೆ ಬೇಕಾದ ಹಾಗೆ ಫೋಟೋವನ್ನು ಸೆರೆ ಹಿಡಿಯಬಹುದು ಹಾಗೂ ಏಕಾಂಗಿಯಾಗಿ ನಡೆದುಕೊಂಡು ಹೋಗುವ ಒಂದು ಮಜನೆ ಇದ್ಯಾಲ್ವ ಅದೊಂದು ನಶೆನೆ ಬೇರೆ ಮರ್ರೆ.
ಅಂತೂ 10 ಗಂಟೆ ಆಗುವಷ್ಟರಲ್ಲಿ ಬಿರ್ಲಾ ಮಂದಿರಕ್ಕೆ ತಲುಪಿದೆ. ಮೊದಲನೆಯದಾಗಿ ಅಲ್ಲಿನ ಸಿಬ್ಬಂದಿ ನಗು ಮೊಗದೊಂದಿಗೆ ಸ್ವಾಗತಿಸಿದರೆ ಎರಡನೆಯದಾಗಿ ಇಲ್ಲಿ "ಯಾವುದೇ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲು ಅವಕಾಶ ಇಲ್ಲ" ಎಂದರು. ಇನ್ನು ಈ ದೇವಸ್ಥಾನದ ಬಗ್ಗೆ ಹೇಳಬೇಕೆಂದರೆ, ಈ ದೇವಸ್ಥಾನವನ್ನು ಬಿರ್ಲಾ ಕುಟುಂಬದವರು ಕಟ್ಟಿಸಿದ್ದು. 1970 ರಲ್ಲಿ ದೇವಸ್ಥಾನದ ಕೆಲಸ ಪ್ರಾರಂಭಿಸಿ ಸುದೀರ್ಘ 26 ವರ್ಷದ 1996 ರಲ್ಲಿ ಉದ್ಘಾಟಿಸಿದರು. ಕೋಲ್ಕತಾದಲ್ಲಿ ಒಂದೆರಡು ದೇವಸ್ಥಾನಗಳಿಗೆಲ್ಲ ಹೋಗಿದ್ದೇನೆ ಆದರೆ ಇಲ್ಲಿಯಷ್ಟು ವವ್ಯವಸ್ಥಿತವಾಗಿ ಇಲ್ಲಿನ ಯಾವ ದೇವಸ್ಥಾನಗಳಲ್ಲಿಯೂ ಕಂಡಿಲ್ಲ. ಈ ದೇವಸ್ಥಾನದ ವಾಸ್ತು ಶಿಲ್ಪ ಭುವನೇಶ್ವರ್ ರಲ್ಲಿರುವ ಲಿಂಗರಾಜ ದೇವಸ್ಥಾನ ಸ್ಫೂರ್ತಿ ಪಡೆದು ಕಟ್ಟಿಸಲಾಗಿದೆ ಎಂದು ಹೇಳಲಾಗುತ್ತೆ.
ಈ ದೇವಸ್ಥಾನದಲ್ಲಿ ಪ್ರಮುಖವಾಗಿ ರಾಧೆಕೃಷ್ಣ, ಗಣಪತಿ, ಹನುಮ, ದುರ್ಗಾದೇವಿ ಹಾಗೂ ಶಿವನನ್ನು ಆರಾಧಿಸುತ್ತಾರೆ. ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಹಾಗೂ ಪ್ರಸಾದವನ್ನು ಸ್ವೀಕರಿಸಿ ಕೃತಜ್ಞತ ಭಾವದೊಂದಿಗೆ ದೇವಸ್ಥಾನದಿಂದ ಹೊರಗೆಬಂದೆ.
ಅಷ್ಟೋತ್ತಿಗಗಾಳೇ ಸಮಯ 11 ಆಗಿತ್ತು. ದೇವಸ್ಥಾನದಿಂದ ಹೊರಗೆ ಬಂದಾಗ ಮೊದಲು ಮನಸ್ಸಿನಲ್ಲಿ ಮೂಡಿದ್ದು ಈ ಬಿರ್ಲಾ ಕುಟುಂಬದರಿಗೊಂದು ತುಂಬು ಹೃದಯದಿಂದ ಕೃತಜ್ಞತೆ. ಯಾಕಂದ್ರೆ ಅಷ್ಟೊಂದು ಚಂದ ಇದೆ ಮರ್ರೆ ಈ ದೇವಸ್ಥಾನ. ಹಾಗೂ ಇಂತಹ ದೇವಸ್ಥಾನಗಳು ಕೂಡ ಭಾರತಕ್ಕೆ ತುಂಬಾ ಅಗತ್ಯ ಕೂಡ ಇದೆ. ಇನ್ನೇನು ಹೊರಡಬೇಕು ಅನ್ನುವ ಅಷ್ಟರಲ್ಲಿ ದಡಬಡ ಸದ್ದು ಮಾಡುತ್ತ ಟ್ರಮ್ ಬಸ್ಸೊಂದು ಕಣ್ಣ ಮುಂದೆ ಹಾದು ಹೋಯಿತು.
ಅದರ ಒಂದೆರಡು ಫೋಟೋಗಳನ್ನು ಸೆರೆ ಹಿಡಿಯುತ್ತ ಮತ್ತೆ ಬಂದ ದಾರಿಯ ಗೆರೆಯನ್ನು ಅಳಿಸುತ್ತ ಕಂಟೋನ್ಮೆಂಟ್ ಕಡೆಗೆ ಹೆಜ್ಜೆ ಹಾಕಿದೆ. ನಮ್ಮ ಕ್ಯಾಂಪಸ್ ಗೆ ತಲುಪುವಷ್ಟರಲ್ಲಿ 20 km ಕೂಡ ಪೂರ್ತಿಯಾಯಿತು.





Spr
ReplyDelete